ನಗರಸಭೆಯ ವಿಶೇಷ ಸಾಮಾನ್ಯ ಸಭೆ: ವಾರದ ಸಂತೆ ಮತ್ತೆ ಕಿಲ್ಲೆ ಮೈದಾನಕ್ಕೆ- ಸೋಮವಾರದ ಬದಲು ಆದಿತ್ಯವಾರ ಸಂತೆ-ಅಧ್ಯಕ್ಷರ ಘೋಷಣೆ; ಕಿಲ್ಲೆ ಮೈದಾನದಲ್ಲಿ ಸೋಮವಾರವೇ ಸಂತೆ-ಬಿಜೆಪಿ ಸದಸ್ಯರ ಆಗ್ರಹ

Puttur_Advt_NewsUnder_1
Puttur_Advt_NewsUnder_1

kille1 kille2ಪುತ್ತೂರು:ವಾರದ ಸಂತೆ ವಿಚಾರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ’ಪುತ್ತೂರು ಕಿಲ್ಲೆ ಮೈದಾನದಲ್ಲಿ ಆದಿತ್ಯವಾರ ಸಂತೆ’ ಮಾಡುವುದಾಗಿ ಅಧ್ಯಕ್ಷರು ಘೋಷಣೆ ಮಾಡಿದಾಗ ಬಹುಮತ ಹೊಂದಿರುವ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ’ಕಿಲ್ಲೆ ಮೈದಾನದೊಳಗೆ ಸೋಮವಾರವೇ ಸಂತೆ’ ನಡೆಯಬೇಕೆಂದು ಆಗ್ರಹಿಸಿ, ಈ ವಿಚಾರವನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಿದ ಬೆನ್ನಲ್ಲೇ ಅಧ್ಯಕ್ಷರು ಸಭೆ ಮುಗಿಯಿತು ಎಂದು ಘೋಷಿಸಿ ಹೊರನಡೆದ ಹಾಗೂ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಘೋಷಣೆ ಕೂಗಿದ ಮತ್ತು ಸೋಮವಾರ ಎಪಿಎಂಸಿಯಲ್ಲಿ, ಆದಿತ್ಯವಾರ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯಲಿ ಎಂದು ಆಡಳಿತ ಸದಸ್ಯರು ಜೈಕಾರ ಹಾಕಿದ ಘಟನೆ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ನಗರಸಭೆಯ ಮೀಟಿಂಗ್ ಹಾಲ್‌ನಲ್ಲಿ ದ.೯ರಂದು ಮೂರು ಅಜೆಂಡಾ ಕುರಿತು ನಗರಸಭೆ ವಿಶೇಷ ಸಾಮಾನ್ಯ ಸಭೆಯು ಅಧ್ಯಕ್ಷೆ ಜಯಂತಿ ಬಲ್ನಾಡುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸದಸ್ಯ ಮಹಮ್ಮದ್ ಆಲಿಯವರು ಮಾತನಾಡಿ ಸಂತೆಯ ವಿಚಾರವಾಗಿ ಸಹಾಯಕ ಕಮೀಷನರ್‌ರವರ ಆದೇಶಕ್ಕೆ ನಾವು ವಿರೋಧ ಮಾಡಿಲ್ಲ.