ಬೀಗಹಾಕಿದ್ದ ಗೇಟನ್ನು ಬೇರ್ಪಡಿಸಿ ಮನೆಯಂಗಳದಲ್ಲಿರಿಸಿದ್ದ ಕಾರು ಕಳವು

Puttur_Advt_NewsUnder_1
Puttur_Advt_NewsUnder_1

beega

ವಿಟ್ಲ : ಬೀಗಹಾಕಿದ್ದ ಗೇಟನ್ನು ಬೇರ್ಪಡಿಸಿ ಮನೆಯ ಅಂಗಳದಲ್ಲಿರಿಸಲಾಗಿದ್ದ ಕಾರನ್ನು ಕಳವು ಗೈದ ಘಟನೆ ಡಿ.7ರಂದು ರಾತ್ರಿ ವೇಳೆ ಅಡ್ಯನಡ್ಕ ಸಮೀಪ ನಡೆದ ಬಗ್ಗೆ ವರದಿಯಾಗಿದೆ. ವಿಟ್ಲ-ಕಾಸರಗೋಡು ಸಂಪರ್ಕ ರಸ್ತೆಯ ಮೈರ ನಿವಾಸಿ ಶಿಕ್ಷಕ ರಾಜಗೋಪಾಲ ಜೋಷಿಯವರ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಕಾರನ್ನು ಕಳವುಗೈದಿದ್ದಾರೆ. ಅಡ್ಯನಡ್ಕ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಜೋಷಿಯವರು ತನ್ನ ಮನೆಯಂಗಳದಲ್ಲಿ ಡಿ.೭ರಂದು ರಾತ್ರಿ ಎಂದಿನಂತೆ ಕಾರು ನಿಲ್ಲಿಸಿ ಗೇಟಿಗೆ ಬೀಗ ಹಾಕಿದ್ದರು. ಡಿ.೮ರಂದು ಬೆಳಗ್ಗೆ ಎದ್ದು ನೋಡಿದಾಗ ಆವರಣ ಗೋಡೆಯ ಪಕ್ಕದಲ್ಲಿ ಮನೆಯ ಗೇಟು ಕಂಡುಬಂದಿದ್ದು, ಕಾರನ್ನು ಕಳವುಗೈದಿದ್ದಾರೆ. ವಾರದ ಹಿಂದಷ್ಟೆ ಇದೇ ಪರಿಸರದ ಎರುಂಬು ಸಂಪರ್ಕ ರಸ್ತೆಯಲ್ಲಿನ ನಿವಾಸಿ ಇಂಜಿನಿಯರೊಬ್ಬರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಕಳ್ಳರು ಮನೆಯವರು ಎಚ್ಚರಗೊಂಡ ಕಾರಣ ಪರಾರಿಯಾಗಿದ್ದರು. ಕಳವಾದ ಕಾರಿನ ಮಾಲಿಕ ಜೋಷಿಯವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.