ಬಿಳಿನೆಲೆ: ರಸ್ತೆ ಅಂಚಿನಲ್ಲಿ ಕಟ್ಟಡ ನಿರ್ಮಾಣ-ದೂರು ತಾ.ಪಂ.ಇಒ ವರದಿಗೆ ದೂರುದಾರರ ಆಕ್ಷೇಪ ಹಿನ್ನೆಲೆ; ಲೋಕಾಯುಕ್ತ ಪೊಲೀಸರಿಂದ ಮರು ಸರ್ವೆ

Puttur_Advt_NewsUnder_1
Puttur_Advt_NewsUnder_1

 

bileneleಕಡಬ: ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಕಟ್ಟಡವೊಂದು ರಸ್ತೆಯಂಚಿನಲ್ಲಿದೆ ಎಂಬ ದೂರಿಗೆ ಸಂಬಂಧಿಸಿದಂತೆ ತಾ.ಪಂ.ಇಒ ಸಲ್ಲಿಸಿರುವ ವರದಿಗೆ ದೂರುದಾರರು ಆಕ್ಷೇಪ ಸೂಚಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದ.8 ರಂದು ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಇಲಾಖೆ ಮೂಲಕ ಸರ್ವೆ ಕಾರ‍್ಯ ನಡೆಸಿದರು.

ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಬಿಳಿನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರು ನಿರ್ಮಿಸಿರುವ ಕಟ್ಟಡ ರಸ್ತೆ ಅಂಚಿನಲ್ಲಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ರಮೇಶ್ ವಾಲ್ತಾಜೆಯವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರು ತಾ.ಪಂ.  ಕಾರ‍್ಯನಿರ್ವಾಹಣಾಧಿಕಾರಿಗಳಿಂದ ವರದಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ತಾ.ಪಂ. ಕಾರ‍್ಯನಿರ್ವಾಹಣಾಧಿಕಾರಿಯವರು, 2014 ಜನವರಿ 23ರ ಸರಕಾರದ ಸುತ್ತೋಲೆಯಲ್ಲಿ ರಾಜ್ಯ ಹೆದ್ದಾರಿಯ ದಾಖಲಿತ ಭೂ ಗಡಿಯ ಅಂಚಿನಿಂದ ರಸ್ತೆಯು 6 ಮೀಟರ್ ಇರಬೇಕು ಎಂದು ಪರಿಷ್ಕೃತಗೊಂಡಿದ್ದು, ಈ ವಿವಾದಿತ ಕಟ್ಟಡವು ರಾಜ್ಯ ರಸ್ತೆಯ ಅಂಚಿನಿಂದ 7 ಮೀಟರ್ ದೂರದಲ್ಲಿ ಇದೆ ಎಂದು ಲೋಕಾಯುಕ್ತ ಪೊಲೀಸರಿಗೆ ವರದಿ ನೀಡಿದ್ದರು. ಆದರೆ ಈ ವರದಿಯು ಸರಿಯಾಗಿಲ್ಲ ಎಂದು ತಕರಾರು ತೆಗೆದು ಸರಿಯಾಗಿ ಮತ್ತೆ ಸರ್ವೆ ನಡೆಸುವಂತೆ ರಮೇಶ್ ವಾಲ್ತಾಜೆಯವರು ಲೋಕಾಯುಕ್ತರಿಗೆ ಮತ್ತೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತಕ್ಕೆ ವರದಿ ಸಲ್ಲಿಸಬೇಕಾಗಿರುವುದರಿಂದ ಲೋಕಾಯುಕ್ತ  ಇಲಾಖೆ ಅಧಿಕಾರಿಗಳ ತಂಡ ದ.೮ರಂದು ಕಡಬ ಕಂದಾಯ ಅಧಿಕಾರಿಗಳ ಸಹಕಾರದೊಂದಿಗೆ ಸರ್ವೆ ಇಲಾಖೆಯಿಂದ ಸರ್ವೆ ಕಾರ‍್ಯ ನಡೆಸಿದೆ. ಈ ಸಂದರ್ಭದಲ್ಲಿ ಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಎಸ್. ವಿಜಯ ಪ್ರಸಾದ್, ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಲೋಕಾಯುಕ್ತ ಸಿಬಂದಿಗಳಾದ ಅಬ್ದುಲ್ ಸಲೀಂ, ನವೀನ್ ಕುಮಾರ್, ಗಿರೀಶ್ ಕುಮಾರ್, ದೇವಯ್ಯ, ತಾ.ಪಂ. ಮುಖ್ಯ ಕಾರ‍್ಯನಿರ್ವಾಹಣಾಧಿಕಾರಿ ಜಗದೀಶ್, ಕಡಬ ಭೂ ಮಾಪನ ಇಲಾಖಾ ಪರ‍್ಯಾವೇಕ್ಷಕ ಪ್ರಕಾಶ್, ಭೂ ಮಾಪಕ ಮಹೇಶ್, ಗ್ರಾಮಕರಣಿಕ  ಶ್ರೀರಾಜ್, ಗ್ರಾಮ ಸಹಾಯಕ ಶ್ರೀನಿವಾಸ, ಬಿಳಿನೆಲೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಕೀರ್ತಿ ಪ್ರಸಾದ್, ಗುಮಾಸ್ತ ಶೇಷಪ್ಪ, ದೂರುದಾರ ರಮೇಶ್ ವಾಲ್ತಾಜೆ, ಕಟ್ಟಡದ ಮಾಲಕ ಸುಧೀರ್ ಕುಮಾರ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.