Breaking News

ಉಪ್ಪಿನಂಗಡಿ:ಶ್ರೀ ಕ್ಷೇತ್ರ ತಿರುಪತಿಯ ವಿಗ್ರಹಗಳ ಪುರಪ್ರವೇಶ

Puttur_Advt_NewsUnder_1
Puttur_Advt_NewsUnder_1

uppinangad

ಉಪ್ಪಿನಂಗಡಿ: ಶ್ರೀ ಕ್ಷೇತ್ರ ತಿರುಪತಿಯಿಂದ ಆಗಮಿಸಿದ ಶ್ರೀ ಶ್ರೀನಿವಾಸ, ಶ್ರೀ ದೇವಿ ಹಾಗೂ ಭೂದೇವಿಯ ವಿಗ್ರಹಗಳು ಮಂಗಳವಾರ ಸಂಜೆ ಉಪ್ಪಿನಂಗಡಿಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನಕ್ಕೆ ಪುರಪ್ರವೇಶ ಮಾಡಿದವು.

ಈ ಸಂದರ್ಭ ದೇವಾಲಯದ ವತಿಯಿಂದ ಉಪ್ಪಿನಂಗಡಿಯ ರಥಬೀದಿಯಲ್ಲಿ ವಿಗ್ರಹಗಳನ್ನು ಅದ್ದೂರಿಯಾಗಿ ಸ್ವಾಗತಿಸಿ, ಶ್ರೀ ಲಕ್ಷ್ಮೀವೆಂಕಟ್ರಮಣ ಸನ್ನಿಧಿಗೆ ಮೆರವಣಿಗೆ ಯಲ್ಲಿ ತೆಗೆದುಕೊಂಡು ಹೋಗಿ ದೇವಾಲಯದ ಮುಖ್ಯ ಅರ್ಚಕ ಕೆ. ಅನಂತ್ ಭಟ್ ಹಾಗೂ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಉಪ್ಪಿನಂಗಡಿಯಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಾಲಯದ ಆಡಳಿತ ಮೊಕ್ತೇಸರ ಕರಾಯ ರಾಮಚಂದ್ರ ನಾಯಕ್, ಮೊಕ್ತೇಸರರಾದ ಶ್ರೀಕಾಂತ್ ಭಟ್, ಪ್ರಭಾತ್ ಭಟ್, ದಾಮೋದರ ಪ್ರಭು, ಎಚ್. ವಾಸುದೇವ ಪ್ರಭು, ಕ್ಷೇತ್ರ ಪುರೋಹಿತ ನರಸಿಂಹ ಭಟ್, ಪ್ರಮುಖರಾದ ಕೆ. ಗಣೇಶ್ ಭಟ್, ರಾಘವೇಂದ್ರ ನಾಯಕ್, ಎಸ್. ಮಂಜುನಾಥ್ ಭಟ್, ರಾಜೇಶ್ ಪೈ, ಯು. ವೇಣುಗೋಪಾಲ್ ಭಟ್, ಎಂ.ಪ್ರಕಾಶ್ ಭಟ್, ಉಮೇಶ್ ಶೆಣೈ ಎನ್., ಯು. ನಾಗರಾಜ್ ಭಟ್, ಪ್ರಸಾದ್ ಶೆಣೈ, ಸತೀಶ್ ಕಾಮತ್, ಸಾಹುಕಾರ್ ಗಣೇಶ್ ಭಟ್, ಸತೀಶ್ ಕಿಣಿ, ಹರೀಶ ಕಿಣಿ, ಅಚ್ಯುತ ಪಡಿಯಾರ್, ರವಳನಾಥ ಪ್ರಭು,  ನರಸಿಂಹ ಪಡಿಯಾರ್, ಗೋಕುಲ್‌ದಾಸ್ ಭಟ್, ಪ್ರದೀಪ್ ನಾಯಕ್, ಗಿರೀಶ್ ನಾಯಕ್, ಶ್ರೀ ದೇವಾಲಯದ ವ್ಯವಸ್ಥಾಪಕ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.

ಉಪ್ಪಿನಂಗಡಿಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ವೈಶಾಖ ಶುದ್ಧ ದಶಮಿಯಂದು ‘ಶ್ರೀ ಕಲ್ಯಾಣೋತ್ಸವ’ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಶ್ರೀ ಕ್ಷೇತ್ರ ತಿರುಪತಿಯಿಂದ ವಿಗ್ರಹಗಳನ್ನು ತಂದು ಪೂಜಿಸಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.