Breaking News

ಬೀರ‍್ನಹಿತ್ಲು ಶಾಲೆಯಲ್ಲಿ ಜೀವನ ಕೌಶಲ್ಯಗಳು ಕಾರ‍್ಯಾಗಾರ

Puttur_Advt_NewsUnder_1
Puttur_Advt_NewsUnder_1

beernahittluಪುತ್ತೂರು: ಸಂತ ಫಿಲೋಮಿನಾ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಸ.ಹಿ.ಪ್ರಾ. ಶಾಲೆ ಬೀರ‍್ನಹಿತ್ಲು, ಜನಶಿಕ್ಷಣ ಟ್ರಸ್ಟ್ ಪುತ್ತೂರು ಹಾಗೂ ಬನ್ನೂರು ಗ್ರಾ.ಪಂ. ಇದರ ಸಂಯುಕ್ತ ಆಶ್ರಯದಲ್ಲಿ ಬೀರ‍್ನಹಿತ್ಲು ಶಾಲೆಯಲ್ಲಿ ’ಜೀವನ ಕೌಶಲ್ಯ ಗಳು’ ತರಬೇತಿ ಕಾರ‍್ಯಾಗಾರ ನಡೆಯಿತು.

ಜನಶಿಕ್ಷಣ ಟ್ರಸ್ಟ್‌ನ ಮಹಿಳಾ ಸಹಾಯವಾಣಿ ಕೌಟುಂಬಿಕ ಸಲಹೆಗಾರ ಮೀನಾಕ್ಷಿ ಉದ್ಘಾಟಿಸಿದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ವಿಮಲ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಪ್ರತಿಭಾ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಬೀರ‍್ನಹಿತ್ಲು ಸ.ಹಿ.ಪ್ರಾ. ಶಾಲಾ ಶಿಕ್ಷಕರುಗಳಾದ ಶ್ರೀಕಾಂತ್ ನಾಯಕ್ ಮತ್ತು ಜೂಲಿಯಾನ್ ಭಾಗವಹಿಸಿದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಪ್ರಿಯದರ್ಶಿನಿ ಕೆ. ಸ್ವಾಗತಿಸಿ, ಅನಿಲ್ ಜೋಸೆಫ್ ವಂದಿಸಿದರು. ಸ್ವಾತಿ ಕೆ.ಯು. ಕಾರ್ಯಕ್ರಮ ನಿರೂಪಿಸಿ ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.