’ಕಿಲ್ಲೆ ಮೈದಾನದಲ್ಲಿ ಸೋಮವಾರ ಸಂತೆಗೆ ಅವಕಾಶ ಕೊಡಿ’ ಎಪಿಎಂಸಿ ಸಂತೆ ವ್ಯಾಪಾರಸ್ಥರಿಂದ ಪೌರಾಯುಕ್ತರಿಗೆ ಮನವಿ

 

kille8ನೇ ಬಾರಿ ನಗರಸಭೆಗೆ ಕೊಡುವ ಮನವಿ

 ಆದಿತ್ಯವಾರ ಸಂತೆ ಬೇಡ, ಸೋಮವಾರವೇ ಬೇಕು

 ಕಿಲ್ಲೆ ಮೈದಾನದ ಒಳಗೆ ಮಾತ್ರ ಸಂತೆಗೆ ಅವಕಾಶ ಕೊಡಿ

 ಮೈದಾನ ಬಿಟ್ಟು ಹೊರಗೆ ವ್ಯಾಪಾರ ನಡೆಸಿದರೆ ನಾವೇ ಜವಾಬ್ದಾರರು

ಪುತ್ತೂರು: ಕಿಲ್ಲೆ ಮೈದಾನದಿಂದ ಸಂತೆ ಎಪಿಎಂಸಿಗೆ ಸ್ಥಳಾಂತರವಾದ ಮೇಲೆ ನಮಗೆ ನಷ್ಟ ಉಂಟಾಗಿದ್ದು ಇದೀಗ ಮತ್ತೆ ಕಿಲ್ಲೆ ಮೈದಾನದಲ್ಲಿ  ಸಂತೆ ನಡೆಸುವ ಕುರಿತು ಚರ್ಚೆಗಳು ನಡೆಯುತ್ತಿದೆ. ಜೊತೆಗೆ ಆದಿತ್ಯವಾರ ಸಂತೆ ನಡೆಸುವ ವಿಚಾರ ಕೇಳಿ ನಮಗೆ ತೀರಾ ಅಘಾತವಾಗಿದೆ. ಈ ನಿಟ್ಟಿನಲ್ಲಿ ನಮಗೆ ಕಿಲ್ಲೆ ಮೈದಾನದಲ್ಲಿ ಆದಿತ್ಯವಾರದ ಬದಲು ಸೋಮವಾರ ಸಂತೆ ನಡೆಸಲು ಅವಕಾಶ ಕೊಡಿ ಎಂದು ಎಪಿಎಂಸಿ ಸಂತೆ ವ್ಯಾಪಾರಸ್ಥರು ದ.8 ರಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರಿಗೆ ಮನವಿ ನೀಡಿದ್ದಾರೆ.

ಆದಿತ್ಯವಾರ ಸಂತೆ ಮಾಡಿದಲ್ಲಿ ಜನರ ಸಂಖ್ಯೆಯು ಕಡಿಮೆ ಆಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಎಲ್ಲಾ ಕಚೇರಿ, ಇಲಾಖೆಗಳಿಗೆ ರಜೆ ಇರುವುದರಿಂದ ಸಂತೆಗೆ ಆದಿತ್ಯವಾರ ಜನರು ಬರುವುದಿಲ್ಲ. ಸೋಮವಾರವೇ ಸಂತೆಗೆ ಕಿಲ್ಲೆ ಮೈದಾನದ ಒಳಗೆ ಅವಕಾಶ ಕೊಡಿ ಯಾವುದೇ ಕಾರಣಕ್ಕೂ ಕಿಲ್ಲೆ ಮೈದಾನದಿಂದ ಹೊರಗೆ ವ್ಯಾಪಾರ ನಡೆಸಲು ನಾವು ಬಿಡುವುದಿಲ್ಲ.  ಎಲ್ಲಿಯಾದರೂ ಹೊರಗೆ ವ್ಯಾಪಾರ ಮಾಡಿದ್ದು ಕಂಡು ಬಂದರೆ ನಾವೇ ಜವಾಬ್ದಾರಿ ವಹಿಸುತ್ತೇವೆ ಎಂದು ಪೌರಾಯುಕ್ತರಿಗೆ ಮನವಿ ಮಾಡಿದ ವರ್ತಕರು ಸಂತೆ ವಿಚಾರದಲ್ಲಿ ನಾವು ಇದು 8 ನೇ ಬಾರಿ ಕೊಡುವ ಮನವಿ ಎಂದರು.  ಸಂತೆ ವ್ಯಾಪಾರಸ್ಥರಾದ ವಸಂತ ಶಾಂತಿನಗರ, ಡಿ.ಕೆ.ಹಮೀದ್, ಮಂಜುನಾಥ್, ಖಾದರ್, ರವೂಫ್, ಸೋಮಣ್ಣ , ಫಕೀರಪ್ಪ, ಶೋಬಾ, ಇರ್ಷಾದ್, ಶರೀಫ್, ಅಬ್ದುಲ್, ಹಮೀದ್, ಬಶೀರ್, ಖಲೀಲ್, ಬಾಬು, ಮುಸ್ತಾಕ್, ಮೋಹನ್‌ದಾಸ್, ಬಿ.ಆರ್ ರಾಜು, ಚಂದು, ಅಮಿನುದ್ದೀನ್, ಯೋಗಾಶೆಟ್ಟಿ, ಮೊಹಮ್ಮದ್ ಹಸನ್ ಸೇರಿದಂತೆ ಸುಮಾರು 30 ಮಂದಿ ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.

ಆದಿತ್ಯವಾರ ಸಂತೆಗೆ ತರಕಾರಿ ಸಿಗುವುದಿಲ್ಲ

ಪುತ್ತೂರು ಸಂತೆಗೆ ಚಿಕ್ಕಮಗಳೂರು, ಮೈಸೂರು, ಪಿರಿಯಾಪಟ್ಟಣದಿಂದ ತರಕಾರಿ ಬರುತ್ತದೆ. ಆದರೆ ಶನಿವಾರ ಅಲ್ಲಿ ರಜೆ ಇರುವುದರಿಂದ ಆದಿತ್ಯವಾರ ಪುತ್ತೂರಿಗೆ ತರಕಾರಿ ಲೋಡ್ ಬರುವುದಿಲ್ಲ. ಇದು ಒಂದು ಸಮಸ್ಯೆ ಆದರೆ ಇನ್ನೊಂದು ಕಡೆ ರಜೆ ಆಗಿರುವುದರಿಂದ ಜನರು ಕೂಡಾ ಸಂತೆಗೆ ಬರುವುದಿಲ್ಲ ಎಂದು ಈ ಹಿಂದೆ ಕಿಲ್ಲೆ ಮೈದಾನದಲ್ಲಿ ವ್ಯಾಪಾರ ನಡೆಸಿ ಇದೀಗ ಎಪಿಎಂಸಿಯಲ್ಲಿ ಪ್ರಸ್ತುತ ತರಕಾರಿ ವ್ಯಾಪಾರ ನಡೆಸುತ್ತಿರುವ ಫಯಾಜ್‌ರವರು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.