Breaking News

ಎಡನೀರು ಯಕ್ಷಗಾನ ಸಪ್ತಾಹ ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

edaneeru

ಉಪ್ಪಿನಂಗಡಿ: ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿ ಎಡನೀರು ಕಾಸರಗೋಡು ಇದರ ಯಕ್ಷಗಾನ ಸಪ್ತಾಹ ಕಾರ‍್ಯಕ್ರಮದ ಆಮಂತ್ರಣ ಪತ್ರಿಕೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದಲ್ಲಿ ದೇವರ ಸನ್ನಿಧಿಯಲ್ಲಿ ಡಿ. 7ರಂದು ಜರಗಿತು. ಆಮಂತ್ರಣ ಪತ್ರಿಕೆಯನ್ನು ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಉಪ್ಪಿನಂಗಡಿ ಇದರ ಅಧ್ಯಕ್ಷ ಜಿ. ಕೃಷ್ಣ ರಾವ್ ಬಿಡುಗಡೆಗೊಳಿಸಿದರು. ಕಾರ‍್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ರಘುನಾಥ ರೈ, ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಸಂಯೋಜಕರಾದ ಕೈಯ್ಯೂರು ನಾರಾಯಣ ಭಟ್ ಮಂಚಿ, ಉಪಾಧ್ಯಕ್ಷರಾದ ಭಾಸ್ಕರ ಬಾರ‍್ಯ ಪುತ್ತೂರು, ಕೋಶಾಧಿಕಾರಿ ವೇದವ್ಯಾಸ ರಾಮಕುಂಜ, ಪುತ್ತೂರು, ಸದಸ್ಯರುಗಳಾದ ರಾಮಗಣೇಶ್ ಪ್ರಭು ಬಿ.ಸಿ. ರೋಡು, ಪೆಲಪ್ಪಾರು ವೆಂಕಟರಮಣ ಭಟ್, ಡಾ. ರಾಜಾರಾಂ, ದೇವಳದ ಕಾರ‍್ಯನಿರ್ವಹಣಾಧಿಕಾರಿ ಹರೀಶ್, ವ್ಯವಸ್ಥಾಪಕ ವೆಂಕಟೇಶ್ ಉಪಸ್ಥಿತರಿದ್ದರು. ಯಕ್ಷಗಾನ ಸಪ್ತಾಹ ಸಮಿತಿ ಕಾರ‍್ಯದರ್ಶಿ ಶ್ರೀರಾಮ ಪಾತಾಳ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.