Breaking News

ಎತ್ತಿಹೊಳೆ ವಿರೋಧಿಸಿ, ಜೀವನದಿ ನೇತ್ರಾವತಿ ಉಳಿಸಿ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ಮರ್ದಾಳದಲ್ಲಿ ಸ್ವಾಗತ

Puttur_Advt_NewsUnder_1
Puttur_Advt_NewsUnder_1

2

ಕಡಬ: ಎತ್ತಿನಹೊಳೆ ಯೋಜನೆ ವಿರೋಧಿಸಿ ಸುಬ್ರಹ್ಮಣ್ಯದಿಂದ ಹೊರಟ “ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಯನ್ನು ಮರ್ದಾಳದಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಥಯಾತ್ರೆ ಸಮಿತಿಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಸರಕಾರ ಎತ್ತಿನ ಹೊಳೆ ಯೋಜನೆಯನ್ನು ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ರಥಯಾತ್ರೆ ಸಮಿತಿಯ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಪಂಚ ತೀರ್ಥಕ್ಕೆ ಹಾರ ಹಾಕಿದರು. ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ, ಮರ್ದಾಳ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಮಾಜಿ ತಾ.ಪಂ. ಅಧ್ಯಕ್ಷೆ ಪುಲಸ್ಯ ರೈ, ಕೊಣಾಜೆ ಗ್ರಾ.ಪಂ. ಉಪಾದ್ಯಕ್ಷ ಯಶೋದರ ಗೌಡ, ಐತ್ತೂರು ಗ್ರಾ.ಪಂ. ಸದಸ್ಯರಾದ ಧರ್ಮಪಾಲ, ಜಯಲಕ್ಷ್ಮಿ, ಶ್ರೀಧರ, ಮರ್ದಾಳ ಗ್ರಾ.ಪಂ. ಸದಸ್ಯ ದಾಮೋದರ ಗೌಡ ಡೆಪ್ಪುಣಿ,ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್ ರೈ ಮೈಲೇರಿ, ಕಡಬ ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ, ಕೊಂಬಾರು ಗ್ರಾ.ಪಂ. ಸದಸ್ಯ ಮಧುಸೂದನ್, ರೋಟರಿ ಕ್ಲಬ್‌ನ ಮಹಮ್ಮದ್ ಕುಂಞ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎ.ಬಿ.ಮನೋಹರ್ ರೈ ಪ್ರಮುಖರಾದ ಸತೀಶ್ ನಾಯಕ್, ನಾರಾಯಣ ಶೆಟ್ಟಿ ಅತ್ಯಡ್ಕ, ಪೂವಪ್ಪ ಗೌಡ ಐತ್ತೂರು, ಶ್ಯಾಮ್ ತೋಮಸ್, ಮಂಜುನಾಥ ಕೊಲಂತ್ತಾಡಿ, ಸ್ಕರೀಯ ಕಳಾರ, ಶಿವಪ್ರಸಾದ್ ಕೈಕುರೆ, ವಾಸುದೇವ ಬ್ಯೆಪಾಡಿಯ, ಹಮೀದ್ ತಂಞಳ್ ಮರ್ದಾಳ, ಫಯಾಜ್ ಕೆನಾರ, ಲೀಲಾವತಿ ಅಮರನಾಥ ಶೆಟ್ಟಿ, ಶೋಭಾ ಜಯಾನಂದ, ಶಾರದಾ ಜಯಕುಮಾರ್, ಮಂಜುನಾಥ ಶೆಟ್ಟಿ ನವಸುಮ, ವೆಂಕಟ್ರಮಣ ರಾವ್, ಬಿಳಿನೆಲೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ, ಹೊಸಮಠ ಸಿ.ಎ ಬ್ಯಾಂಕ್ ಅಧ್ಯಕ್ಷ ಕರುಣಾಕರ ಗೋಗಟೆ, ನಿವೃತ್ತ ತಹಸೀಲ್ದಾರ್ ಮೋಹನ್ ರಾವ್ ಆತೂರು, ಲಕ್ಷ್ಮೀ ನಾರಾಯಣ ಆತೂರು ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಸ್ವಾಗತಿಸಿ, ಪ್ರ.ಕಾರ‍್ಯದರ್ಶಿ ಪ್ರಕಾಶ್ ಎನ್.ಕೆ. ವಂದಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.