ದ.18: ಮಂಗಳೂರಿನಲ್ಲಿ ವೇಗದ ಓಟಗಾರರ ಆಯ್ಕೆ; ವಿದ್ಯಾರ್ಥಿಗಳಿಗೆ ಬಿಇಓ ಸೂಚನೆ

ಪುತ್ತೂರು: ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆ (ಎನ್‌ವೈಸಿಎಸ್) ಯು ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಸಂಸ್ಥೆಯ ಸಹಭಾಗಿತ್ವದಲ್ಲಿ ದ.18ರಂದು ಬೆಳಗ್ಗೆ 8.30ರಿಂದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ವಲಯದ ವೇಗದ ಓಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

೧೧ರಿಂದ ೧೪ ವರ್ಷದೊಳಗಿನವರ ವಿಭಾಗದಲ್ಲಿ ಭಾಗ ವಹಿಸುವವರು ೨೦೦೩ ಜ.೧ರಿಂದ ೨೦೦೫ ದ.೩೧ರೊಳಗೆ ಜನಿಸಿರಬೇಕು. ೧೫ರಿಂದ ೧೭ ವರ್ಷದೊಳಗಿನವರ ವಿಭಾಗದಲ್ಲಿ ಭಾಗವಹಿಸುವವರು ೨೦೦೦ ಜ.೧ರಿಂದ ೨೦೦೨ ದ.೩೧ರೊಳಗೆ ಜನಿಸಿರಬೇಕು. ಉಭಯ ವಿಭಾಗಗಳಲ್ಲಿ ೧೦೦, ೨೦೦ ಮತ್ತು ೪೦೦ ಮೀಟರ್ ವೇಗದ ಓಟಗಾರರ ಆಯ್ಕೆ ನಡೆಯಲಿದೆ.

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ  ಅಭ್ಯರ್ಥಿಗಳಿಗೆ ಸರ್ಟಿಫಿಕೇಟ್, ಉಚಿತ ಊಟ ವ್ಯವಸ್ಥೆ ಮಾಡಲಾಗಿದೆ. ಈ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ, ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾದವರಿಗೆ ಉಚಿತ ತರಬೇತಿ, ಊಟ, ವಸತಿ ವ್ಯವಸ್ಥೆ, ಪ್ರಯಾಣ ಭತ್ತೆ ಸೇರಿದಂತೆ ಎಲ್ಲ ವ್ಯವಸ್ಥೆಗಳು ಸಿಗಲಿವೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಳಿಕ ೪ ವರ್ಷ ಅನುಭವಿ ಅಥ್ಲೇಟ್‌ಗಳಿಂದ ಉಚಿತ ತರಬೇತಿ ಮಾತ್ರವಲ್ಲದೆ ವಿದೇಶದಲ್ಲಿ ವಿಶೇಷ ತರಬೇತಿ ನೀಡಲಾಗುವುದು ಎಂದು ಹೇಳಿದರು.

ತಾಲೂಕಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಶಾಲೆ ಬಿಟ್ಟವರು ಸಹಿತ ನಿಗದಿತ ವಯೋಮಿತಿಯ ಯಾವುದೇ ವ್ಯಕ್ತಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಜನನ ಪ್ರಮಾಣ ಪತ್ರದ ಪ್ರತಿ ಹಾಗೂ ಶಾಲೆಯಿಂದ ನೀಡಿರುವ ದಾಖಲೆ ಪ್ರತಿ ಹಾಗೂ ಫೋಟೋ ಕಡ್ಡಾಯ. ಅರ್ಜಿಯನ್ನು ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಅಥವಾ ಪ.ಪೂ. ಶಿಕ್ಷಣ ಇಲಾಖೆಯ ದ.ಕ. ಪ್ರಿನ್ಸಿಪಾಲ್ ಸಂಘದ ವೆಬ್‌ಸೈಟ್‌ನಿಂದ ಪಡೆದು ದ.೧೪ ಸಾಯಂಕಾಲ ೪.೩೦ರೊಳಗೆ ಬಿಇಒ ಅಥವಾ ಮಿಫ್ಟ್ ಕಾಲೇಜು ಅತ್ತಾವರ ಕೆಎಂಸಿ ಆಸ್ಪತ್ರೆ ಎದುರಿನ ಕಾಲೇಜು ಕಚೇರಿಯಲ್ಲಿ ನೀಡಬೇಕು. http://nycsindia.com/sports ನಲ್ಲಿ ರಿಜಿಸ್ಟ್ರೇಶನ್ ಮಾಡಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.