ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ವಿನೂತನ ರಂಗ ಪ್ರಯೋಗ: ಡಿ.9 ರಂದು ಪುರಭವನದಲ್ಲಿ ಬುದ್ದನೆಡೆಗೆ

Puttur_Advt_NewsUnder_1
Puttur_Advt_NewsUnder_1

mahila-collegeಪುತ್ತೂರು: ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ರಂಗಕಲೆಯಲ್ಲಿ ವಿನೂತನ ಪ್ರಯೋಗ ಮಾಡ ಹೊರಟಿದ್ದಾರೆ. ದ. 9 ರಂದು ಇಲ್ಲಿನ ಪುರಭವನದಲ್ಲಿ ರಂಗಶಂಕರ ಸಂಸ್ಥೆ ಅರ್ಪಿಸುವ ವಿನೂತನ ರಂಗ ಪ್ರಯೋಗದ ಮೂಲಕ ಬುದ್ದನ ಜೀವನ ಚರಿತ್ರೆ ಹಾಗೂ ತತ್ವಗಳ ಸಾರಾಂಶ ಒಳಗೊಂಡ ಬುದ್ದನೆಡೆಗೆ ನಾಟಕವನ್ನು ಕಾಲೇಜಿನ ವಿದ್ಯಾರ್ಥಿನಿಯರು ಅಭಿನಯಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ವಿದ್ಯಾರ್ಥಿಗಳಿಗೆ ಶುಭ ಹಾರೈಸಲಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೂ ತಮ್ಮ ಸುಪ್ತ ಪ್ರತಿಭೆಗಳನ್ನು ಬಹಿರಂಗ ವೇದಿಕೆಯಲ್ಲಿ ಪ್ರದರ್ಶಿಸಲು ಮನ ಮಾಡಿರುವುದು ರಂಗಕಲೆಯ ಅಭ್ಯುದಯ ಬೆಳವಣಿಗೆಯಾಗಿದೆ.

ಸದಾನಂದ ಬಿ. ಮುಂಡಾಜೆ ಸಾಹಿತ್ಯ ರಚಿಸಿದ್ದಾರೆ. ಕೃಷ್ಣಪ್ಪ ಬಂಬಿಲ ವಿನ್ಯಾಸದೊಂದಿಗೆ ನಿರ್ದೇಶಿಸಿದ್ದಾರೆ. ರಂಗಪರಿಕರದಲ್ಲಿ ಪ್ರತಾಪ್ ಚೆಂತಿಮಾರು, ವಿಕೇಶ್ ಬಂಟ್ವಾಳ ಹಾಗೂ ಸಂಗೀತದಲ್ಲಿ ನವೀನ್ ಕಾಂಚನ ಸಹಕರಿಸಲಿದ್ದಾರೆ.

ಬುದ್ದನ ಆದರ್ಶ ತತ್ವಗಳನ್ನು ವಿನೂತನ ಪ್ರಯೋಗದ ಮೂಲಕ ಅನಾವರಣ ಮಾಡಲಾಗಿದೆ. ತ್ರಿಪಿಟಿಕ ದಲ್ಲಿನ ಮೂಲ ಕಥೆಯನ್ನು ಆಧರಿಸಿ ಬುದ್ಧನ ಜೀವನ ಚರಿತ್ರೆಯ ಸಾಹಿತ್ಯವನ್ನು ಇಲ್ಲಿ ಬಣ್ಣಿಸಲಾಗಿದೆ. ಬೌದ್ಧ ಧರ್ಮದ ಭಾಷೆಯಾದ ಪಾಳೀ ಭಾಷೆಯ ಅಂಶಗಳನ್ನೂ ಇಲ್ಲಿ ಸೇರಿಸಿಕೊಂಡಿರುವುದು ವಿಶೇಷವಾಗಿದೆ. ಪಂಚಶೀಲ ತತ್ವಗಳ ಮೂಲಕ ಬುದ್ಧನ ಸರ್ವತತ್ವಗಳ ಆದರ್ಶಗಳನ್ನು ಇದರಲ್ಲಿ ಬಿಂಬಿಸಲಾಗಿದೆ. ಯಾವುದೇ ರಂಗಭ್ಯಾಸ ಇಲ್ಲದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೂ ವಿಶೇಷ ರಂಗಕಲೆಯನ್ನು ಪ್ರಸ್ತುತಪಡಿಸಲಿದ್ದಾರೆ. ಸುಮಾರು 20ದಿನಗಳಿಂದ ಸತತ ಅಭ್ಯಾಸ ಮಾಡಲಾಗಿದ್ದು ದ. 8ರಂದು ರಿಹರ್ಸಲ್ ಕೂಡಾ ನಡೆದಿದೆ. 1 ಗಂಟೆಗಳ ಕಾಲ ನಾಟಕ ನಡೆಯಲಿದ್ದೂ ಉಚಿತ ಪ್ರವೇಶವಾಗಿದ್ದು ಕಲಾಭಿಮಾನಿಗಳು, ವಿದ್ಯಾಭಿಮಾನಿಗಳು ನಾಟಕವನ್ನು ವೀಕ್ಷಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತೆ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.