Breaking News

ನರಿಮೊಗರು ಯುವಕ ಮಂಡಲಕ್ಕೆ ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕು ಯುವಜನ ಒಕ್ಕೂಟ ಕೊಡಮಾಡುವ ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿಗೆ ನರಿಮೊಗರು ಯುವಕ ಮಂಡಲವು ಆಯ್ಕೆಗೊಂಡಿದೆ. ಕುದ್ಮಾರಿನಲ್ಲಿ ನಡೆಯುವ ತಾಲೂಕು ಯುವಜನ ಮೇಳದ ಸಂದರ್ಭದಲ್ಲಿ ದ.10ರಂದು ರಾತ್ರಿ 8 ಗಂಟೆಗೆ ನಡೆಯುವ ಸಾಧನಾ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆಯಾಗಲಿದೆ. ದ.9ರ ಪತ್ರಿಕೆಯಲ್ಲಿ ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿಗೆ ನರಿಮೊಗರುವಿನ ಪ್ರಖ್ಯಾತಿ ಯುವತಿ ಮಂಡಲ ಆಯ್ಕೆಗೊಂಡಿತ್ತು ಎಂದು ತಪ್ಪಾಗಿ ಪ್ರಕಟಗೊಂಡಿತ್ತು ಎಂದು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳುರವರು ಹೇಳಿದ್ದಾರೆ.

ನರಿಮೊಗರು ಯುವಕ ಮಂಡಲದ ಪರಿಚಯ: 1973ನೇ ಇಸವಿಯಲ್ಲಿ ಆರಂಭಗೊಂಡ ಪುರುಷರಕಟ್ಟೆಯ ನರಿಮೊಗರು ಯುವಕ ಮಂಡಲದಲ್ಲಿ ತೀರ್ಥರಾಮ ಆಲಂಗರವರು ಸ್ಥಾಪಕ ಅಧ್ಯಕ್ಷರಾಗಿದ್ದು, ಈ ಯುವಕ ಮಂಡಲವು ಕಳೆದ 42 ವರ್ಷಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ, ಕಲಾ, ಕ್ರೀಡಾ ಕ್ಷೇತ್ರದಲ್ಲಿ ನಿರಂತರವಾಗಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಜತೆಗೆ ಯುವಜನ ಮೇಳದಲ್ಲೂ ಸಕ್ರಿಯವಾಗಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕಳೆದ 5 ವರ್ಷಗಳಿಂದ ಸುಧಾಕರ ಕುಲಾಲ್ ನಡುವಾಳ್‌ರವರು ಅಧ್ಯಕ್ಷರಾಗಿದ್ದು, ಕಳೆದ ಬಾರಿಯ ಯುವಜನ ಮೇಳವು ನರಿಮೊಗರು ಯುವಕ ಮಂಡಲದ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.