Breaking News

ದ.10: ಕಬಕ ಸರಕಾರಿ ಪದವಿಪೂರ್ವ ಕಾಲೇಜಿನ ದಶಮಾನೋತ್ಸವ, ಪ್ರೌಢಶಾಲಾ ವಾರ್ಷಿಕೋತ್ಸವ 

Puttur_Advt_NewsUnder_1
Puttur_Advt_NewsUnder_1

img_20161208_103147

ಪುತ್ತೂರು: ಕಬಕ ಸರಕಾರಿ ಪದವಿಪೂರ್ವ ಕಾಲೇಜಿನ ದಶಮಾನೋತ್ಸವ ಕಾರ‍್ಯಕ್ರಮ ದ. 10ರಂದು ಜರುಗಲಿದ್ದು, ಕಬಕ ಸರಕಾರಿ ಪ್ರೌಢಶಾಲಾ ವಾರ್ಷಿಕೋತ್ಸವವು ಜಂಟಿಯಾಗಿ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವರಾಮ ಕಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದಶಮಾನೋತ್ಸವದ ಅಂಗವಾಗಿ ಗ್ರಾ.ಪಂ ವ್ಯಾಪ್ತಿಯ ಯೋಧರಿಗೆ, ಮಾಜಿ ಯೋಧರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕಿ ಶಕುಂತಳಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಜಿ.ಪಂ ಸದಸ್ಯೆ ಶಯಾನ ಜಯಾನಂದ್, ತಾ.ಪಂ ಸದಸ್ಯೆ ದಿವ್ಯ ಪುರುಷೋತ್ತಮ ಗೌಡ, ಕಬಕ ಗ್ರಾ.ಪಂ ಅಧ್ಯಕ್ಷೆ ಪ್ರೀತಾ ಬಿ, ಸಹಾಯಕ ಕಮೀಷನರ್ ಡಾ. ರಘುನಂದನ ಮೂರ್ತಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಆರ್. ತಿಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶಾಬಾ, ಪ್ರೌಢಶಾಲಾ ಶಿಕ್ಷಕ ಸಫಿವುಲ್ಲಾ, ಕಾಲೇಜಿನ ಉಪನ್ಯಾಸಕ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.

ದಾನಿಗಳಿಂದ ಉತ್ತಮ ನಿರೀಕ್ಷೆಗೂ ಮಿಕ್ಕಿ ಸಹಕಾರ ಸಿಕ್ಕಿದೆ:

ಕಬಕ ಕಾಲೇಜಿನಲ್ಲಿ ಈಗಾಗಲೇ 116 ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜು ಮತ್ತು ಪ್ರೌಢಶಾಲೆ ತುಂಬಾ ಅನ್ಯೋನ್ಯತೆಯಿಂದ ನಡೆಯುತ್ತಿದ್ದು, ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಊರ ದಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಮುಂದೆ ಕಾಲೇಜಿಗೆ ಮೂಲಭೂತ ಸೌಕರ್ಯವಾಗಿ ಶೌಚಾಲಯ ಮತ್ತು 8 ಕೊಠಡಿಗಳ ಅಗತ್ಯವಿದೆ. ಪ್ರಸ್ತುತ ಪ್ರೌಢಶಾಲಾ ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಈಗಾಗಲೇ ಶಾಲೆಯ ರಸ್ತೆಗೂ ಡಾಮರೀಕರಣಕ್ಕೆ ಶಿಲಾನ್ಯಾಸ ಆಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತ ಎಂ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.