ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಮಿಷನ್ 100: ದ.18ರಂದು ತರಗತಿ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ  ಸ್ಟಡಿ ಸೆಂಟರ್‌ನಲ್ಲಿ ಈ ಶೈಕ್ಷಣಿಕ ವರ್ಷ 2016-17ನೇ ಸಾಲಿನಲ್ಲಿ ಕಲಿಯುತ್ತಿರುವ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆಯಲು ಸಹಕಾರಿಯಾಗುವ ರೀತಿಯಲ್ಲಿ ಪ್ರಗತಿ ಮಿಷನ್ 100 ತೃತೀಯ ಬಾರಿಗೆ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ನೆರವೇರಿಸಲಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ಪ್ರಯೋಜನವಾಗಲಿದೆ ಹಾಗೂ ಪ್ರಥಮ ಶ್ರೇಣಿಯಲ್ಲಿರುವ ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿಯನ್ನು ಪಡೆಯಲು ಇದೊಂದು ದಾರಿ ದೀಪವಾಗಲಿದೆ. ಈ ತರಬೇತಿ ಶಿಬಿರವು ಡಿಸೆಂಬರ್ 18ರಂದು ಪ್ರಾರಂಭಗೊಳ್ಳಲಿದ್ದು ಪುತ್ತೂರಿನ ಆಸು-ಪಾಸು ಶಾಲಾ 10ನೇ ತರಗತಿಯ ವಿದ್ಯಾರ್ಥಿಗಳು ಪ್ರತಿನಿತ್ಯ ಸಂಜೆ 4:30ರಿಂದ 5:30ರವರೆಗೆ, ಶನಿವಾರ ಮಧ್ಯಾಹ್ನ 2:೦೦ರಿಂದ 5:೦೦ರವರೆಗೆ ಮತ್ತು ಆದಿತ್ಯವಾರ ಬೆಳಗ್ಗೆ ೯:೩೦ರಿಂದ ಸಂಜೆ ೩:೩೦ರವರೆಗೆ ತರಬೇತಿ ತರಗತಿಗಳು ನಡೆಯಲಿದೆ. ದೂರದ ಗ್ರಾಮಾಂತರ ಶಾಲಾ ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನ ೨:೦೦ರಿಂದ ೫:೦೦ರವರೆಗೆ ಮತ್ತು ಆದಿತ್ಯವಾರ ೯:೩೦ ರಿಂದ ಸಂಜೆ ೩:೩೦ರವರೆಗೆ ತರಬೇತಿ ತರಗತಿಯಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ. ಹೇಮಲತಾರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಎರಡು ವರ್ಷಗಳ ಹಿಂದೆ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ರವರು ೯೫+ ವಿಚಾರವಾಗಿ ಎಲ್ಲಾ ಟ್ಯೂಟೋರಿಯಲ್ ಸಂಸ್ಥೆಗಳ ಮಾಲಿಕರನ್ನು ಕರೆದು ವಿಚಾರ ವಿನಿಮಯ ನಡೆಸಿದ್ದರು. ಅಂದು ಪುತ್ತೂರು ತಾಲೂಕಿಗೆ ೯೫+ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ನಮ್ಮೆಲ್ಲರ ಜೊತೆ ಚರ್ಚಿಸಿ, ಕೆಲವು ಕಾರ್ಯಕ್ರಮಗಳನ್ನು ತಿಳಿ ಹೇಳಿದ್ದರು. ಅದರಿಂದ ಪ್ರೇರಿತರಾದ ನಾವು ಕೂಡಲೇ ಉಪನ್ಯಾಸಕ ವೃಂದದವರೊಡನೆ ಚರ್ಚಿಸಿ, ನಮ್ಮ ಸಂಸ್ಥೆಯಿಂದ ಮಿಷನ್ ೯೫+ಗೆ ಪೂರಕವಾಗುವಂತೆ ನಾವು ಏನು ಮಾಡಬಹುದೆಂದು ಯೋಚಿಸಿದಾಗ ಕಲಿಯಲು ಹಿಂದುಳಿದ ಇತರ ಶಾಲಾ ಮಕ್ಕಳನ್ನು ಕೂಡ ನಮ್ಮ ಮಕ್ಕಳೊಂದಿಗೆ ಸೇರಿಸಿ ಶೇಕಡಾ.೧೦೦ ಫಲಿತಾಂಶವನ್ನು ಕೊಡಲು ಸಾಧ್ಯವಾದರೇ ಅದು ನಮ್ಮ ಸಂಸ್ಥೆ ಮಿಷನ್ ೯೫+ಗೆ ಸಹಕಾರಿಯಾಗಲಿದೆ ಎಂದು ಒಮ್ಮತದ ಅಭಿಪ್ರಾಯಕ್ಕೆ ಬಂದು ಪ್ರಾರಂಭಿಸಿ ಮಿಷನ್ ೧೦೦ ಎಂದು ನಾಮಕರಣ ಮಾಡಲಾಯಿತು.

