Breaking News

ಕುದ್ಮಾರಿನಲ್ಲಿ ತಾಲೂಕು ಯುವಜನ ಮೇಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

4

whatsapp-image-2016-12-10-at-5-43-16-pm whatsapp-image-2016-12-10-at-5-44-01-pm

ಪುತ್ತೂರು: ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ನೇಹಿತರ ಬಳಗ ಕುದ್ಮಾರು, ಮಹಿಳಾ ಮಂಡಲ ಕುದ್ಮಾರು, ಸ್ಕಂದಶ್ರೀ ಯುವಕ ಮಂಡಲ ಕುದ್ಮಾರು ಇವುಗಳ ಸಹಯೋಗದೊಂದಿಗೆ ಪುತ್ತೂರು ತಾಲೂಕು ಯುವಜನ ಒಕ್ಕೂಟ ಇದರ ಆಶ್ರಯದಲ್ಲಿ ತಾಲೂಕು ಯುವಜನ ಮೇಳವು ದ.10ರಂದು ಬೆಳಿಗ್ಗೆ ಕುದ್ಮಾರು ಸರಕಾರಿ ಉ.ಹಿ.ಪ್ರಾ ಶಾಲೆಯಲ್ಲಿ ಉದ್ಘಾಟನೆಗೊಂಡಿತು.

ತಾ.ಪಂ ಸದಸ್ಯೆ ರಾಜೇಶ್ವರಿಯವರು ದೀಪ ಬೆಳಗಿಸಿ ಯುವಜನ ಮೇಳವನ್ನು ಉದ್ಘಾಟಿಸಿದರು. ಬೆಳಂದೂರು ಗ್ರಾ.ಪಂ ಅಧ್ಯಕ್ಷೆ ಉಮೇಶ್ವರಿ ಅಗಳಿಯವರು ಡೊಳ್ಳು ಬಾರಿಸುವ ಮೂಲಕ ಯುವಜನ ಮೇಳದ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಯುವಜನ ಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ ಸದಸ್ಯೆ ಲಲಿತಾ ಈಶ್ವರ, ಬೆಳಂದೂರು ಗ್ರಾ.ಪಂ ಉಪಾಧ್ಯಕ್ಷೆ ಹರೀಶ್ ಕೆರೆನಾರು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು, ಕುದ್ಮಾರು ಶಾಲೆಯ ಮುಖ್ಯಗುರು ಜೂಲಿಯಾನ ಡಿ. ಸೋಜ, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಲತಾ ಪಿ. ಗೌಡ, ಕುದ್ಮಾರು ಮಹಿಳಾ ಮಂಡಲದ ಅಧ್ಯಕ್ಷ ರೇವತಿ ಕುದ್ಮಾರು, ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಸ್ನೇಹಿತರ ಬಳಗದ ಅಧ್ಯಕ್ಷ ಸೀತಾರಾಮ ಬರೆಪ್ಪಾಡಿ, ಸುಳ್ಯ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿದರು. ಸಹಾಯಕ ಯುವಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್ ಎಂ.,ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುದ್ಮಾರು ಶಾಲಾ ಶಿಕ್ಷಕ ಸೀತಾರಾಮ ಕೆ.ಜಿ ಕಾರ್ಯಕ್ರಮ ನಿರೂಪಿಸಿದರು. ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ಸದಸ್ಯರು ಜನಪದ ಶೈಲಿಯಲ್ಲಿ ಪ್ರಾರ್ಥಿಸಿದರು.

ಶಾಂತಿಮೊಗರುವಿನಿಂದ ಕುದ್ಮಾರು ಶಾಲೆಯವರೆಗೆ ಆಕರ್ಷಕ ಮೆರವಣಿಗೆ:

ಉದ್ಘಾಟನಾ ಕಾರ್ಯಕ್ರಮದ ಮೊದಲು ಶಾಂತಿಮೊಗರು ದ್ವಾರದ ಬಳಿಯಿಂದ ಕುದ್ಮಾರು ಶಾಲೆಯವರೆಗೆ ನಡೆದ ಆಕರ್ಷಕ ಮೆರವಣಿಗೆಗೆ ಬೆಳಂದೂರು ಗ್ರಾ.ಪಂ ಅಧ್ಯಕ್ಷೆ ಉಮೇಶ್ವರಿ ಅಗಳಿಯವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಲ್ಲಡ್ಕ ಗೊಂಬೆ, ಕೀಲು ಕುದುರೆ, ಬ್ಯಾಂಡ್ ವಾದ್ಯ, ಪ್ರಗತಿ ಆಂಗ್ಲಮಾಧ್ಯಮ ಕಾಣಿಯೂರು, ಷಣ್ಮುಖದೇವ ಪೆರ್ಲಂಪಾಡಿ, ಪಟ್ಟೆ ಪ್ರತಿಭಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಶಾಲಾ ಬ್ಯಾಂಡ್ ವಾಲಗವು ಮೆರವಣಿಗೆಗೆ ಮೆರುಗು ನೀಡಿತ್ತು. ಮೆರವಣಿಗೆಯಲ್ಲಿ ಕುದ್ಮಾರು ಶಾಲಾ ವಿದ್ಯಾರ್ಥಿಗಳು, ಯುವಜನ ಮೇಳದ ಸಂಘಟಕರು, ಅತಿಥಿಗಳು, ಪಾಲ್ಗೊಂಡಿದ್ದರು.

  • 6
  • 1
  • 2
  • 3
  • 4
  • 5
  • whatsapp-image-2016-12-10-at-1-06-22-pm

  • 5
  • 1
  • 2
  • 3
  • 4

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.