ಪಕ್ಷಕ್ಕಾಗಿ ದುಡಿದವರನ್ನು ಕಷ್ಟ ಕಾಲದಲ್ಲಿ ಕೈಬಿಡುವ ಸಂಪ್ರದಾಯ ಬಿಜೆಪಿಯಲ್ಲಿಲ್ಲ ಶಾಂತಿತ್ತಡ್ಕ ಮಾಧವ ಗೌಡರ ಮನೆಯವರಿಗೆ ಡಿ.ವಿ ಸಾಂತ್ವನ

 

shanthithaddaಉಪ್ಪಿನಂಗಡಿ: ಪಕ್ಷಕ್ಕಾಗಿ ದುಡಿದವರನ್ನು ಅವರ ಕಷ್ಟಕಾಲದಲ್ಲಿ ಕೈಬಿಡುವ ಸಂಪ್ರದಾಯ ಬಿಜೆಪಿಯಲ್ಲಿಲ್ಲ. ಪಕ್ಷದ ಅಭಿವೃದ್ಧಿಗಾಗಿ ತಮ್ಮನ್ನು ಅರ್ಪಿಸಿಕೊಂಡವರಿಗೆ ಕಷ್ಟಗಳು ಬಂದಾಗ ಪಕ್ಷವು ಅವರ ನೆರವಿಗೆ ಬರಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.

ಕಳೆದ ಕೆಲವು ತಿಂಗಳುಗಳ ಹಿಂದೆ ಅನಾರೋಗ್ಯದಿಂದ ನಿಧನರಾದ  ಬಿಜೆಪಿ ಕಾರ್ಯಕರ್ತ, ಹಿರೇಬಂಡಾಡಿಯ ಶಾಂತಿತ್ತಡ್ಡ ಮಾಧವ ಗೌಡರ ಮನೆಗೆ ಶನಿವಾರ ಸಂಜೆ ಭೇಟಿ ನೀಡಿದ ಅವರು, ಅವರ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿದರಲ್ಲದೆ, ಪಕ್ಷದ ವತಿಯಿಂದ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿ ಈ ಮಾತುಗಳನ್ನಾಡಿದರು.

ಶಾಂತಿತ್ತಡ್ಡ ಮಾಧವ ಗೌಡರು ಪಕ್ಷಕ್ಕಾಗಿ, ಸಮಾಜಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡಿದ್ದವರು. ತನಗೆಂದು ಕೂಡಿಡದೇ ಎಲ್ಲವನ್ನೂ ಸಮಾಜಕ್ಕೆ ಅರ್ಪಿಸಿದವರು. ಅವರ ನಿಧನದಿಂದ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆಯಲ್ಲದೆ, ಅವರ ಪತ್ನಿ, ಮಕ್ಕಳಿಗೂ ಆರ್ಥಿಕ ಸಂಕಷ್ಟದ ದಿನಗಳು ಎದುರಾಗುವಂತಾಗಿದೆ. ಈ ಸಮಯದಲ್ಲಿ ಬಿಜೆಪಿ ಅವರ ನೆರವಿಗೆ ನಿಲ್ಲಲಿದೆ. ಇದೀಗ ಪಕ್ಷದ ವತಿಯಿಂದ ಅಲ್ಪ ಮೊತ್ತವನ್ನು ನೀಡಲಾಗಿದ್ದು, ಇನ್ನುಳಿದ ದಿನಗಳಲ್ಲಿ ಇನ್ನಷ್ಟು ದೇಣಿಗೆಯನ್ನು ಅವರ ಕುಟುಂಬಕ್ಕೆ ಪಕ್ಷ ಹಸ್ತಾಂತರಿಸಲಿದೆ ಎಂದರು.

ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರ ಮನೆಗೆ ಭೇಟಿ ನೀಡಿ ಅನಾರೋಗ್ಯದಿಂದ ಮಲಗಿದ ಸ್ಥಿತಿಯಲ್ಲಿರುವ ಅವರ ತಾಯಿಯ ಆರೋಗ್ಯ ವಿಚಾರಿಸಿದರು.

ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೇಶವ ಗೌಡ ಬಜತ್ತೂರು, ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ರೈ ಕೋಡಿಂಬಾಡಿ, ತಾಲೂಕು ಪಂಚಾಯತ್ ಸದಸ್ಯ ಮುಕುಂದ ಗೌಡ ಬಜತ್ತೂರು, ಪ್ರಮುಖರಾದ ಚಂದ್ರಶೇಖರ ಬಪ್ಪಳಿಗೆ, ಸುಂದರ ಗೌಡ ಅರ್ಬಿ, ಕುಂಟಿಕಾನ ಲಕ್ಷ್ಮಣ ಗೌಡ, ಪುರುಷೋತ್ತಮ ಮುಂಗ್ಲಿಮನೆ, ಶೌಕತ್ ಅಲಿ, ಮಾಲತಿ ಹರಿನಾರಾಯಣ, ಪ್ರಸಾದ್ ಭಂಡಾರಿ, ಮುದ್ದ, ಸಂತೋಷ್ ಕುಮಾರ್ ಪಂರ್ದಾಜೆ ಜನಾರ್ದನ ಗೌಡ, ರಮೇಶ್ ಭಂಡಾರಿ, ಉಮೇಶ್ ಶೆಣೈ, ವೆಂಕಟ್ರಮಣ ಗೌಡ ಕರೆಂಕಿ, ಚಿದಾನಂದ ಗೌಡ, ಯಶವಂತ ಸರೋಳಿ, ಸೊಮೇಶ್, ನಿತಿನ್ ತಾರಿತ್ತಡಿ, ವಿಠಲ ಗೌಡ, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.