ರಾಷ್ಟ್ರಮಟ್ಟದ ಇಂಗ್ಲೀಷ್ ನಾಟಕ ಸ್ಪರ್ಧೆ; ಪಾಪೆಮಜಲು ಸರಕಾರಿ ಪ್ರೌಢಶಾಲಾ ತಂಡ ದ್ವಿತೀಯ- ರಾಜ್ಯವನ್ನು ಪ್ರತಿನಿಧಿಸಿದ್ದ ಏಕೈಕ ಸರಕಾರಿ ಪ್ರೌಢಶಾಲೆ

Puttur_Advt_NewsUnder_1
Puttur_Advt_NewsUnder_1

papemajalu

ಪುತ್ತೂರು: ಕೇಂದ್ರ ಸರಕಾರದ ರಾಷ್ಟ್ರೀಯ ಜನಸಂಖ್ಯಾ ಯೋಜನೆ-ಎನ್‌ಪಿಇಪಿ ಇಲಾಖೆಯಡಿ ನಡೆದ ಏಡ್ಸ್ ಸೋಂಕಿತ ಹದಿಹರೆಯದವರನ್ನು ಬದಲಾವಣೆ ಮಾಡುವ ರೋಲ್ ಪ್ಲೇ (ಪಾತ್ರಾಭಿನಯ) ಇಂಗ್ಲೀಷ್ ನಾಟಕ ಸ್ಪರ್ಧೆಯಲ್ಲಿ ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಪಡೆದಿದೆ. ಕರ್ನಾಟಕವನ್ನು ಪ್ರತಿನಿಧಿಸಿದ ಏಕೈಕ ಸರಕಾರಿ ಪ್ರೌಢಶಾಲೆ ಇದಾಗಿದ್ದು, ಪಾಪೆಮಜಲು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅರ್ಪಿತಾ, ಹರ್ಷಿಣಿ, ಧನ್ಯಶ್ರೀ, ತೇಜಶ್ರೀ, ಉದನೇಶ್ವರರವರ ತಂಡ ದ್ವಿತೀಯ ಪ್ರಶಸ್ತಿ ಗಳಿಸಿದೆ. ತಂಡಕ್ಕೆ ಶಾಲಾ ಶಿಕ್ಷಕ ಪ್ರಕಾಶ್ ಮೂಡಿತ್ತಾಯರವರು ಮಾರ್ಗದರ್ಶನ ನೀಡಿದ್ದರು.

papemajalu1

ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಾಲೆಯಲ್ಲಿ ಬಡ ಕುಟುಂಬದ ಮಕ್ಕಳೇ ವಿದ್ಯಾರ್ಜನೆಗೈಯುತ್ತಿದ್ದಾರೆ, ಆದರೆ ಬಡತನವಿದ್ದರೂ ತಮ್ಮ ಪ್ರತಿಭೆಗೆ ಏನೂ ಕೊರತೆಯಿಲ್ಲ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ, ಸರಕಾರಿ ಶಾಲೆಯ ಮಕ್ಕಳು ಇಂಗ್ಲೀಷ್ ನಾಟಕದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ನಮ್ಮ ಊರಿಗೆ ಮಾತ್ರವಲ್ಲದೇ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಲು ಹೋದ ವಿದ್ಯಾರ್ಥಿಗಳಿಗೆ ಅರಿಯಡ್ಕ ಗ್ರಾ.ಪಂ ನಿಂದ ರೂ.2,000 ಪ್ರೋತ್ಸಾಹಧನ ಹೊರತುಪಡಿಸಿ ಬೇರಾವುದೇ ಇಲಾಖೆ, ಸರಕಾರ, ಜನಪ್ರತಿನಿಧಿಗಳಿಂದ ಪ್ರೋತ್ಸಾಹ ಬಾರದಿರುವುದು ಬೇಸರ ತಂದಿದೆ, ಇನ್ನಾದರೂ ಇಂತಹ ವಿದ್ಯಾರ್ಥಿಗಳಿಗೆ ಸರಕಾರದಿಂದ ಪ್ರೋತ್ಸಾಹ, ಗೌರವ ಸಿಗಲಿ ಎಂದು ವಿನಂತಿಸುತ್ತಿದ್ದೇನೆ.

-ಅಮ್ಮಣ್ಣ ರೈ ಡಿ. ಎಸ್‌ಡಿಎಂಸಿ ಕಾರ್ಯಾಧ್ಯಕ್ಷರು,

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.