ಮೂವರು ವಕೀಲರ ಅಭಿಪ್ರಾಯದಲ್ಲಿ ಇಬ್ಬರ ಅಭಿಪ್ರಾಯ ಎ.ಸಿಯವರ ಪರವಾಗಿದ್ದರಿಂದ ಬಹುಮತದ ಆಧಾರದಲ್ಲಿ ಸಂತೆಗೆ ಕಿಲ್ಲೆ ಮೈದಾನದಲ್ಲಿ ಅವಕಾಶ ಕೊಡಲಾಗಿಲ್ಲ ಎಂದರಲ್ಲದೆ ಸಂತೆಯಿಂದ ಮುಂದಕ್ಕೆ ತೊಂದರೆ ಆಗಬಾರದು.ಇಲ್ಲಿ ನಾನು ಹೇಳಿದ್ದೇ ಆಗಬೇಕು, ನನ್ನ ಮಾತೇ ನಡೆಯಬೇಕು ಎಂಬುದು ಸಂತೆಯ ವಿಚಾರದಲ್ಲಿ ಆಗುವುದಿಲ್ಲ.ಇದಕ್ಕೆ ಕಾನೂನು ಇದೆ.ಬೇಕಾದರೆ ಲೀಗಲ್ ಒಪೀನಿಯನ್ ಓದಿ ಹೇಳಬಹುದು ಎಂದರು.ಸದಸ್ಯ ಜೀವಂಧರ್ ಜೈನ್‌ರವರು ಮಾತನಾಡಿ ವಕೀಲರು ಕೊಟ್ಟ ಅಭಿಪ್ರಾಯಕ್ಕೆ ಕಚೇರಿ ಟಿಪ್ಪಣಿ ಓದಿ ಎಂದರು.ವಕೀಲರು ಕೊಟ್ಟ ಅಭಿಪ್ರಾಯಕ್ಕೆ ಕಚೇರಿ ಟಿಪ್ಪಣಿ ಇರುವುದಿಲ್ಲ ಎಂದು ಹೇಳಿದ ಮಹಮ್ಮದ್ ಆಲಿಯವರು ನಗರಸಭೆ ವಕೀಲರಾದ ಎನ್.ಕೆ.ಜಗನ್ನಿವಾಸ್ ರಾವ್ ಮತ್ತು ಕರುಣಾಕರ್ ರೈಯವರು ಎ.ಸಿ. ಆದೇಶದ ಪರ ನೀಡಿದ ಅಭಿಪ್ರಾಯವನ್ನು ಓದಿದರು.ಇನ್ನೋರ್ವ ವಕೀಲ ನಾಗರಾಜ್‌ರವರ ಅಭಿಪ್ರಾಯ ಪೂರ್ಣವಾಗಿ ಎ.ಸಿ.ಆದೇಶದ ಪರವಿಲ್ಲ ಎಂದರು. ಕಿಲ್ಲೆ ಮೈದಾನದಲ್ಲ ನಡೆಸಲು ಸಾಧ್ಯವಿಲ್ಲ ಎಂದು ಶಕ್ತಿ ಸಿನ್ಹಾರವರು ಹೇಳಿದಾಗ ಆಕ್ಷೇಪಿಸಿದ ರಾಜೇಶ್ ಬನ್ನೂರುರವರು ಎ.ಸಿ.ಯವರಿಗೆ ಆದೇಶ ಮಾಡಲು ಬರುವುದಿಲ್ಲ.ಎ.ಸಿ.ಕಚೇರಿಯಲ್ಲಿ ನಡೆದ ಸಭೆಯಲ್ಲಿ ನನ್ನ ಆದೇಶ ಪೂರ್ಣ ಮಟ್ಟದಲ್ಲ ಎಂದು ಅವರೇ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಿಲ್ಲೆ ಮೈದಾನದ ಒಳಗೆ ಸಂತೆ ಮಾಡಬಹುದಲ್ವಾ ಎಂದರು.ಕಿಲ್ಲೆ ಮೈದಾನದ ಒಳಗೆ ೨೬೦ ಮಂದಿ ವ್ಯಾಪಾರಸ್ಥರನ್ನು ಕೂತುಕೊಳಿಸಲು ಸಾಧ್ಯವೇ ಎಂದು ಆಲಿ ಪ್ರಶ್ನಿಸಿದರು.