Breaking News

ಸಮೃದ್ಧಿ ಫೀಡ್ಸ್  ಫಾರ್ಮ್ಸ್‌ನವರಿಂದ ಹೊಸ ಉತ್ಪನ್ನ ಜೆ.ವಿ ಫೀಡ್ಸ್ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

samrudhi

ಪುತ್ತೂರು: ಇಲ್ಲಿನ ಎಂ.ಟಿ ರಸ್ತೆಯ ದುರ್ಗಾಪ್ರಸಾದ್ ಬಿಲ್ಡಿಂಗ್‌ನಲ್ಲಿರುವ ಸಮೃದ್ಧಿ ಫೀಡ್ಸ್  ಫಾರ್ಮ್ಸ್‌ನವರಿಂದ ನೂತನ ಉತ್ಪನ್ನ ಜೆ.ವಿ ಫೀಡ್ಸ್ ಬಿಡುಗಡೆ ದ.9ರಂದು ದರ್ಬೆ ಪ್ರಶಾಂತ್ ಮಹಲ್‌ನ ಸೆನೆಟ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಸ್ವ-ಉದ್ಯೋಗದ ಮೂಲಕ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಿ ಅದರ ಮೂಲಕ ಉದ್ಯಮಗಳನ್ನು ಸ್ಥಾಪಿಸುತ್ತಿರುವುದು ಪ್ರಧಾನಿಯವರ ಸ್ಮಾರ್ಟ್ ಸಿಟಿ ಯೋಜನೆಗೆ ಪೂರಕವಾಗಿದೆ ಎಂದರು. ಇಂತಹ ಸಂಸ್ಥೆಗಳು ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಯುವ ಪೀಳಿಗೆಗೆ ಆಧಾರ ಸ್ಥಂಭವಾಗಿದೆ ಎಂದರು. ನೂತನ ಉತ್ಪನ್ನ ಬಿಡುಗಡೆ ಮಾಡಿದ ತಾ.ಪಂ ಮಾಜಿ ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸೇವೆಯ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಜನರಲ್ಲಿ ಪ್ರೀತಿ, ವಿಶ್ವಾಸ, ವಿನಯದಿಂದ ವ್ಯವಹರಿಸಿದಾಗ ಸಂಸ್ಥೆ ಉನ್ನತಮಟ್ಟಕ್ಕೇರಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಲಕ್ಷ್ಮೀ ಫೀಡ್ಸ್‌ನ ನಿರ್ದೇಶಕ ಮುರಳಿಧರ ಮಾತನಾಡಿ, ಸುಮಾರು 40 ವರ್ಷಗಳಷ್ಟು ಅನುಭವವಿರುವ ಸಂಸ್ಥೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದರು. ಜೆ.ವಿ ಪೀಡ್ಸ್‌ನ ಆಡಳಿತ ನಿರ್ದೇಶಕ ಅಶೋಕನ್ ಮಾತನಾಡಿ, ಕೇರಳದ ಕಣ್ಣೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ನಮ್ಮ ಸಂಶ್ಥೆಯು ಕೇರಳ ರಾಜ್ಯದಲ್ಲಿ ವರ್ಷಕ್ಕೆ ರೂ.250 ಕೋಟಿಗಳ ವ್ಯವಹಾರ ನಡೆಸುತ್ತಿದೆ. ಇದೀಗ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಗೂ ತಮ್ಮ ವ್ಯವಹಾರಗಳನ್ನು ವಿಸ್ತರಿಸಲಾಗುತ್ತಿದೆ ಎಂದರು. ಜೆ.ವಿ ಫೀಡ್ಸ್‌ನ ಚೇರ್ ಮೆನ್ ಪ್ರದೀಪ್ ಕುಮಾರ್ ಹಾಗೂ ಸಮೃದ್ಧಿ ಫೀಡ್ಸ್‌ನ ಪಾಲುದಾರ ಎಂ.ಕೆ ವಿಠಲ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಖರೀದಿದಾರರಾದ ಸುರೇಶ್‌ರವರಿಗೆ ಬಿಲ್ ನೀಡುವ ಮೂಲಕ ವಿತರಣೆ ಮಾಡಲಾಯಿತು.

ಸಂಸ್ಥೆಯ ನಿರ್ದೇಶಕ ಸತೀಶ್ ಮೆದು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ವಂದಿಸಿದರು. ಎಕೌಟೆಂಟ್ ವಾಣಿಶ್ರೀ, ಸೀತಾರಾಮ್, ಯತೀಶ್ ಮೆದು, ಗಿರೀಶ್ ಕುಮಾರ್, ಸುಧಾಕರ್ ಹಾಗೂ ಕಿಶೋರ್ ಕುಮಾರ್ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.

ಸಂಸ್ಥೆಯ ಗ್ರಾಹಕರಾದ ಅಕ್ಷಯ ಫಾರ್ಮ್‌ನ ಜಯಂತ ನಡುಬೈಲು, ಮನೋಜ್ ಫಾರ್ಮ್‌ನ ಮನೋಜ್ ಮಿನೇಜಸ್, ರಘುನಾಥ ರೈ ಸುಳ್ಯ, ಪ್ರೇಮ್‌ರಾಜ್ ಬೆಳ್ಳಾರೆ, ಉಮೇಶ್ ಬೆಳ್ಳಾರೆ, ದಯಾನಂದ ಪುಣಚ, ಎಸ್. ಫಾರ್ಮ್ಸ್‌ನ ರಹೀಂ, ಜಗದೀಶ ರೈ ಪೆರುವಾಯಿ, ಸುರೇಶ್ ಪೂಜಾರಿ ಕುಂದಾಪುರ, ಪ್ರೇಮಚಂದ್ರ ಮೆದು, ಶ್ರೀಧರ ಪೂಜಾರಿ ಪರ್ಪುಂಜ, ನವಾಜ್ ಪರ್ಪುಂಜ, ಜಲೀಲ್ ಬದಿಯಡ್ಕ, ಪ್ರೇಮನಾಥ ರೈ ಬೆಳ್ಳಾರೆ, ಉಮೇಶ್ ಬೆಳ್ಳಾರೆ, ಸೂರಜ್ ಕೊಡಿಯಾಲ್‌ಬೈಲ್, ಲಕ್ಷ್ಮೀನಾರಾಯಣ ರೈ, ಜಗದೀಶ ರೈ, ಹಂಝ ಬೆಳಿಯೂರುಕಟ್ಟೆ ಹಾಗೂ ಜಿಲ್ಲೆಯ ವಿವಿಧ ಗ್ರಾಹಕರು ಸಭೆಯಲ್ಲಿ ಉಪಸ್ಥಿರರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.