ಕಾಣಿಯೂರು ಗ್ರಾಮೀಣ ವಿಕಾಸ ಬ್ಯಾಂಕ್‌ನ ಪ್ರಬಂಧಕ ಉದಯಶಂಕರ್ ವರ್ಗಾವಣೆ- ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

 

kaniyooru-1ಕಾಣಿಯೂರು: ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಬ್ಯಾಂಕಿಂಗ್ ವ್ಯವಹಾರ ಮಾಡಲೇಬೇಕಾದ ಅನಿವಾರ್ಯತೆ ಇದೆ. ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಹಾರ ಮಾಡಲು ಬ್ಯಾಂಕಿನ ಒಳಗಡೆ ಇದ್ದಾಗ ಅನುಕೂಲಕರ ವಾತಾವರಣ ಮಾತ್ರ ವ್ಯವಹಾರಗಳು ಯಶಸ್ವಿಯಾಗಲು ಸಾಧ್ಯ ಎಂದು ಬೆಳಂದೂರು ಜಿ.ಪಂ ಕ್ಷೇತ್ರದ ಸದಸ್ಯೆ ಪ್ರಮೀಳಾ ಜನಾರ್ದನರವರು ಹೇಳಿದರು. ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಕಾಣಿಯೂರು ಶಾಖೆಯಲ್ಲಿ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿ ಹಾವೇರಿಗೆ ಭಡ್ತಿ ಹೊಂದಿ ವರ್ಗಾವಣೆಗೊಂಡ  ಉದಯಶಂಕರ್ ಇವರಿಗೆ ಕಾಣಿಯೂರು ಗ್ರಾ.ಪಂ ಮತ್ತು ಊರಿನ ನಾಗರಿಕರ ವತಿಯಿಂದ ಕಾಣಿಯೂರು ಗ್ರಾ.ಪಂ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗರವರು ಉತ್ತಮ ಸೇವೆ ಒದಗಿಸಿ ಉತ್ತಮ ಮೇನೆಜರ್ ಎಂಬ ಕೀರ್ತಿ ಉದಯಶಂಕರ್‌ರವರದ್ದಾಗಿದೆ. ಅವರು ಜೀವನದಲ್ಲಿ ಮುಂದೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿ, ಅನಿಸಿಕೆ ವ್ಯಕ್ತಪಡಿಸಿದ ಪ್ರಬಂಧಕ ಉದಯಶಂಕರ್‌ರವರು ನನ್ನ ಪ್ರಾಮಾಣಿಕ ಸೇವೆಯಲ್ಲಿ ಯಶಸ್ಸು ಕಾಣಲು ಇಲ್ಲಿಯ ಜನರ ಪ್ರೀತಿ ವಾತ್ಸಲ್ಯದಿಂದ ಕೂಡಿದ ವ್ಯವಹಾರಗಳಿಂದ ಸಾಧ್ಯವಾಗಿದೆ. ಯಾವುದೇ ಊರಿಗೆ ಹೋದರೂ ಇಲ್ಲಿಯ ಜನರನ್ನು ಮರೆಯಲಾರೆ ಎಂದರು. ಚಾರ್ವಾಕ ಕ್ಷೇತ್ರದ ತಾ.ಪಂ ಸದಸ್ಯೆ ಲಲಿತಾ ಈಶ್ವರ್, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಕಾಣಿಯೂರು ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ಮುಗರಂಜರವರು ಶುಭಹಾರೈಸಿದರು. ಕಾಣಿಯೂರು ಗ್ರಾ.ಪಂ ಸದಸ್ಯರಾದ ಗಣೇಶ್ ಉದನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸದಸ್ಯ ಸುರೇಶ್ ಓಡಬಾಯಿ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.