ಯಾಕೆ ಆಗುವುದಿಲ್ಲ ಎಂದು ಜೀವಂಧರ್ ಜೈನ್ ಹೇಳಿದಾಗ ಶಕ್ತಿಸಿನ್ಹರವರು ಮಾತನಾಡಿ ಪುರಸಭೆ ನಗರಸಭೆ ಆದ ಬಳಿಕ ಹಂತ ಹಂತವಾಗಿ ವ್ಯಾಪಾರಗಳು ಹೆಚ್ಚಾಗುತ್ತವೆ,ವ್ಯಾಪಾರಿಗಳು ಹೆಚ್ಚಾಗುತ್ತಾರೆ ಇಂತಹ ಸಂದರ್ಭದಲ್ಲಿ ಕಿಲ್ಲೆ ಮೈದಾನದಲ್ಲಿ ಸಂತೆ ಸಾಧ್ಯವಿಲ್ಲ ಎಂದರು.ಈ ನಡುವೆ ಜೀವಂಧರ್ ಜೈನ್ ಮತ್ತು ಶಕ್ತಿಸಿನ್ಹರ ನಡುವೆ ಬಿರುಸಿನ ಚರ್ಚೆಗಳು ಜೋರಾಗಿ ನಡೆದವು.ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡರು ಮಾತನಾಡಿ ಕಿಲ್ಲೆ ಮೈದಾನದಲ್ಲೇ ಸಂತೆ ನಡೆಯಲು ಅವಕಾಶ ಮಾಡಬೇಕು ಎಂದರು.ಮಹಮ್ಮದ್ ಆಲಿಯವರು ಮಾತನಾಡಿ ಸಂತೆ ವಿಚಾರದಲ್ಲಿ ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ.ಸಂತೆ ಕಿಲ್ಲೆ ಮೈದಾನದಲ್ಲಿ ಮಾಡಲು ನಾವು ತಯಾರಿದ್ದೇವೆ.ಆದರೆ ಎಲ್ಲಾ ವ್ಯಾಪಾರಸ್ಥರನ್ನು ಕಿಲ್ಲೆ ಮೈದಾನದ ಒಳಗೆ ಕೂತುಕೊಳಿಸಲು ಸಾಧ್ಯವಿಲ್ಲ.ಸಂತೆ ಉಳಿಯಬೇಕೆಂಬುದು ನಮ್ಮ ಆಡಳಿತದ ಅಭಿಪ್ರಾಯ.ಎಪಿಎಂಸಿಗೆ ಸ್ಥಳಾಂತರ ಆದ ಬಳಿಕ ಅಲ್ಲಿ ಸಂತೆ ಯಶಸ್ವಿಯಾಗಿ ನಡೆಯುತ್ತಿಲ್ಲ ಎಂದೂ ನಮಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿ ಸಂತೆ ಉಳಿಸುವ ಕೊನೆಯ ತೀರ್ಮಾನಕ್ಕೆ ಬರಬೇಕು.ಹಾಗಾಗಿ ಈ ಹಿಂದೆ ಸಂತೆ ರಸ್ತೆಯಲ್ಲಿ ನಡೆದ ಹಾಗೆ ಅವಕಾಶ ಕೊಟ್ಟರೆ ಮಾತ್ರ ಸಂತೆ ನಡೆಯುತ್ತದೆ ಹೊರತು ಕಿಲ್ಲೆ ಮೈದಾನದ ಒಳಗೆ ಸಂತೆ ಮಾಡಲು ಸಾಧ್ಯವಿಲ್ಲವಾದ್ದರಿಂದ ಸೋಮವಾರದ ಬದಲು ಬೇರೆ ದಿನ ಸಂತೆ ಮಾಡುವ ಮೂಲಕ ಸಂತೆಯನ್ನು ಉಳಿಸುವ.ಇದರಲ್ಲಿ ನಮ್ಮಲ್ಲಿ ಪ್ರತಿಷ್ಠೆ ಬೇಡ.ಸೋಮವಾರ ಎಪಿಎಂಸಿಯಲ್ಲಿ ಸಂತೆ ನಡೆಯಲಿದೆ.