’ನಿಯಮ ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ’; ಸಂಚಾರ ಠಾಣೆಯಲ್ಲಿ ರಿಕ್ಷಾ ಚಾಲಕರೊಂದಿಗೆ ಎಡಿಷನಲ್ ಎಸ್ಪಿ ಡಾ| ವೇದಮೂರ್ತಿ ಮಾತುಕತೆ

Puttur_Advt_NewsUnder_1
Puttur_Advt_NewsUnder_1

niyama

ಪುತ್ತೂರು: ಶಾಲಾ ಮಕ್ಕಳನ್ನು ಕೊಂಡು ಹೋಗುವ ರಿಕ್ಷಾಚಾಲಕರು ನಿಯಮವನ್ನು ಪಾಲಿಸದಿದ್ದಲ್ಲಿ ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ| ವೇದಮೂರ್ತಿಯವರು ಹೇಳಿದರು.

ಅವರು ಡಿ.9ರಂದು ಪುತ್ತೂರು ಸಂಚಾರಿ ಠಾಣೆಯಲ್ಲಿ ಟ್ರಾಫಿಕ್ ಸಮಸ್ಯೆಯ ಕುರಿತು ರಿಕ್ಷಾ ಚಾಲಕರೊಂದಿಗೆ ಚರ್ಚಿಸಿದರು. ಶಾಲಾ ಮಕ್ಕಳನ್ನು ಕೊಂಡು ಹೋಗುವ ವಾಹನದವರು ಆದಷ್ಟು ಜಾಗರೂಕತೆಯಿಂದ ವಾಹನವನ್ನು ಚಲಾಯಿಸಬೇಕು. ಇತರ ಚಾಲಕರನ್ನು ನಿಯಮಪಾಲಿಸುವಂತೆ ಮಾಡಬೇಕು ಎಂದರು. ರಿಕ್ಷಾಚಾಲಕರು ಕಡ್ಡಾಯವಾಗಿ ಬ್ಯಾಡ್ಜ್ ಹೊಂದಿರಲೇಬೇಕು. ಇಲ್ಲವಾದಲ್ಲಿ ಅಪಘಾತ ಸಂಭವಿಸಿದರೆ ಪ್ರಯಾಣಿಕರಿಗೆ ಸಿಗುವ ವಿಮಾ ಹಣ ಸಿಗುವುದಿಲ್ಲ. ಆದ್ದರಿಂದ ರಿಕ್ಷಾ ಚಾಲಕರು ಕಡ್ಡಾಯವಾಗಿ ಬ್ಯಾಡ್ಜ್ ಮಾಡಿಸಬೇಕು ಇಲ್ಲವಾದಲ್ಲಿ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ರಿಕ್ಷಾಗಳಿಗೆ ಬೇಕಾಬಿಟ್ಟಿಯಾಗಿ ಪರ್ಮೀಟ್ ನೀಡುತ್ತಿದ್ದು ಅದನ್ನು ನಿಯಂತ್ರಿಸಬೇಕು ಎಂದು ನಾವು ಹಲವಾರು ಮನವಿಗಳನ್ನು ನೀಡಿದ್ದೇವೆ ಮಾತ್ರವಲ್ಲದೆ ಪ್ರತಿಭಟನೆಯನ್ನು ಮಾಡಿದ್ದೇವೆ ಆದರೆ ಪರ್ಮಿಟನ್ನು ಇನ್ನೂ ನೀಡುತ್ತಲೇ ಇದ್ದಾರೆ ಎಂದು ರಿಕ್ಷಾಚಾಲಕರು ಹೇಳಿದರು. ಇದಕ್ಕೆ ಉತ್ತರಿಸಿದ ಡಾ| ವೇದಮೂರ್ತಿಯವರು ಈ ಕುರಿತು ಆರ್‌ಟಿಓದವರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ನೂತನ ಎಸ್‌ಐ ವಿಠಲ ಶೆಟ್ಟಿ, ರಿಕ್ಷಾ ಚಾಲಕರಾದ ರಾಜೇಶ್, ಸುರೇಶ್, ಕೆ.ಎಸ್ ಅಬ್ದುಲ್‌ರಝಾಕ್, ಚನಿಯಪ್ಪ ನಾಯ್ಕ, ರೋಹಿತ್ ಕುಮಾರ್, ಅಬ್ದುಲ್ ಗಫೂರ್, ರಝಾಕ್, ಮೊಹಮ್ಮದ್, ಆಶಿಕ್, ಕಾರ್ತಿಕ್, ಪ್ರಕಾಶ್, ವೆಂಕಪ್ಪ ಪೂಜಾರಿ, ಹಂಝ, ಉಪಸ್ಥಿತರಿದ್ದರು. ಸಭೆಯ ಬಳಿಕ  ಡಾ. ವೇದಮೂರ್ತಿಯವರು ನಗರದಲ್ಲಿ ಸಂಚರಿಸಿ ಟ್ರಾಫಿಕ್ ವ್ಯವಸ್ಥೆಯ ಕುರಿತು ಮಾಹಿತಿ ಸಂಗ್ರಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.