Breaking News

ಪಡುಮಲೆ ಜಾತ್ರೋತ್ಸವ: ಉತ್ಸವ ಸಮಿತಿ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

padumaleಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಕುರಿತು ಉತ್ಸವ ಸಮಿತಿ ವತಿಯಿಂದ ಪೂರ್ವಭಾವಿ ಸಭೆಯು ಶ್ರೀ ದೇವಾಲಯದ ಸಭಾ ಭವನದಲ್ಲಿ ನಡೆಯಿತು.

ಆಡಳಿತಾಧಿಕಾರಿ  ರಾಧಾಕೃಷ್ಣ ಮಾತನಾಡಿ ಪಾರದರ್ಶಕ ಆಡಳಿತ ನಡೆಸಲು ವಾರ್ಷಿಕ ಜಾತ್ರೋತ್ಸವಕ್ಕೆ ಉತ್ಸವ ಸಮಿತಿ ರಚಿಸಿಸಲಾಗಿದೆ.  ಸಮಿತಿಯು ಊರಿನ ಎಲ್ಲಾ ಜನರ ವಿಶ್ವಾಸ ಪಡೆದು ಕೆಲಸ ಮಾಡಬೇಕು.ದೇವರ ಕೆಲಸದಲ್ಲಿ ಎಲ್ಲರೂ ಸಮಾನರು ಪರಸ್ಪರ ಸಹಕಾರ ಮನೋಭಾವನೆಯಿಂದ ವಾರ್ಷಿಕ ಜಾತ್ರೋತ್ಸವ ನಡೆಸೋಣ ಎಂದು ತಿಳಿಸಿದರು.

ಗ್ರಾ.ಪಂ.ಸದಸ್ಯರು ಹಾಗೂ ಉತ್ಸವ ಸಮಿತಿ ಅಧ್ಯಕ್ಷರೂ ಆದ ರವಿರಾಜ ರೈ ಸಜಂಕಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ  ಗ್ರಾಮದ ಎಲ್ಲಾ ಜನರ ವಿಶ್ವಾಸ ಪಡೆದು ದೇವರ ಉತ್ಸವವನ್ನು ಸಂಭ್ರಮದಿಂದ ನಡೆಸುವ ಕೇವಲ ಅಧ್ಯಕ್ಷರಿಂದ ಯಾವುದೇ ಕೆಲಸ ಸಾಧ್ಯವಿಲ್ಲ.  ಒಟ್ಟಾಗಿ ಸೇರಿದಾಗ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಾಧ್ಯ ಈ ನಿಟ್ಟಿನಲ್ಲಿ ತಮ್ಮಲ್ಲರ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಅರ್ಚಕ ಮಹಾಲಿಂಗ ಭಟ್, ಜಯಾರಾಜ್ ಶೆಟ್ಟಿ ಅಣಿಲೆ, ಗ್ರಾ .ಪಂ.ಅಧ್ಯಕ್ಷ ಕೇಶವ ಗೌಡ,  ಸತೀಶ್ ರೈ ಕಟ್ಟಾವು,ಶಿವರಾಮ ರೈ, ಸುಧಾಕರ ಶೆಟ್ಟಿ ಮಂಗಳಾದೇವಿ, ಸಂಜೀವ ಸಾಲಿಯಾನ್ ಅಣಿಲೆ, ಸುಬ್ರಹ್ಮಣ್ಯ ಭಟ್ ಪಾದೆಕರ್ಯ, ಕೃಷ್ಣಾನಂದ ಭಟ್ ಪಾದೆಕರ್ಯ, ಕೃಷ್ಣ ಮೂಲ್ಯ, ಮಾಲಿಂಗ  ಪಾಟಾಳಿ, ನಾರಾಯಣ ಆಚಾರ್ಯ, ಮಹಾಬಲ ಪೂಜಾರಿ ಹಿತ್ತಿಲು, ಕೃಷ್ಣ ರೈ ಕುದ್ಕಾಡಿ, ರೋಹಿತ್ ಮುಡಿಪಿನಡ್ಕ, ತ್ಯಾಂಪಣ್ಣ ಸಿಯಚ್, ಕೋಚಣ್ಣ ರೈ ಹಾಗೂ ಬಡಗನ್ನೂರು ಗ್ರಾಮ ಸಹಾಯಕ ಕೇಶವ ಗೌಡ, ನೆಟ್ಟಣಿಗೆ ಮೂಡ್ನೂರು ಗ್ರಾಮ ಸಹಾಯಕ ರಘನಾಥ ಪಾಟಾಳಿ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಸ್ವಾತಿಸಿ ಧನ್ಯವಾದ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.