ತಾತ್ಕಾಲಿಕವಾಗಿ ಆದಿತ್ಯವಾರ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯಲಿ.ಒಟ್ಟಿನಲ್ಲಿ ಎರಡು ದಿನ ಸಂತೆ ಆಗಲಿ ಎಂದು ಹೇಳಿದರು.ಆಕ್ಷೇಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಭಂಡಾರಿಯವರು ಮಾತನಾಡಿ ಈ ಹಿಂದೆ ಕಿಲ್ಲೆ ಮೈದಾನದಲ್ಲಿ ಸಂತೆ ಮಾಡಲು ಆಗುವುದೇ ಇಲ್ಲ ಎಂದು ಹೇಳಿದ ಬಳಿಕ ಇದೀಗ ಮತ್ತೆ ಕಿಲ್ಲೆ ಮೈದಾನಕ್ಕೆ ಹೇಗೆ ಸಂತೆ ಬಂತು ಎಂದರು.ಧ್ವನಿಗೂಡಿಸಿದ ರಾಜೇಶ್ ಬನ್ನೂರುರವರು ೧೯೭೩ ಆಕ್ಟ್ ಪ್ರಕಾರ ಸಂತೆ ವಿಚಾರದಲ್ಲಿ ಎ.ಸಿಯವರಿಗೆ ಅಧಿಕಾರ ಇಲ್ಲ ಎಂದು ನಾನು ಅಂದೇ ಹೇಳಿದ್ದೇನೆ.ಈ ನಿಟ್ಟಿನಲ್ಲಿ ಸಂತೆ ಆದಿತ್ಯವಾರ ಬೇಡ.ಸೋಮವಾರವೇ ಕಿಲ್ಲೆ ಮೈದಾನದಲ್ಲೇ ನಡೆಯಬೇಕು ಎಂದು ಒತ್ತಾಯಿಸಿದರು.ಚರ್ಚೆಯ ನಡುವೆಯೇ ’ಮುಂದೆ ಪ್ರತಿ ಆದಿತ್ಯವಾರ ಸಂತೆ ಕಿಲ್ಲೆ ಮೈದಾನದಲ್ಲಿ ನಡೆಯುತ್ತದೆ’ ಎಂದು ಅಧ್ಯಕ್ಷರು ಘೋಷಣೆ ಮಾಡಿದರು.ಆಕ್ಷೇಪಿಸಿದ ರಾಜೇಶ್ ಬನ್ನೂರು ಸಂತೆ ಆದಿತ್ಯವಾರ ಮಾಡಲು ನಮ್ಮ ಆಕ್ಷೇಪವಿದೆ.ಇದನ್ನು ದಾಖಲು ಮಾಡಬೇಕು ಮತ್ತು ಸದಸ್ಯರ ಅಭಿಪ್ರಾಯವನ್ನು ಮತಕ್ಕೆ ಹಾಕಿ ಎಂದರು. ಮಹಮ್ಮದ್ ಆಲಿಯವರು ಮಾತನಾಡಿ ಮತಕ್ಕೆ ಹಾಕಲು ಆಗುವುದಿಲ್ಲ ಎಂದರು.ಆಕ್ಷೇಪಿಸಿದ ಜೀವಂಧರ್ ಜೈನ್‌ರವರು ನಿಮಗೆ ಮತಕ್ಕೆ ಹಾಕಲು ಆಗುವುದಿಲ್ಲ ಎಂದಾದರೆ ಅಧ್ಯಕ್ಷರು ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.ಈ ನಡುವೆ ಬಿಜೆಪಿ ಸದಸ್ಯರು ಅಧ್ಯಕ್ಷರಿಗೆ ಧಿಕ್ಕಾರ ಕೂಗಿದರು.ಆಡಳಿತ ಪಕ್ಷದ ಸದಸ್ಯರು ಪುತ್ತೂರಿನಲ್ಲಿ ಮುಂದೆ ನಡೆಯುವ ಎರಡೂ ಸಂತೆಗೆ ಜೈಕಾರ ಹಾಕಿದರು.ಅಧ್ಯಕ್ಷೆ ಜಯಂತಿ ಬಲ್ನಾಡು ಸಭೆಯಿಂದ ತೆರಳಿದರು.

