ಮಾಜಿ  ಸೈನಿಕರ  ಕುಟುಂಬ ಸಮ್ಮಿಲನ; ಹಿರಿಯರಿಗೆ ಸನ್ಮಾನ, ಕರ್ತವ್ಯನಿರತರಿಗೆ ಗೌರವ, ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1

sainika1 sainika2

* ಮಕ್ಕಳಲ್ಲಿ ಭಾರತೀಯ ಸೈನ್ಯದ ಜಾಗೃತಿ ಮೂಡಿಸಬೇಕು – ರಾಧೇಶ್

* ಸಂಘ ಜೀವಿಯಾಗಿದ್ದರೆ ಕೆಲಸಕ್ಕೆ ಶಕ್ತಿ ಬರುತ್ತದೆ – ತುಳಸಿದಾಸ್

ಪುತ್ತೂರು: ಪುತ್ತೂರಿನ ಮಾಜಿ ಸೈನಿಕರ ಸಂಘದ ಕುಟುಂಬ ಸಮ್ಮಿಲನ ದ.11ರಂದು ಸೈನಿಕ ಭವನ ರಸ್ತೆಯಲ್ಲಿರುವ ಸೈನಿಕ ಭವನದಲ್ಲಿ ನಡೆಯಿತು. ಹಿರಿಯರಿಗೆ ಸನ್ಮಾನ, ಕರ್ತವ್ಯದಲ್ಲಿರುವವರಿಗೆ ಗೌರವ, ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ಹುತಾತ್ಮರಾದ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.

ಮಕ್ಕಳಲ್ಲಿ ಭಾರತೀಯ ಸೈನ್ಯದ ಜಾಗೃತಿ ಮೂಡಿಸಬೇಕು:

ಭಾರತೀಯ ಭೂ ಸೇನೆಯಲ್ಲಿ 18ನೇ ಗ್ರೆನೇಡಿಯರ್ಸ್ ಬೆಟಾಲಿಯನ್‌ನ ಲೆಪ್ಟಿನೆಂಟ್ ಆಗಿರುವ ರಾಧೇಶ್ ಆರ್‌ರವರು ಮಾತನಾಡಿ ಜೀವನದಲ್ಲಿ ಹಣ ಮಾಡುವುದು ಒಂದೇ ಅಲ್ಲ. ದೇಶಕ್ಕಾಗಿ ಏನು ಒಳ್ಳೆಯದನ್ನು ಮಾಡಬಹುದು ಎಂಬ ಕುರಿತು ಹಿರಿಯರು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಮಾಜಿ ಸೈನಿಕರು ತಮ್ಮ ಕರ್ತವ್ಯದ ದಿನದಲ್ಲಿ ಮಾಡಿದ ಉತ್ತಮ ಕೆಲಸಗಳನ್ನು ತಿಳಿಸುವ ಮೂಲಕ ಮಕ್ಕಳಲ್ಲಿ ದೇಶ ಸೇವೆಗಾಗಿ ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಸೈನ್ಯದಲ್ಲಿ ಕೇವಲ ಗಡಿ ಕಾಯುವ ಹುದ್ದೆ ಮಾತ್ರವಲ್ಲ ಬೇರೆ ಉನ್ನತ ಹುದ್ದೆಗಳಿವೆ ಅವುಗಳಿಗೆ ಬೇರೆ ಬೇರೆ ಮಾರ್ಗಗಳಿವೆ. ಈ ಕುರಿತು ಮಕ್ಕಳಿಗೆ ಮಾರ್ಗದರ್ಶನವನ್ನು ಪೋಷಕರು ಮತ್ತು ಕರ್ತವ್ಯ ನಿರ್ವಹಿಸಿದ ಸೈನಿಕರು ಕೊಡಬೇಕಾಗಿದೆ. ಒಟ್ಟಿನಲ್ಲಿ ಪ್ರತಿಯೊಂದು ಮನೆಯಿಂದ ಒಬ್ಬೊಬ್ಬ ಮಕ್ಕಳನ್ನು ಸೇನೆಗೆ ಕಳುಹಿಸಿ ಭಾರತಕ್ಕೆ ಒಳ್ಳೆಯ ಕೆಲಸ ಮಾಡುವಂತೆ ವಿನಂತಿಸಿದರು.

ಸಂಘ ಜೀವಿಯಾಗಿದ್ದರೆ ಕೆಲಸಕ್ಕೆ ಶಕ್ತಿ ಬರುತ್ತದೆ: ಸಂಘದ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಸುಲಭ ರೀತಿಯಲ್ಲಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲ ಸಂಘ ಜೀವಿಯಾಗಿರಬೇಕು. ಇಂದು ಸಂಘದ ಸದಸ್ಯರು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಅವರೆಲ್ಲರ ಸಹಕಾರ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಿಕ್ಕರೆ ಸಂಘದ ಕಟ್ಟಡವನ್ನು ಇನ್ನೂ ವಿಸ್ಕೃತಗೊಳಿಸಬಹುದು ಎಂದರು. ಮಾಜಿ ಸೈನಿಕರಾದ ನಾವೆಲ್ಲ ಜಾಗೃತ ಸಮಾಜ ಮತ್ತು ಶಿಸ್ತಿನ ಸಮಾಜ ನಿರ್ಮಾಣ ಮಾಡೋಣ ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ಯಾಪ್ಟನ್ ಚಿದಾನಂದ ನಾಡಾಜೆಯವರು ಮಾತನಾಡಿ ಸಂಘ ಒಂದು ಹಂತಕ್ಕೆ ತಲುಪಲು ಹಿರಿಯರು ಶ್ರಮ ಪಟ್ಟಿದ್ದಾರೆ. ಮುಂದೆ ಸಂಘದ ಉzಶದಂತೆ ಕೆಲವೊಂದು ಕೆಲಸ ಕಾರ್ಯ ಬಾಕಿ ಇದೆ. ಇದಕ್ಕೆ ಸಂಘದ ಸದಸ್ಯರು ಸಹಕಾರ ನೀಡಬೇಕು. ತಾವೆಲ್ಲ ತಮ್ಮ ಮೂಲವೇತನದಿಂದ ಸಂಘಕ್ಕೆ ಕೊಡುಗೆಯಾಗಿ ನೀಡುವಂತೆ ಮನವಿ ಮಾಡಿದರಲ್ಲದೆ ಇಂತಹ ಕುಟುಂಬ ಸಮ್ಮಿಲನದ ಮೂಲಕ ಮಾಜಿ ಸೈನಿಕರನ್ನು ಮಾತನಾಡಿಸುವ ಅವಕಾಶ ಲಭ್ಯವಾಗಿದೆ ಎಂದರು.