ಪ್ರಗತಿಯ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದು ಕಷ್ಟ, ಉತ್ತೀರ್ಣರಾಗುವುದು ಸುಲಭ ಎಂದು ಪ್ರಾಸ್ತವಿಕ ಮಾತನಾಡುತ್ತಾ ಸಂಸ್ಥೆಯ ಫೌಂಡರ್, ಚೈರ್‌ಮ್ಯಾನ್, ಸಂಚಾಲಕರಾದ ಪಿ.ವಿ.ಗೋಕುಲ್‌ನಾಥ್‌ರವರು ತಿಳಿಸಿದರು.

ಈ ಸಾಲಿನ ಮಿಷನ್ ೧೦೦ ತರಬೇತಿ ತರಗತಿಗಳಿಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ತಕ್ಷಣವೇ ಪೋಷಕರೊಂದಿಗೆ ಸಂಸ್ಥೆಗೆ ಆಗಮಿಸಿ ನೊಂದಾವಣೆ ಮಾಡಿಕೊಳ್ಳಬಹುದು. ಸಂಸ್ಥೆಯ ಕಛೇರಿ ಆದಿತ್ಯವಾರದಂದು ಕೂಡ ತೆರೆದಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ೯೯೦೦೧೦೯೪೯೦, ೯೪೮೦೧೦೬೨೭೪, ಹಾಗೂ ೦೮೨೫೧-೨೩೭೧೪೩ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಯಾದ ಕುಮಾರಿ ಕವಿತಾರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಗತಿ ಸ್ಟಡಿ ಸೆಂಟರ್ ಎಸ್.ಎಸ್.ಎಲ್.ಸಿ ೨೦೧೬ನೇ ಸಾಲಿನ ಮಿಷನ್೧೦೦   ತರಬೇತಿ ಶಿಬಿರದಲ್ಲಿ ಒಟ್ಟು ೩೨೦ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದು ೩೦೪ ವಿದ್ಯಾರ್ಥಿಗಳು ತೇರ್ಗಡೆಗೊಂಡಿರುತ್ತಾರೆ. ಐದು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ(ಅ+), ೨೫ ವಿದ್ಯಾರ್ಥಿಗಳು ಅ ಗ್ರೇಡ್‌ನೊಂದಿಗೆ , ೨೦೦ವಿದ್ಯಾರ್ಥಿಗಳು ಆ+ ಗ್ರೇಡ್‌ನೊಂದಿಗೆ, ಉಳಿದ ೭೪ ವಿದ್ಯಾರ್ಥಿಗಳು  ಆ  ಹಾಗೂ ಇ+ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಈ ವರ್ಷವಾದರೂ ೧೦೦ರ ಗುರಿ ತಲುಪುವ ಉzಶವನ್ನಿಟ್ಟುಕೊಂಡು ತರಬೇತಿಯಲ್ಲಿ ಬೇರೆ ಹೊಸ ವಿಧಾನಗಳನ್ನು ಅನುಸರಿಸಿ ಶೇ.೧೦೦ರ ಗುರಿತಲುಪುವ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದು ಸಂಚಾಲಕ ಗೋಕುಲ್ ದಾಸ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.