ನಗರಸಭೆಯನ್ನೇ ಕೋರ್ಟಿನಲ್ಲಿ ಪಾರ್ಟಿ ಮಾಡಿದ ಬನ್ನೂರು:

ಸಂತೆಯ ವಿಚಾರದಲ್ಲಿ ಸದಸ್ಯ ರಾಜೇಶ್ ಬನ್ನೂರುರವರು ನಗರಸಭೆಯನ್ನೇ ಕೋರ್ಟಲ್ಲಿ ಪಾರ್ಟಿ ಮಾಡಿದ್ದಾರೆ ಎಂದು ಮಹಮ್ಮದ್ ಆಲಿಯವರು ಸಭೆಯಲ್ಲಿ ಪ್ರಸ್ತಾಪಿಸಿದರು.ಆಕ್ಷೇಪಿಸಿದ ರಾಜೇಶ್ ಬನ್ನೂರುರವರು, ಸ್ವಾಮಿ ಗೊತ್ತಿಲ್ಲದೆ ಮಾತನಾಡಬೇಡಿ.ನಾವು ಸಹಾಯಕ ಕಮೀಷನರ್‌ರವರನ್ನು ಪಾರ್ಟಿ ಮಾಡಿದ್ದು ಎಂದರು. ಮಹಮ್ಮದ್ ಆಲಿಯವರು ಕೋರ್ಟು ವಕಾಲತು ಪ್ರತಿಯನ್ನು ಓದಿ ಇದರಲ್ಲಿ ನಗರಸಭೆಯ ವಿರುದ್ಧ ನಿಮ್ಮ ಹೆಸರಿದೆ ಎಂದರಲ್ಲದೆ ಓರ್ವ ಕೌನ್ಸಿಲರ್ ಆಗಿ ನಗರಸಭೆಯನ್ನೇ ಪಾರ್ಟಿ ಮಾಡುತ್ತೀರಿ ಎಂದಾದರೆ ನನಗೇನೂ ಅರ್ಥವಾಗುವುದಿಲ್ಲ ಎಂದರು.

ಚರ್ಚಿಸಿದ ವಿಚಾರ ರೆಕಾರ್ಡ್ ಮಾಡಬೇಕು: ರಾಜೇಶ್ ಬನ್ನೂರು ಮಾತನಾಡಿ ಸಭೆಯಲ್ಲಿ ನಡೆದ ಕಲಾಪಗಳಲ್ಲಿ ನಾವು ಮಾತನಾಡುವುದನ್ನು ನೀವು ನಿರ್ಣಯದಲ್ಲಿ ತಿರುಚಿ ಬರೆಯುತ್ತೀರಿ.ಈ ನಿಟ್ಟಿನಲ್ಲಿ ಇಲ್ಲಿ ನಡೆದ ಕಲಾಪಗಳನ್ನು ರೆಕಾರ್ಡ್ ಮಾಡಬೇಕು ಎಂದು ಹೇಳಿದರು.ಉತ್ತರಿಸಿದ ಮಹಮ್ಮದ್ ಆಲಿಯವರು ರೆಕಾರ್ಡ್ ಮಾಡುವ ವ್ಯವಸ್ಥೆ ಇಲ್ಲ ಎಂದರು.

ಎನ್.ಒ.ಸಿ ಕೊಡುವಾಗ ಪ್ರೊಸಿಜರ್ ತಿಳಿದುಕೊಳ್ಳಿ:

ಮುಕ್ರಂಪಾಡಿ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಬದಿ ೫ ಸೆಂಟ್ಸ್ ಸ್ಥಳವನ್ನು ಅಂಗನವಾಡಿ ಕೇಂದ್ರಕ್ಕೆ ಕಾದಿರಿಸುವ ಕುರಿತು ನಿರಾಕ್ಷೇಪಣಾ ಪತ್ರಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗೆ ಬರಕೊಡುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಆಕ್ಷೇಪ ಮಾಡಿದ ಜೀವಂಧರ್ ಜೈನ್‌ರವರು ಎನ್.ಒ.ಸಿ ಕೊಡುವಾಗ ತಹಶೀಲ್ದಾರ್ ಮುಖಾಂತರ ಬರಬೇಕೆ ಹೊರತು ವಿ.ಎಯವರಿಗೆ ಅಲ್ಲ.ಈ ಕುರಿತು ಪ್ರೊಸೀಜರ್ ತಿಳಿದುಕೊಳ್ಳಿ ಎಂದು ಹೇಳಿದರು.

