Breaking News

ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ಪುತ್ತೂರಿನಲ್ಲಿ ಧರ್ಮಜಾಗೃತಿ ಕಾರ್ಯಕ್ರಮ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ.ವಿ.ಎಸ್ ನೇತೃತ್ವದಲ್ಲಿ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1

1

ಪುತ್ತೂರು: ಶ್ರೀ ಆದಿಚುಂಚನಗಿರಿ ಕ್ಷೇತ್ರದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಧರ್ಮಜಾಗೃತಿಗಾಗಿ ದ.26 ರಿಂದ 31ರ ತನಕ ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ದ.10ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಗೌಡ ಸಂಘದ ವಿವಿಧ ವಲಯಗಳ ಪ್ರಮುಖರ ಮತ್ತು ಇತರ ತಾಲೂಕಿನ ಪ್ರಮುಖರ ಸಮಾಲೋಚನಾ ಸಭೆ ನಡೆಯಿತು.
ಕಾರ್ಯಕ್ರಮ ಸಮಾಜದ ಸ್ಥಾನಮಾನ ಎತ್ತಿ ತೋರಿಸಲಿ:
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಮಾತನಾಡಿ ಬಾಲಗಂಗಾಧರನಾಥ ಸ್ವಾಮೀಜಿಯವರ ೧೯೭೯ ಕಾರ್ಯಕ್ರಮ ಜಿಲ್ಲೆಯಲ್ಲಿ ಮಿಂಚಿನ ಸಂಚಾರವಾಗಿತ್ತು. ಅದೇ ರೀತಿ ಈ ಬಾರಿ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಕಾರ್ಯಕ್ರಮವೂ ಯಶಸ್ವಿಯಾಗಬೇಕು. ಇದು ಸಮಾಜದ ಸ್ಥಾನಮಾನವನ್ನು ಎತ್ತಿ ತೋರಿಸುವ ಕಾರ್ಯಕ್ರಮ ಆಗಬೇಕೇ ಹೊರತು ಶಕ್ತಿ ಪ್ರದರ್ಶನದ ಕಾರ್ಯಕ್ರಮವಾಗಬಾರದು ಎಂದು ಹೇಳಿದರು. ನಮ್ಮ ಸಮಾಜದ ದೊಡ್ಡ ದುರಂತ ಎಂದರೆ ಪ್ಲಾನ್ ಆಫ್ ಆಕ್ಷನ್ ಇಲ್ಲ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕೆಂದರು. ಸಮಾಜದ ಕೆಲಸ ನಮ್ಮ ಮನೆ ಕೆಲಸದಂತೆ ಮಾಡಬೇಕು. ಇಂತಹ ಕಾರ್ಯದಲ್ಲಿ ಪುತ್ತೂರು ಸಂಘ ನಿಜವಾಗಿಯೂ ಯಶಸ್ವಿಯಾಗಲಿದೆ ಎಂದು ಹೇಳಿದರು.
ಆಮಂತ್ರಣ ಪ್ರತಿಯೊಬ್ಬನ ಮನೆಗೆ ತಲುಪಬೇಕು: ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು ಮಾತನಾಡಿ ಸಮಾಜದ ಕಾರ್ಯಕ್ರಮದಲ್ಲಿ ಇಗೋವನ್ನು ಬಿಟ್ಟು ಕೆಲಸ ಮಾಡಬೇಕು. ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿಯೊಬ್ಬನ ಮನೆಗೂ ಆಮಂತ್ರಣ ತಲುಪುವ ವ್ಯವಸ್ಥೆ ಆಗಬೇಕು ಎಂದು ಹೇಳಿದರಲ್ಲದೆ ಕ್ಷೇತ್ರದಿಂದ ನೀಡುವ ಪ್ರಸಾದದ ಕುರಿತು ಮಾಹಿತಿ ನೀಡಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಮೋಹನ್ ಗೌಡ ಇಡ್ಯಡ್ಕ, ಉಪಾಧ್ಯಕ್ಷ ಸಂಜೀವ ಮಠಂದೂರು ವಿವಿಧ ಮಾಹಿತಿ ನೀಡಿದರು. ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಧ್ಯಕ್ಷ ಕೆಮ್ಮಾರ ಗಂಗಾಧರ ಗೌಡ, ಪ್ರಧಾನಕಾರ್ಯದರ್ಶಿ ರವಿ ಮುಂಗ್ಲಿಮನೆ, ಉಪಾಧ್ಯಕ್ಷರಾದ ಸಂಜೀವ ಮಠಂದೂರು, ಯು.ಪಿ.ರಾಮಕೃಷ್ಣ, ನಿಯೋಜಿತ ಅಧ್ಯಕ್ಷ ನಾಗಪ್ಪ ಗೌಡ ಮೊಮ್ಮೆಟ್ಟಿ, ಯುವ ಗೌಡ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು. ತಾಲೂಕಿನ ವಲಯಗಳಿಂದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.