Breaking News

ಕಾಂಗ್ರೆಸ್ ನಡಿಗೆ – ಸುರಾಜ್ಯದ ಕಡೆಗೆ ; ದ.10ರಂದು ಪುತ್ತೂರಿನಲ್ಲಿ ಕಾರ್ಯಾಗಾರ, ಉಪನ್ಯಾಸ, ಸಂವಾದ 

Puttur_Advt_NewsUnder_1
Puttur_Advt_NewsUnder_1

img_20161208_111630

ಪುತ್ತೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಆಶ್ರಯದಲ್ಲಿ ಕಾಂಗ್ರೆಸ್ ನಡಿಗೆ – ಸುರಾಜ್ಯದ ಕಡೆಗೆ ಎಂಬ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವು ದ.10ರಂದು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಜರುಗಲಿದೆ ಎಂದು ರಾಜ್ಯ ಸಂಸದೀಯ  ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಹೇಳಿದರು.

ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಈ ಕಾರ್ಯಾಗಾರ ನಡೆಯುತ್ತಿದ್ದು, ಈಗಾಗಲೇ 4 ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಾಗಾರ ನಡೆದಿದ್ದು 5ನೇ ವಿಧಾನಸಭಾ ಕ್ಷೇತ್ರವಾಗಿ ಪುತ್ತೂರಿನಲ್ಲಿ ನಡೆಯಲಿದ್ದು, ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಾಗಾರ ಉದ್ಘಾಟಿಸಲಿದ್ದು, ಇವರ ಜೊತೆ ಸಚಿವ ಯು.ಟಿ.ಖಾದರ್ ಬೆಳಗ್ಗಿನಿಂದ ಸಂಜೆಯ ತನಕ ನಡೆಯುವ ಕಾರ್ಯಾಗಾರದಲ್ಲಿ ಪೂರ್ಣ ಮಟ್ಟದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ವಿಧಾನ ಪರಿಷತ್ ಸದಸ್ಯ ವಿ.ಆರ್ ಸುದರ್ಶನ್, ಮುಖ್ಯಮಂತ್ರಿಗಳ ಪತ್ರಿಕಾ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಸಂಶೋಧನೆ ಮತ್ತು ಸಿದ್ಧಾಂತ ವಿಭಾಗದ ಅಧ್ಯಕ್ಷರೂ ಶಿಕ್ಷಣ ತಜ್ಞ ಮತ್ತು ಸಾಹಿತಿ ಪ್ರೋ.ರಾಧಾಕೃಷ್ಣರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು ಕಾರ್ಯಾಗಾರ ನಡೆಸಲಿದ್ದಾರೆ ಎಂದ ಅವರು ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ವಸತಿ ಸಚಿವ ಕೃಷ್ಣಪ್ಪರವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಾಗಾರದ ವಿಷಯ:

ಕಾಂಗ್ರೆಸ್ ನಡೆದು ಬಂದ ಹಾದಿ ಸಿದ್ಧಾಂತ ಮತ್ತು ಪ್ರಸ್ತುತತೆ, ನುಡಿದಂತೆ ನಡೆದ ಸರಕಾರ, ಬಿಜೆಪ ಕೇಂದ್ರ ಸರಕಾರದಿಂದ ಮೋಸ ಹೋದ ಜನತೆ, ಪಕ್ಷ ಸಂಘಟನೆ ಮತ್ತು ಗೆಲುವಿನತ್ತ ಗುರಿಯ ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ. ಪ್ರತಿಯೊಂದು ಬೂತ್‌ನಿಂದ ಕನಿಷ್ಠ ಎರಡು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, 600 ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಆದರೆ ಉಮೇದುವಿನಿಂದ ಬಂದವರನ್ನು ಹಿಂದಕ್ಕೆ ಕಳುಹಿಸುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಬೆಳಿಗ್ಗೆ ಗಂಟೆ 9ಕ್ಕೆ ನೋಂದಾವಣೆ, 9.30ಕ್ಕೆ ಉದ್ಘಾಟನೆ, ಉಪಹಾರದ ಬಳಿಕ 2 ಕಾರ್ಯಾಗಾರ ನಡೆಯಲಿದೆ. ಮಧ್ಯಾಹ್ನದ ಊಟದ ಬಳಿಕ ಮತ್ತೆರಡು ಕಾರ್ಯಾಗಾರನಡೆಯಲಿದೆ. ಕಾರ್ಯಾಗಾರದ ಕೊನೆಯಲ್ಲಿ ಪ್ರಶ್ನೋತರಕ್ಕೆ ಅವಕಾಶವಿದೆ. ಸಂಜೆ ಗಂಟೆ ೫ಕ್ಕೆ ಸಮಾರೋಪ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.