ಸಾರ್ವಜನಿಕ ಹಿತಾಸಕ್ತಿಗೆ ಆಕ್ಷೇಪವಿಲ್ಲ:

ನಗರಸಭೆಯಲ್ಲಿ ಖಾತಾ ಬದಲಾವಣೆ, ಖಾತಾ ನಕಲು ಇ ತಂತ್ರಾಂಶದ ಮೂಲಕ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಲು ಮತ್ತು ಆಸ್ತಿ ತೆರಿಗೆ ಇನ್ನಿತರ ಸಂಪನ್ಮೂಲ ಕ್ರೋಢಿಕರಿಸಲು ಅಧಿಕಾರಿಗಳ ಕೊರತೆ ಇದೆ.ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿವೃತ್ತ ಕಂದಾಯ ಅಧಿಕಾರಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನಿಯೋಜಿಸಲು ಅನುಮೋದನೆ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಜೀವಂಧರ್ ಜೈನ್‌ರವರು ಮಾತನಾಡಿ ಎಷ್ಟು ಮಂದಿಯನ್ನು ತೆಗೆದುಕೊಳ್ಳುತ್ತಿರಿ.ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ಕೊಡುತ್ತಾರೋ ಎಂದು ಪ್ರಶ್ನಿಸಿದರಲ್ಲದೆ ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಳ್ಳುವ ನಿರ್ಣಯಕ್ಕೆ ನಮ್ಮ ಆಕ್ಷೇಪವಿಲ್ಲ ಎಂದರು. ನಗರಸಭೆ ಸದಸ್ಯರಾದ ಹರೀಶ್ ನಾಕ್, ರಾಮಣ್ಣ ಗೌಡ ಹಲಂಗ, ಅನ್ವರ್ ಕಾಸಿಂ, ಯಂ.ಚಂದ್ರಸಿಂಗ್, ವಾಣಿ ಶ್ರೀಧರ್, ಸುಜೀಂದ್ರ ಪ್ರಭು, ಜಯಲಕ್ಷೀ ಸುರೇಶ್, ವನಿತ ಕೆ.ಟಿ, ಯಶೋದಾ ಹರೀಶ್ ಪೂಜಾರಿ, ಜೆಸಿಂತ ಹಿಲರಿ ಮಸ್ಕರೇನ್ಹಸ್, ಮುಖೇಶ್ ಕೆಮ್ಮಿಂಜೆ, ಬಾಲಚಂದ್ರ, ನಾಮನಿರ್ದೇಶಿತ ಸದಸ್ಯರಾದ ಮಹೇಶ್ ಪಿ, ಜೋಕಿಂ ಡಿಸೋಜ, ರೂಪರೇಖಾ ಆಳ್ವ ಸಭೆಯಲ್ಲಿ ಉಪಸ್ಥಿತರಿದ್ದರು.

ನೀವು ಹೇಳಿ ನೀವು ಹೇಳಿ:

ಸಂತೆ ವಿಚಾರಕ್ಕೆ ಸಂಬಂಧಿಸಿ ಸದಸ್ಯರು ಅಭಿಪ್ರಾಯ ಮಂಡಿಸುವಂತೆ ಮಹಮ್ಮದ್ ಆಲಿಯವರು ಕೇಳಿಕೊಂಡಾಗ ಜೀವಂಧರ್ ಜೈನ್‌ರವರು ಮಾತನಾಡಿ ಇಲ್ಲಿ ಸಂತೆ ವಿಚಾರದಲ್ಲಿ ಚರ್ಚಿಸಲು ಸಭೆ ಕರೆದದ್ದು ನೀವು.ಹಾಗಾಗಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದರು.ಮಹಮ್ಮದ್ ಆಲಿಯವರು ಇಲ್ಲ ನೀವು ಮೊದಲು ಹೇಳಿ ಎಂದರು. ರಾಜೇಶ್ ಬನ್ನೂರುರವರು ನಾವು ಹೇಳಿದ್ದನ್ನು ಮತ್ತೆ ನೀವು ನಿರ್ಣಯದಲ್ಲಿ ತಿರುಚುತ್ತೀರಿ. ಹಾಗಾಗಿ ನೀವು ಮೊದಲು ಹೇಳಿ ಎಂದರು. ಮಹಮ್ಮದ್ ಆಲಿಯವರು ನಾವು ಹೇಳಿದನ್ನು ನೀವು ಒಪ್ಪುವುದಿಲ್ಲ.ನಿಮ್ಮ ಮಾತನ್ನು ಒಪ್ಪಬೇಕಾದರೆ ಅದು ಕಾನೂನಿನ ಚೌಕಟ್ಟಿನಲ್ಲಿ ಇರಬೇಕು ಎಂದರು. ಹೀಗೆ ಸ್ವಲ್ಪ ಹೊತ್ತು ನೀವು ಹೇಳಿ ನೀವು ಹೇಳಿ ಎನ್ನುವುದರಲ್ಲೇ ಸಮಯ ಕಳೆಯಿತು.


