Breaking News

ಸವಣೂರು ಸಿಎ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಉದಯ ರೈ ಮಾದೋಡಿ

Puttur_Advt_NewsUnder_1
Puttur_Advt_NewsUnder_1

udaya-rai-madodi

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಉದಯ ರೈ ಮಾದೋಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ದ.8 ರಂದು ಸಂಘದಲ್ಲಿ ಜರಗಿದ ಚುನಾವಣಾ ಪ್ರಕ್ರಿಯೆಯನ್ನು ಸಹಕಾರಿ ಸಂಘಗಳ  ಸಹಾಯಕ ನಿಬಂಧಕರ ಕಚೇರಿ ಪುತ್ತೂರು ಇದರ ನಿರೀಕ್ಷಕರಾದ ಅನುರಾಧರವರು ನಡೆಸಿಕೊಟ್ಟರು.

ಸಂಘದ ಅಧ್ಯಕ್ಷರಾಗಿದ್ದ  ಚೆನ್ನಪ್ಪ ಗೌಡ ನೂಜಿರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ  ಚುನಾವಣಾ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಉದಯ ರೈ ಮಾದೋಡಿರವರ ಹೆಸರನ್ನು ಸಂಘದ ನಿರ್ದೇಶಕ ತಾರಾನಾಥ ಕಾಯರ್ಗರವರು ಸೂಚಿಸಿ, ತಿಮ್ಮಪ್ಪ ಗೌಡ ಮುಂಡಾಳರವರು ಅನುಮೋದಿಸಿದರು.

ಸಂಘದ ನಿರ್ಗಮನ ಅಧ್ಯಕ್ಷ ಚೆನ್ನಪ್ಪ ಗೌಡ ನೂಜಿರವರು ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಸಲ್ಲಿಸಿ, ಮುಂದೆಯೂ ಸಂಘದ ಅಭಿವೃದ್ಧಿಯಲ್ಲಿ ಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿ, ನೂತನ ಅಧ್ಯಕ್ಷ ಉದಯ ರೈಯವರನ್ನು ಅಭಿನಂದಿಸಿದರು.

ಸಂಘದ ಉಪಾಧ್ಯಕ್ಷ ಕರುಣಾಕರ್ ಪೂಜಾರಿ ಪಟ್ಟೆರವರು ಮಾತನಾಡಿ ಸಹಕಾರಿ ಸಂಸ್ಥೆಗಳಲ್ಲಿ ಸವಣೂರು ಸಿ.ಎ.ಬ್ಯಾಂಕಿಗೆ ಅಗ್ರಗಣ್ಯ ಸ್ಥಾನ ಇದ್ದು, ಸಂಘದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿ. ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಸಂಘದ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡರವರು ಮಾತನಾಡಿ ಜನರ ಜೀವನಾಡಿಯಾಗಿರುವ ಸಹಕಾರಿ ಸಂಸ್ಥೆಯ ಉನ್ನತಿಗಾಗಿ ನಾವೆಲ್ಲ ಶ್ರಮಿಸುತ್ತಿದ್ದು, ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ರೈತಪರ ಕೆಲಸ ನಿರ್ವಹಣೆ- ಉದಯ ರೈ: ನೂತನ ಅಧ್ಯಕ್ಷ ಉದಯ ರೈ ಮಾದೋಡಿರವರು ಮಾತನಾಡಿ ಸಂಘದ ಆಡಳಿತ ಮಂಡಳಿ ಎಲ್ಲ ನಿರ್ದೇಶಕರುಗಳು ಮತ್ತು ಸಿಬ್ಬಂದಿವರ್ಗ ಹಾಗೂ ಸದಸ್ಯರುಗಳ ಸಹಕಾರವನ್ನು ಸದಾ ಬಯಸುತ್ತೇನೆ, ಸಂಘದ ಮೂಲಕ ರೈತ ಪರವಾದ ಕೆಲಸವನ್ನು ನಿರ್ವಹಿಸುತ್ತೇನೆ, ಮುಂದಿನ ದಿನಗಳಲ್ಲಿ ಸಂಸ್ಥೆಯ ಮೂಲಕ ಉತ್ತಮವಾದ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಸಂಘದ ನಿರ್ದೆಶಕರುಗಳಾದ ಗಣೇಶ್ ನಿಡ್ವಣ್ಣಾಯ, ಸೋಮನಾಥ ಕನ್ಯಾಮಂಗಲ, ನಾರಾಯಣ ಗೌಡ ಪೂವ, ನಿರ್ಮಲ ಕೇಶವ ಗೌಡ ಅಮೈ, ವೇದಾವತಿ ಕೆಡೆಂಜಿರವರುಗಳು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಸ್ವಾಗತಿಸಿ,ವಂದಿಸಿದರು.

ನೂತನ ಅಧ್ಯಕ್ಷರ ಪರಿಚಯ

ನೂತನ ಅಧ್ಯಕ್ಷ ಉದಯ ರೈ ಮಾದೋಡಿರವರು ಈ ಹಿಂದೆ ೨೦೦೯-೧೪ರ ತನಕ ೫ ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದು,ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ೨೦೧೯ರ ತನಕ ಕಾರ‍್ಯ ನಿರ್ವಹಣೆ ಮಾಡಲಿದ್ದಾರೆ, ಉದಯ ರೈರವರು ಜಿಲ್ಲಾ ಸಹಕಾರ ಭಾರತಿ ಮತ್ತು ಜಿಲ್ಲಾ ಜನತಾ ಬಜಾರ್‌ನ ಅಧ್ಯಕ್ಷರಾಗಿದ್ದು,  ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಅಡಳಿತ ಸಮಿತಿಯ ಕೋಶಾಧಿಕಾರಿ, ಅಗಳಿ ಶ್ರೀ ಸದಾಶಿವ ದೇವಸ್ಥಾನ ಅಡಳಿತ ಸಮಿತಿಯ ಸದಸ್ಯ, ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ಕಾರ‍್ಯನಿರ್ವಹಿಸುತ್ತಿರುವ ಇವರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮತ್ತು ಬೆಳಂದೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.