ವಿಟ್ಲ ಕುಲಾಲ ಸಂಘದಿಂದ ಸತ್ಯನಾರಾಯಣ ಪೂಜೆ

Puttur_Advt_NewsUnder_1
Puttur_Advt_NewsUnder_1

vittlaವಿಟ್ಲ: ಶ್ರದ್ಧೆ, ಭಕ್ತಿ, ನಿಷ್ಠೆ, ಪ್ರೀತಿಯಿಂದ ಮಾಡುವ ಕಾರ್ಯ ಕ್ಕೆ ಭಗವಂತನ ಅನುಗ್ರಹವಿರುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ದ.೪ರಂದು ವಿಟ್ಲ ಕುಲಾಲ ಸಂಘದ ವತಿಯಿಂದ ಮಹಿಳಾ ಘಟಕದ ಸಹಕಾರದೊಂದಿಗೆ ನಡೆದ ೧೮ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕೋತ್ಸವ ಧಾರ್ಮಿ ಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಕುಂಬಾರರ ಮಹಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು ರವರನ್ನು ಸನ್ಮಾನಿಸಲಾಯಿತು. ವಿಟ್ಲ ಕುಲಾಲ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ ಮಲೆತ್ತಡ್ಕ ಪುಣಚ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ಪುರಸಭೆ ಸದಸ್ಯ ಸದಾಶಿವ ಬಂಗೇರ, ಕೊಲ್ಯ ಕುಲಾಲರ ಸಂಘದ ಉಪಾಧ್ಯಕ್ಷ ಸಂಜೀವ ಸೋಮೇಶ್ವರ, ವಿಟ್ಲ ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ರೇವತಿ ರವೀಂದ್ರ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

ಸ್ವಜಾತಿ ಬಾಂಧವರ ಮಕ್ಕಳಿಗೆ ಪ್ರೋತ್ಸಾಹಧನ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸ ಲಾಯಿತು.

ರಮಾನಾಥ ವಿಟ್ಲ ಸ್ವಾಗತಿಸಿ, ಜಗದೀಶ್ ಕುಲಾಲ್ ವಿಟ್ಲ ವರದಿ ವಾಚಿಸಿದರು. ಮೀನಾಕ್ಷಿ ನಾರಾಯಣ ಪುಣಚ ಬಹು ಮಾನಿತರ ಪಟ್ಟಿ ವಾಚಿಸಿದರು. ದಿವಾಕರ ಕೋಡಿ ವಿಟ್ಲ ವಂದಿಸಿ, ಗೋಪಾಲಕೃಷ್ಣ ನೇರಳಕಟ್ಟೆ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.