ಕಾನೂನಿನ ಚೌಕಟ್ಟಿನಲ್ಲಿ ಹೋರಾಟ -ರಾಜೇಶ್ ಬನ್ನೂರು

ಪುತ್ತೂರು: ಸಂತೆ ವಿಚಾರದಲ್ಲಿ ಬಹುಮತವಿರುವ ಬಿಜೆಪಿ ಸದಸ್ಯರ ಅಭಿಪ್ರಾಯವನ್ನು ತಿರಸ್ಕರಿಸಿರುವ ಕುರಿತು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಿzವೆ ಎಂದು ನಗರಸಭಾ ಸದಸ್ಯ ರಾಜೇಶ್ ಬನ್ನೂರು ತಿಳಿಸಿದ್ದಾರೆ.

ನಗರಸಭೆ ಸಾಮಾನ್ಯ ಸಭೆಯಿಂದ ಹೊರ ಬಂದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿ ಪುತ್ತೂರು ಸಂತೆಗೆ ಬರುವ ವ್ಯಾಪಾಸ್ಥರು, ಗ್ರಾಹಕರು ಹಾಗೂ ರೈತರ ಬಗ್ಗೆ ಒಟ್ಟು ನಗರಸಭೆಯ 12 ಮಂದಿ ಬಿಜೆಪಿ ಸದಸ್ಯರ ತೀರ್ಮಾನದಂತೆ ಕಿಲ್ಲೆ ಮೈದಾನದಲ್ಲಿ ವಾರದ ಸಂತೆಯನ್ನು ಸೋಮವಾರ ರಸ್ತೆಯಲ್ಲಿ ಬ್ಲಾಕ್ ಆಗದ ರೀತಿಯಲ್ಲಿ ಮಾಡಬೇಕು ಎನ್ನುವ ಉzಶವಿದೆ. ಈ ಕುರಿತು ನಗರಸಭೆ ಅಧ್ಯಕ್ಷರಿಗೆ ಮೀಟಿಂಗ್‌ನಲ್ಲಿ ಮನವಿ ಕೊಟ್ಟಿzವೆ. ಅದರ ಜೊತೆಯಲ್ಲಿ ಅವರ ರೂಲಿಂಗ್‌ನ ಬಗ್ಗೆ ಆಕ್ಷೇಪ ಹೇಳಿ. ಅದನ್ನು ಮತಕ್ಕೆ ಹಾಕಬೇಕೆಂದು ಹೇಳಿzವೆ. ಕಾನೂನಿನಲ್ಲಿ ಮತಕ್ಕೆ ಹಾಕುವ ಅವಕಾಶವಿದೆ. ಆದರೂ ಯಾವುದನ್ನೂ ಮತಕ್ಕೆ ಹಾಕದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಬಹುಮತವಿರುವ ಸದಸ್ಯರ ಅಭಿಪ್ರಾಯವನ್ನು ಕೇವಲ ೬ ಮಂದಿ ಆಡಳಿತ ಪಕ್ಷದ ಸದಸ್ಯರು ತಿರಸ್ಕರಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಹಾಗೂ ಶಾಸಕರಿಗೆ ಮನವಿ ನೀಡಿ. ಕಾನೂನಿನ ಚೌಕಟ್ಟಿನಲ್ಲಿ ಮುಂದೆ ಹೋರಾಟ ಮಾಡಲಿzವೆ ಎಂದು ತಿಳಿಸಿದ್ದಾರೆ.


