Breaking News

ಗಲ್ಫ್ ಟೂರ‍್ಸ್ ಮತ್ತು ಟ್ರಾವೆಲ್ಸ್ ವತಿಯಿಂದ ಉಮ್ರಾ ತರಬೇತಿ ಶಿಬಿರ ಪ್ರತಿಯೊಬ್ಬ ಮುಸ್ಲಿಮನೂ ಮದೀನಾ ಕಾಣಲು ಹಾತೊರೆಯುತ್ತಾನೆ: ಎಸ್. ಬಿ ದಾರಿಮಿ

Puttur_Advt_NewsUnder_1
Puttur_Advt_NewsUnder_1

 

gulfಪುತ್ತೂರು: ಮಕ್ಕಾ ಮತ್ತು ಮದೀನಾ ಇಸ್ಲಾಮಿನ ಶಕ್ತಿ ಕೇಂದ್ರಗಳಾಗಿದೆ, ಅದು ಅಲ್ಲಾಹನು ಕುರ್‌ಆನಿನಲ್ಲಿ ತಿಳಿಸಿರುವ ಪವಿತ್ರ ಸ್ಥಳವೂ ಆಗಿದೆ, ಈ ಎರಡು ಪವಿತ್ರ ಸ್ಥಳಕ್ಕೆ ಅಲ್ಲಾಹನು ವಿಶೇಷ ಸ್ಥಾನಮಾನವನ್ನು ನೀಡಿದ್ದು ಮಕ್ಕಾ ಮತ್ತು ಮದೀನಾ ತಲುಪಲು ಪ್ರತಿಯೊಬ್ಬ ಮುಸ್ಲಿಮ್ ಹಾತೊರೆಯುತ್ತಾನೆ ಎಂದು ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್. ಬಿ ದಾರಿಮಿ ಹೇಳಿದರು.

ಅವರು ಪುತ್ತೂರಿನ ಪ್ರತಿಷ್ಟಿತ ಗಲ್ಫ್ ಟೂರ‍್ಸ್ ಮತ್ತು ಟ್ರಾವೆಲ್ಸ್ ವತಿಯಿಂದ ನಡೆದ ಈ ವರ್ಷದ ಮೂರನೇ ಉಮ್ರಾ ಬ್ಯಾಚ್‌ನಲ್ಲಿ ಪವಿತ್ರ ಯಾತ್ರೆಕೈಗೊಳ್ಳುತ್ತಿರುವ ಉಮ್ರಾ ಯಾತ್ರಿಕರಿಗೆ ನಡೆದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉಮ್ರಾ ಅಥವಾ ಹಜ್ ನಿರ್ವಹಿಸಲು ಭಾಗ್ಯ ಬೇಕು, ಕೇವಲ ಸಂಪತ್ತು ಇದ್ದ ಮಾತ್ರಕ್ಕೆ ಅಲ್ಲಿಗೆ ತಲುಪಲು ಸಾಧ್ಯವಿಲ್ಲ. ಅರ್ಥಿಕವಾಗಿ ಮತ್ತು ಆರೋಗ್ಯದಲ್ಲಿ ಶಕ್ತಿಯುತನಾದ ಪ್ರತಿಯೊಬ್ಬನೂ ಹಜ್ ಮತ್ತು ಉಮ್ರಾ ನಿರ್ವಹಿಸುವುದು ಕಡ್ಡಾಯ ಆದರೆ ಈ ಸೌಭಾಗ್ಯ ಎಲ್ಲರಿಗೂ ಕೂಡಿ ಬರುವುದೇ ಇಲ್ಲ ಎಂದು ಹೇಳಿದರು. ಪುತ್ತೂರಿನ ಗಲ್ಫ್ ಟೂರ‍್ಸ್ ಮೂಲಕ ಸಾವಿರಾರು ಮಂದಿ ಉಮ್ರಾ ಮತ್ತು ಹಜ್‌ಯಾತ್ರೆಯನ್ನು ಕೈಗೊಂಡಿದ್ದು ಇದರಲ್ಲಿ ಸಂಸ್ಥೆಗೂ ಪುಣ್ಯ ಪ್ರಾಪ್ತಿಯಾಗಲಿದೆ, ಉಮ್ರಾ ಮತ್ತು ಹಜ್ ನಿರ್ವಹಿಸಲು ತಿಳಿಯದ ಅದೆಷ್ಟೋ ಮಂದಿಯನ್ನು ಪರಿಪೂರ್ಣ ಹಜ್ ಮತ್ತು ಉಮ್ರಾ ನಿರ್ವಹಿಸುವಂತೆ ಅದಕ್ಕಾಗಿಯೇ ಅಮೀರ್ ಒಬ್ಬರನ್ನು ನೇಮಿಸಿ ಕ್ರಮಬದ್ದವಾಗಿ ಉಮ್ರಾ ನಿರ್ವಹಿಸುವಲ್ಲಿ ಮುತುವರ್ಜಿ ವಹಿಸುತ್ತಿದೆ, ಇದಕ್ಕಾಗಿಯೇ ಹೆಚ್ಚಿನ ಯಾತ್ರಿಕರು ಇವರ ಮೂಲಕವೇ ಉಮ್ರಾ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಅರ್ಥಿಕವಾಗಿ ಮತ್ತು ಆರೋಗ್ಯವಾಗಿ ಶಕ್ತಿಯುಳ್ಳ ಮಂದಿ ಹಜ್ ನಿರ್ವಹಿಸದೇ ಇದ್ದರೂ ಉಮ್ರಾವನ್ನಾದರೂ ನಿರ್ವಹಿಸಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು, ಸಂಪತ್ತು ನಮ್ಮನ್ನು ರಕ್ಷಣೆ ಮಾಡುವುದಿಲ್ಲ, ಸಂಪತ್ತನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿದರೆ ಅದರಿಂದ ಇಹಪರದಲ್ಲಿ ಒಳಿತು ಕಾಣಲು ಸಾಧ್ಯವಾಗುತ್ತದೆ. ಮಕ್ಕಾ ಮದೀನಾವನ್ನು ನೋಡಬೇಕೆಂಬ ಆಸೆ ಇದ್ದರೆ ಸಾಲದು ನಾವು ಅಲ್ಲಿಗೆ ತೆರಳುವ ಸಂಕಲ್ಪವನ್ನು ಮಾಡಿದರೆ ಅಲ್ಲಾಹನು ನಿಶ್ಚಯವಾಗಿಯೂ ನಮ್ಮನ್ನು ಅಲ್ಲಿಗೆ ತಲುಪಿಸುತ್ತಾನೆ ಎಂಬುದರಲ್ಲಿ ಅನುಮಾನ ಬೇಡ. ಪ್ರವಾದಿಯವರನ್ನು ಜೀವಂತವಾಗಿ ಕಾಣಲು ನಮಗೆ ಸಾಧ್ಯವಾಗಿಲ್ಲ ಆದರೆ ಅವರು ಜನಿಸಿದ ಮತ್ತು ಅಂತ್ಯವಿಶ್ರಾಂತಿ ಹೊಂದುತ್ತಿರುವ ಪವಿತ್ರ ಮಣ್ಣಿಗೆ ನಾವು ಪಾದಸ್ಪರ್ಶ ಮಾಡಿದರೆ ನಾವು ನಿಜವಾದ ಭಾಗ್ಯಶಾಲಿಗಳಾಗುತ್ತೇವೆ ಎಂದು ಹೇಳಿದರು. ಸಂಸ್ಥೆಯ ಅಮೀರ್ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಯಾತ್ರಿಕರಿಗೆ ಉಮ್ರಾ ನಿರ್ವಹಿಸುವ ಕುರಿತು ಮಾಹಿತಿ ನೀಡಿದರು, ವೇದಿಕೆಯಲ್ಲಿ ಹನೀಫ್ ದಾರಿಮಿ ಪಡೀಲ್, ಓಲೆಮುಂಡೋವು ಮಹ್‌ಮೂದುಲ್ ಫೈಝಿ ಉಪಸ್ಥಿತರಿದ್ದರು.

