Breaking News

ನೋಟು ರದ್ದು  ಪರಿಣಾಮ:  ಲೇಖನ, ಅಭಿಪ್ರಾಯಗಳು-ಸಂವಾದಕ್ಕೆ ಆಹ್ವಾನ ಅಚ್ಚೆ ದಿನ ಆಗಯಾ ಹೈ

Puttur_Advt_NewsUnder_1
Puttur_Advt_NewsUnder_1

 

noteದೇಶಕ್ಕಾಗಿ ಕಿಂಚಿತ್ ಸೇವೆ ಸಲ್ಲಿಸ ಬಯಸುವ ಭಾರತ ದೇಶದ ನಾಗರೀಕರಾದ ನಾವು, ದೇಶದ ಪ್ರಧಾನಮಂತ್ರಿ ಮೋದಿಜೀಯವರ ದಿಟ್ಟ ಹೆಜ್ಜೆ, ಡಿ ಮೊನಿಟೈಸೇಶನ್ ಅನ್ನು ಪ್ರೋತ್ಸಾಹಿಸಿ ಅವರಿಗೆ ಬೆಂಬಲ ಸೂಚಿಸುವುದೇ ಕಿಂಚಿತ್ ದೇಶ ಸೇವೆ. ಏಕೆಂದರೆ ದೇಶದ ಬಾಗ್ಡೊರ್ (ದೇಶದ ಭವಿಷ್ಯ) ಒಬ್ಬ ನಿಸ್ವಾರ್ಥಿ, ಮನೆ, ಮಠ, ಸಂಸಾರವಿಲ್ಲದ ಒಬ್ಬ ಸಂತ. ಎಂದಿಗೂ ಎಲ್ಲವನ್ನು ತ್ಯಜಿಸಿ, ಎಲ್ಲೋ ಸನ್ಯಾಸಿಯಾಗಿ ಕುಳಿತಿರಬೇಕಾಗಿದ್ದ ಒಬ್ಬ ಸಂತ. ಇಂದು ನಮ್ಮ ದೇಶದ ಪ್ರಧಾನಮಂತ್ರಿಯ ಕಾರ್ಯಭಾರವನ್ನು ನಿರ್ವಹಿಸುತ್ತಿರುವುದು ದೇಶದ ಜನತೆಯ ಸೌಭಾಗ್ಯ. ಈ ಕಾಲಘಟ್ಟದಲ್ಲಿ ನಮಗೆ ಒದಗಿರುವ ಈ ಸುಸಂದರ್ಭವನ್ನು ಅವರ ಜೊತೆ ಬೆನ್ನೆಲುಬಾಗಿ ನಿಂತು ಅವರಿಗೆ ಪ್ರೋತ್ಸಾಹಿಸುವುದೇ ನಮ್ಮ ಅಳಿಲು ಸೇವೆ.

ಈ ಸಮಯದಲ್ಲಿ ನಮ್ಮ ದೇಶದ ಗಡಿಯಲ್ಲಿ ಸೈನಿಕರು ಮಾಡುತ್ತಿರುವ ಕರ್ತವ್ಯ ವನ್ನು ನೋಡಿದರೆ ಮತ್ತು ಅವರು ಕೂಡಾ ಸಂಸಾರಿಕರು, ಅವರ ಸಂಸಾರವನ್ನು ಒಂದು ನಿಮಿಷ ನೆನಪಿಸಿಕೊಂಡರೆ ಇಂದು ದಿ ಮೊನಿಟೈಸೇಶನ್ ವಿಷಯದಲ್ಲಿ  ನಾವು ಪಡು ತ್ತಿರುವುದು ಚಿಕ್ಕ ಸಮಸ್ಯೆ ನಗಣ್ಯ. ಕೆಲವು ದಿನಗಳ ಕಾಲ ಸೌಮ್ಯವನ್ನು ತೋರಿಸಿ ದೇಶ ಸೇವೆಗೆ ಕೈ ಜೋಡಿಸಿದಲ್ಲಿ ಇದರ ಪರಿಣಾಮ ನಾವು ಕೆಲವೇ ವರುಷದಲ್ಲಿ ನಮ್ಮ ದೇಶ ಅಗ್ರಗಣ್ಯ ದೇಶಗಳ ಮುಂಚೂಣಿಯಲ್ಲಿ ನಿಲ್ಲುವ ಅವಕಾಶವನ್ನು ಕಾಣಲಿzವೆ.

ರಾಜಕೀಯ ಪಕ್ಷಗಳಿಗೆ ಆಂತರಿಕ ಯುದ್ಧ ಇದ್ದಂತೆ. ಹೊರಗಿನ ಯುದ್ಧದ ವೇಳೆ Black out ಸಂದರ್ಭದಲ್ಲಿ ದೀಪ ಉರಿಸುವ ಧೈರ್ಯವನ್ನು ನೀವು ತೋರುತ್ತಿದ್ದೀರೇ? ದೇಶ ಸೇವೆಗೆ ಸಿಕ್ಕ ಈ ಸುಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಿ. ಪ್ರಧಾನ ಮಂತ್ರಿಯವರ ದಿಟ್ಟ ಹೆಜ್ಜೆಯನ್ನು ಪ್ರೋತ್ಸಾಹಿಸಿ ’ಕತ್ತಲು ಸರಿದು ಬೆಳಕು ಬಂದಂತೆ’ ನಮ್ಮ ದೇಶಕ್ಕೆ ಅಚ್ಚೆ ದಿನ್ ಬರುತ್ತದೆ.

ಶಾಂತ ಕುಮಾರ್ ನಾಕ್, ನಿವೃತ್ತ ಯೋಧ ನೆಹರು ನಗರ, ನೆಲಪ್ಪಾಲು, ಪುತ್ತೂರು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.