ಸಂತೆಯನ್ನು ಕಿಲ್ಲೆ ಮೈದಾನದಿಂದ ಸ್ಥಳಾಂತರಿಸಲು ಹೊರಟಿದ್ದು ರಾಜೇಶ್ ಬನ್ನೂರು-ಮಹಮ್ಮದ್ ಆಲಿ ಆರೋಪ

ಪುತ್ತೂರು: ಕಿಲ್ಲೆ ಮೈದಾನದಲ್ಲೇ ಸಂತೆ ನಡೆಯಬೇಕೆಂದು ಪಟ್ಟು ಹಿಡಿಯುತ್ತಿರುವ ರಾಜೇಶ್ ಬನ್ನೂರುರವರು 2008ರಲ್ಲಿ ಅದೇ ಸಂತೆಯನ್ನು ಕಿಲ್ಲೆ ಮೈದಾನದಿಂದ ಬೇರೆ ಕಡೆ ಸ್ಥಳಾಂತರ ಮಾಡಲು ಹೊರಟ್ಟಿದ್ದು ಯಾಕೆ ಎಂದು ನಗರಸಭೆ ಸದಸ್ಯ ಮಹಮ್ಮದ್ ಆಲಿಯವರು ಪ್ರಶ್ನಿಸಿದ್ದಾರೆ.

ಅವರು ಸಾಮಾನ್ಯ ಸಭೆಯ ಬಳಿಕ ಅಧ್ಯಕ್ಷರ ಪರವಾಗಿ ಪತ್ರಕರ್ತರೊಂದಿಗೆ ಮಾತನಾಡಿ ೨೦೦೮ರಲ್ಲಿ ರಾಜೇಶ್ ಬನ್ನೂರುರವರೇ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ಸಂತೆಯನ್ನು ಬೇರೆ ಕಡೆ ಸ್ಥಳಾಂತರಕ್ಕೆ ಹೊರಟ್ಟಿದ್ದರು. ಆದರೆ ಈಗ ಸಂತೆ ಕಿಲ್ಲೆ ಮೈದಾನಲ್ಲೇ ನಡೆಯಬೇಕೆಂದು ಗೊಂದಲ ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಕೂಡಾ ಆದಿತ್ಯವಾರ ಸಂತೆ ಕಿಲ್ಲೆ ಮೈದಾನದಲ್ಲಿ ತಾತ್ಕಾಲಿಕವಾಗಿ ನಡೆಯಲಿ ಜೊತೆಗೆ ಸೋಮವಾರ ಎಪಿಎಂಸಿಯಲ್ಲೂ ನಡೆಯಲಿ ಎಂದು ತೀರ್ಮಾನಕ್ಕೆ ಬಂದಿzವೆ. ಈ ಕುರಿತು ಎ.ಸಿಯವರು ಕೂಡಾ ಮೌಖಿಕವಾಗಿ ಒಪ್ಪಿಕೊಂಡಿದ್ದಾರೆ. ರಾಜೇಶ್ ಬನ್ನೂರುರವರು ಸಂತೆ ಉಳಿಸುವ ಯೋಜನೆಯಲ್ಲಿದ್ದರೆ ತರಕಾರಿ ಬಝಾರ್‌ಗೆ ಬೆಂಬಲ ಕೊಡುತ್ತಿರಲಿಲ್ಲ. ಇತಿಹಾಸದ ಹಿನ್ನೆಲೆಯುಳ್ಳ ಸಂತೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿರುವ ರಾಜೇಶ್ ಬನ್ನೂರಿಗೆ ಈಗಿರುವ ಮಿನಿ ವಿಧಾನ ಸೌಧದ ಸ್ಥಳದಲ್ಲಿ ಐತಿಹಾಸಿಕ ಎ.ಸಿ. ಕಟ್ಟಡವನ್ನು ಉಳಿಸುವ ಕಾಳಜಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮುಂದಿನ ಆದಿತ್ಯವಾರ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯುವ ಚಿಂತನೆ ನಡೆಸಿzವೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.