ಸನ್ಮಾನ: ಹಿರಿಯರಾದ ಮಾಜಿ ಸೈನಿಕ. ನಿವೃತ್ತ ಪ್ರಾಂಶುಪಾಲರಾಗಿರುವ ಕಾಂಚನ ಸುಬ್ಬರಾವ್‌ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇನ್ನೋರ್ವ ಸನ್ಮಾನಿತ  ದಿಕೋಸ್ಟರವರನ್ನು ಅವರ ಮನೆಯಲ್ಲಿ ಸನ್ಮಾನಿಸುವ ಕುರಿತು ನಿರ್ವಾಹಕರು ಮಾಹಿತಿ ನೀಡಿದರು.

ಕರ್ತವ್ಯದಲ್ಲಿರುವ ಸೇನಾನಿಗಳಿಗೆ ಗೌರವ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಇಲ್ಲಿನ ಎಪಿಎಂಸಿ ರಸ್ತೆಯ ರಾಧಾಕೃಷ್ಣ ಗೌಡ ಮತ್ತು ಉಷಾ ರಾಧಾಕೃಷ್ಣ ದಂಪತಿ ಪುತ್ರರಾದ ಭಾರತೀಯ ಭೂ ಸೇನೆಯಲ್ಲಿ ೧೮ನೇ ಗ್ರೆನೇಡಿಯರ್ಸ್ ಬೆಟಾಲಿಯನ್‌ನ ಲೆಪ್ಟಿನೆಂಟ್ ರಾಧೇಶ್ ಮತ್ತು ಭಾರತೀಯ ನೌಕಾ ಪಡೇಯಲ್ಲಿ ಕಮಿಷನ್ ಅಧಿಕಾರಿಯಾಗಿರುವ ರಂಜಿತ್ ಆರ್, ನೆಹರುನಗರ ನಿವಾಸಿಯಾಗಿದ್ದು ದೆಹಲಿಯಲಿ ಸುಬೇದಾರ್ ಆಗಿರುವ ಸುರೇಶ್ ಮತ್ತು ಪಡ್ನೂರು ನಿವಾಸಿಯಾಗಿದ್ದು ಸೈನಿಕರಾಗಿರುವ ಅಶೋಕ್‌ರವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಅಧಿಕ ಅಂಕ ಪಡೆದ ದೀಕ್ಷಾ ಮತ್ತು ನಿಮಾ ಹೆಚ್‌ರವನ್ನು ಅಭಿನಂದಿಸಲಾಯಿತು. ಕರ್ನಲ್ ಎಸ್.ಡಿ ರಮಾಕಾಂತ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ದೀಕ್ಷಾ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಯನ್.ನಾಗಪ್ಪ ಗೌಡ ವಂದಿಸಿದರು. ಮಾಜಿ ಸುಬೇದಾರ್ ರಮೇಶ್ ಬಾಬು ಕಾರ್ಯಕ್ರಮ ನಿರೂಪಿಸಿದರು.  ಸಭಾ ಕಾರ್ಯಕ್ರಮದ ಬಳಿಕ ಮಾಜಿ ಸೈನಿಕರ ಕುಟುಂಬ ಸಮ್ಮಿಲನದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದಯ ಕುಮಾರ್ ವಹಿಸಿದ್ದರು.

ರಾಜ್ಯದಲ್ಲೇ ಪ್ರಥಮವಾಗಿ ಸ್ವಂತ ಸ್ಥಳ ಪಡೆದು ಕೊಂಡ ಹೆಗ್ಗಳಿಕೆ ಪುತ್ತೂರು ಸೈನಿಕರ ಭವನಕ್ಕಿದೆ. ಪ್ರಸ್ತುತ ಸಂಘಕ್ಕೆ ಸಂಬಂಧಿಸಿ 0.4 ಸೆಂಟ್ಸ್ ಖಾಲಿ ಸ್ಥಳದಲ್ಲಿ ಕಟ್ಟಡ ಕಟ್ಟಲು ದಾನಿಗಳ ಸಹಕಾರ ಬೇಕಾಗಿದೆ. ಈ ನಿಟ್ಟಿನಲ್ಲಿ ಕಟ್ಟಡ ಕಟ್ಟಲು ಅಸಾಧ್ಯವಾದರೂ ಅಡಿಪಾಯ ಹಾಕುವ ಚಿಂತನೆ ನಡೆಸಿದ್ದು, ಸದಸ್ಯರು ಕಂತು ರೂಪದಲ್ಲಿಯಾದರೂ ಆರ್ಥಿಕ ನೆರವನ್ನು ನೀಡುವಂತೆ ವಿನಂತಿ.

ಜೋಸೆಫ್ ಡಿಸೋಜ, ಅಧ್ಯಕ್ಷರು ಮಾಜಿ ಸೈನಿಕರ ಟ್ರಸ್ಟ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.