ಡಿ.26 ಕ್ಕೆ 4 ನೇ ಬ್ಯಾಚ್

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮಾಲಕರಾದ ಸುಲೈಮಾನ್ ಪುಣಚರವರು ಮಾತನಾಡಿ ಈ ವರ್ಷದಲ್ಲಿ ಈಗಾಗಲೇ ಎರಡು ಉಮ್ರಾ ಬ್ಯಾಚ್ ಯಾತ್ರೆ ಮುಗಿಸಿ ಬಂದಿದ್ದು ಮೂರನೇ ಬ್ಯಾಚ್ ಡಿ 12 ಕ್ಕೆ ಹೊರಡಲಿದ್ದು ಮಂಗಳೂರಿನಿಂದ ಜೆದ್ದಾಕ್ಕೆ ಪ್ರಯಾಣ ಬೆಳೆಸಲಿದೆ. 4 ನೇ ಬ್ಯಾಚ್ ಡಿ.26 ಕ್ಕೆ ಹೊರಡಲಿದ್ದು ಈಗಾಗಲೇ ಬುಕ್ಕಿಂಗ್ ಪ್ರಾರಂಭಗೊಂಡಿದೆ. 5 ನೇ ಬ್ಯಾಚ್ ಜನವರಿ 16 ಕ್ಕೆ ಹೊರಡಲಿದೆ. ಆಸಕ್ತ ಯಾತ್ರಿಕರು ಸಂಸ್ಥೆಗೆ ಭೇಟಿ ನೀಡಿ ಪಾಸ್‌ಪೋರ್ಟು ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ತೃಪ್ತಿದಾಯಕ ಸೇವೆಯನ್ನು ನೀಡುವ ಉದ್ದೇಶದಿಂದ ನಮ್ಮ ಸಂಸ್ಥೆ ಯಾತ್ರಾ ಸೌಲಭ್ಯವನ್ನು ಕಲ್ಪಿಸುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.