ಡಿ.19: ವಿದ್ಯಾರಶ್ಮಿಯಲ್ಲಿ ’ಶಿನಾರೆ ರಶ್ಮಿ’ ಲಗೋರಿ ಪಂದ್ಯಕೂಟ – 2016

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜನಪದೀಯ ಕ್ರೀಡೆಯಾದ ಲಗೋರಿಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ 2014ರಲ್ಲಿ ಆರಂಭವಾದ ’ಶಿನಾರೆ ರಶ್ಮಿ’ ಲಗೋರಿ ಪಂದ್ಯಕೂಟವು ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರವರ್ತನ ವಿಶ್ವಸ್ಥ ಮಂಡಳಿಯಾದ ಎಸ್.ಎನ್.ಆರ್, ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ನಡೆಯುತ್ತಿದೆ. ದಿವಂಗತ ಶೀಂಟೂರು ನಾರಾಯಣ ರೈ ಯವರ ಆಶಯದಂತೆ ಕಾರ್ಯಪ್ರವೃತ್ತರಾಗಿರುವ ಮಂಡಳಿಯ ಆಡಳಿತ ವಿಶ್ವಸ್ಥ ಸವಣೂರು ಕೆ.ಸೀತಾರಾಮ ರೈಯವರ ಮಾರ್ಗದರ್ಶನದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯವರಾದ ಅಶ್ವಿನ್ ಎಲ್. ಶೆಟ್ಟಿಯವರ ಮುತುವರ್ಜಿಯೊಂದಿಗೆ ನಡೆಯುತ್ತಿದೆ. ಈ ಬಾರಿ ತೃತೀಯ ಆವೃತ್ತಿಯಾದ ಪುತ್ತೂರು ತಾಲೂಕು ಮಟ್ಟದ ಈ ಪಂದ್ಯಕೂಟದಲ್ಲಿ ಪ್ರಾಥಮಿಕ ಶಾಲಾವಿಭಾಗ (ಹುಡುಗ-ಹುಡುಗಿ), ಪ್ರೌಢಶಾಲಾ ವಿಭಾಗ (ಹುಡುಗ-ಹುಡುಗಿ) ಮತ್ತು ಸಾರ್ವಜನಿಕ ವಿಭಾಗ (ಪುರುಷ- ಮಹಿಳೆ) ಹೀಗೆ ಒಟ್ಟು ಆರು ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಮೊದಲು ನೊಂದಾಯಿಸಿಕೊಂಡ ೮ ತಂಡಗಳಿಗೆ ಮಾತ್ರ ಅವಕಾಶವಿದ್ದು ಒಟ್ಟು 48 ತಂಡಗಳಿಗೆ ಅವಕಾಶವಿದೆ. ಸುಮಾರು 15,500/- ರೂ. ಗಳ ಬಹುಮಾನ ಮತ್ತು ಶಾಶ್ವತ ಫಲಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.

ಡಿ.19ರಂದು ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ಪೂರ್ವಾಹ್ನ ಗಂಟೆ 9 ರಿಂದ ನಡೆಯಲಿರುವ ಈ ಪಂದ್ಯಕೂಟದಲ್ಲಿ ಸುಳ್ಯ ತಾಲೂಕು ಲಗೋರಿ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರೀಡಾಭಿಮಾನಿಗಳಿಗೆ ಸಂಘಟಕರು ಸ್ವಾಗತ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು ೨೮೨೦೬೧, ೨೮೨೩೯೬, ೯೪೪೮೭೨೫೮೧೩, ೯೭೪೦೨೨೦೮೩೧, ೯೮೪೫೪೭೧೩೨೨ ಮತ್ತು ೯೧೦೮೮೨೯೦೬.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.