Breaking News

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ: ಸುದಾನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

Puttur_Advt_NewsUnder_1
Puttur_Advt_NewsUnder_1

sudana

ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬಾಲವಿಕಾಸ ಅಕಾಡೆಮಿ, ಧಾರವಾಡ, ಜಿಲ್ಲಾಡಳಿತ ಮತ್ತು ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಂಯುಕ್ತ ಆಶ್ರಯದಲ್ಲಿ ಸುದಾನ ವಸತಿಯುತ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ 24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸುದಾನ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳ ತಂಡವು ನಗರ ಹಿರಿಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ನಾಯಕನಾದ ಅಹಮ್ಮದ್ ಸಯೀದ್ (ಕನ್ಯಾನದ ಅಬೂಬಕ್ಕರ್ ಮತ್ತು ಶಕೀನಾ ದಂಪತಿಯ ಪುತ್ರ) ಮತ್ತು ಶಶಾಂಕ್ ಗೌಡ ಜಿ( ರಾಮನಗರದ ಗೋಪಾಲ್ ಮತ್ತು ಸುಗುಣ ದಂಪತಿಯ ಪುತ್ರ), ಹೇಮಂತ್ ಗೌಡ ಕೆ ಸಿ(ಮಂಡ್ಯದ ಚೆನ್ನಕೇಶವ-ರುಕ್ಮಿಣಿ ದಂಪತಿಯ ಪುತ್ರ) ಕೇದಾರ್ ನಾಯಕ್ (ನೆಹರು ನಗರದ ಗಣಪತಿ ನಾಯಕ್-ವಿನಯಾ ಜಿ ನಾಯಕ್ ದಂಪತಿಯ ಪುತ್ರ), ವಿಶ್ವಾಸ್ ಆರ್ ಪಿ (ಮಂಡ್ಯದ ಪದ್ಮೇಶ್ ಮತ್ತು ಕುಮಾರಿ ದಂಪತಿಯ ಪುತ್ರ) ಇವರನ್ನೊಳಗೊಂಡ ತಂಡವು ಡಿಸೆಂಬರ್ 27, 28, 29, 2016ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸಮಾವೇಶದಲ್ಲಿ ತಮ್ಮ ಯೋಜನೆಯನ್ನು ಮಂಡಿಸಲಿದ್ದಾರೆ.

ಈ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಶಾರದಾ ಮತ್ತು ಶ್ರೀಮತಿ ಸುಚಿತಾ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.