ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ; ನೆಲ್ಯಾಡಿಯಲ್ಲಿ ಪೂರ್ವಭಾವಿ ಸಭೆ 25ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ-ಬಾಣಜಾಲು

Puttur_Advt_NewsUnder_1
Puttur_Advt_NewsUnder_1

 

ನೆಲ್ಯಾಡಿ: ’ಎತ್ತಿನಹೊಳೆ ವಿರೋಧಿಸಿ, ಜೀವನದಿ ನೇತ್ರಾವತಿ ಉಳಿಸಿ’ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ದ.10ರಂದು ಅಪರಾಹ್ನ ನೆಲ್ಯಾಡಿಗೆ ಆಗಮಿಸಲಿದ್ದು, ಈ ವೇಳೆ ಅದ್ದೂರಿ ಸ್ವಾಗತ ಕೋರುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ದ.8ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ನಡೆಯಿತು.

ಸ್ವಾಗತ ಹಾಗೂ ಮೆರವಣಿಗೆ ಸಮಿತಿ ಅಧ್ಯಕ್ಷ, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಎತ್ತಿನಹೊಳೆ ಯೋಜನೆ ವಿರುದ್ಧ ಡಿ.10 ರಿಂದ 12 ರ ತನಕ ದ.ಕ.ಜಿಲ್ಲೆಯಲ್ಲಿ ನಡೆಯುವ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಯು ದ.10 ರಂದು ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಹೊರಟು ಅಪರಾಹ್ನದ ವೇಳೆಗೆ ನೆಲ್ಯಾಡಿಗೆ ಬರಲಿದೆ. ನೆಲ್ಯಾಡಿಯಲ್ಲಿ ಸಮಿತಿ ವತಿಯಿಂದ ಅದ್ದೂರಿ ಸ್ವಾಗತ ಕೋರಿ ಮೆರವಣಿಗೆ, ಸಭೆ ನಡೆಯಲಿದೆ. ಈ ರಥಯಾತ್ರೆ ಯಶಸ್ವಿಗೆ ನೆಲ್ಯಾಡಿಯ 25ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ ಎಂದರು.

ನೆಲ್ಯಾಡಿಯ ಸಂತಜಾರ್ಜ್ ವಿದ್ಯಾಸಂಸ್ಥೆ, ಬೆಥನಿ ವಿದ್ಯಾಸಂಸ್ಥೆ, ಶ್ರೀರಾಮ ವಿದ್ಯಾಲಯ, ವರ್ತಕ ಸಂಘ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ, ಹಾರ್ಪಳ-ಕುತ್ರಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನ, ಜೇಸಿಐ ನೆಲ್ಯಾಡಿ, ಲಯನ್ಸ್ ಕ್ಲಬ್ ನೆಲ್ಯಾಡಿ, ಅಶ್ವತ್ಥ ಗೆಳೆಯರ ಬಳಗ ಹೊಸಮಜಲು, ಜೈ ಶ್ರೀರಾಮ್ ಗೆಳೆಯರ ಬಳಗ ಗಾಂಧಿ ಮೈದಾನ, ಗೆಳೆಯರ ಬಳಗ ಗಾಂಧಿಮೈದಾನ, ಸ್ಕಂದ ಯುವಕ ಮಂಡಲ ದೋಂತಿಲ, ಛತ್ರಪತಿ ಗ್ರೂಫ್ ಆಫ್ ಬಾಯ್ಸ್ ನೆಲ್ಯಾಡಿ, ಜೀಪು ಚಾಲಕ ಮಾಲಕರ ಸಂಘ ನೆಲ್ಯಾಡಿ-ಶಿರಾಡಿ, ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ನೆಲ್ಯಾಡಿ, ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ವಲಯ, ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು, ಸವಿತಾ ಸಮಾಜ ನೆಲ್ಯಾಡಿ, ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ, ಸೇವಾ ಸಹಕಾರಿ ಸಂಘ ನೆಲ್ಯಾಡಿ, ಕಾಳಿಕಾಂಬಾ ಭಜನಾ ಮಂಡಳಿ ಬಲ್ಯ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಾದರಿ ಶಬರಿಗಿರಿ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಬೊನ್ಯಸಾಗು, ಶ್ರೀ ಆದಿನಾಗಬ್ರಹ್ಮ ಗಡಿಯಾಡಿ ಮೊಗೆರ್ಕಳ ಸೇವಾ ಟ್ರಸ್ಟ್ ಪಲ್ಲದಗಂಡಿ-ಪಡುಬೆಟ್ಟು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ರಾಮನಗರ ಬಲ್ಯ, ಹಾಲು ಉತ್ಪಾದಕರ ಸಹಕಾರಿ ಸಂಘ ನೆಲ್ಯಾಡಿ ಸೇರಿದಂತೆ ಹಲವು ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿದ್ದು ನೆಲ್ಯಾಡಿಯಲ್ಲಿ ಸುಮಾರು 2 ಸಾವಿರ ಮಂದಿ ಸೇರುವೆ ನಿರೀಕ್ಷೆ ಇದೆ. ಕಾರ‍್ಯಕ್ರಮದ ಯಶಸ್ವಿಗೆ ಸಮಿತಿಯವರು ಸಹಕಾರ ನೀಡಬೇಕೆಂದು ಹೇಳಿದರು.

ಸಮಿತಿ ಗೌರವಾಧ್ಯಕ್ಷ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್, ಪ್ರಧಾನ ಕಾರ‍್ಯದರ್ಶಿಗಳಾದ ರವಿಚಂದ್ರ ಹೊಸವಕ್ಲು, ರವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಇಬ್ರಾಹಿಂ ಎಂ.ಕೆ., ಗೌರವ ಸಲಹೆಗಾರರಾದ ಧರ್ಮಪಾಲ ರಾವ್ ಕಜೆ, ಉಮೇಶ್ ಶೆಟ್ಟಿ ಪಟ್ಟೆ, ಲಕ್ಷ್ಮೀನಾರಾಯಣ ರಾವ್ ಆತೂರು, ಶಿವಪ್ರಸಾದ್ ಪುತ್ತಿಲ, ಸದಸ್ಯರುಗಳಾದ ಭಾಸ್ಕರ ಗೌಡ ಇಚ್ಲಂಪಾಡಿ, ತೀರ್ಥೇಶ್ವರ ಉರ್ಮಾನು, ಸುಂದರ ಗೌಡ ಅತ್ರಿಜಾಲು, ಲೋಕೇಶ್ ಬಾಣಜಾಲು, ಕುಶಾಲಪ್ಪ ಗೌಡ ಅನಿಲ, ಬೇಬಿ ನವ್ಯಾ, ದಿನೇಶ್ ಕಲ್ಯ, ಜಾನಕಿ, ಅಣ್ಣಿ ಎಲ್ತಿಮಾರ್, ಪ್ರಸಾದ್ ಸುಲ್ತಾಜೆ, ಶಾಲಿನಿ ಶೇಖರ ಪೂಜಾರಿ, ನೀಲಪ್ಪ ನಾಯ್ಕ್, ಹೇಮಾವತಿ ಗೋಳಿತ್ತೊಟ್ಟು ಮತ್ತಿತರ ಪ್ರಮುಖರು ಸಲಹೆ ಸೂಚನೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.