ಕರ್ನಾಟಕ ಕಾರ್ಮಿಕ ಒಕ್ಕೂಟದಿಂದ ಚಿದಾನಂದ ಕಾಮತ್‌ರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1

c-kamath

* ಸಾಂಸ್ಕೃತಿಕ ಕ್ಷೇತ್ರದ ವಿಶಿಷ್ಟ ವ್ಯಕ್ತಿ – ಪುರಂದರ ಭಟ್

* ಆತ್ಮಸಂತೋಷಕ್ಕಾಗಿ ಚಟುವಟಿಕೆಗಳು ಅಗತ್ಯ – ಚಿದಾನಂದ ಕಾಮತ್

ಪುತ್ತೂರು: ಕಾರ್ಮಿಕ ಇಲಾಖೆಯಿಂದ ನಿವೃತ್ತಿಗೊಂಡಿರುವ ಚಿದಾನಂದ ಕಾಮತ್ ಕಾಸರಗೋಡುರವರಿಗೆ ಇಲ್ಲಿನ ಅನುರಾಗ ವಠಾರದಲ್ಲಿ ದ.11ರಂದು ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಸಾಂಸ್ಕೃತಿಕ ಕ್ಷೇತ್ರದ ವಿಶಿಷ್ಟ ವ್ಯಕ್ತಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಪುರಂದರ ಭಟ್‌ರವರು ಮಾತನಾಡಿ ಚಿದಾನಂದ ಕಾಮತ್‌ರವರು ಸಾಂಸ್ಕೃತಿಕ ಕ್ಷೇತ್ರದ ವಿಶಿಷ್ಟ ವ್ಯಕ್ತಿ. ಇವರು ಅನ್ಯಾನ್ಯ ಕಲಾಪ್ರಕಾರಗಳಲ್ಲಿ ಪರಿಶ್ರಮಿಸಿದವರಾಗಿ ವೃತ್ತಿ ಜೀವನವನ್ನು ಸಾರ್ಥಕಗೊಳಿಸಿದ ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ಅವರ ಸಾಂಸ್ಕೃತಿಕ ಬದುಕು ಇನ್ನೂ ವೃದ್ಧಿಸಲಿ ಎಂದು ಶುಭ ಹಾರೈಸಿದರು.

ಆತ್ಮಸಂತೋಷಕ್ಕಾಗಿ ಚಟುವಟಿಕೆಗಳು ಅಗತ್ಯ:  ಸನ್ಮಾನ ಸ್ವೀಕರಿಸಿದ ಚಿದಾನಂದ ಕಾಮತ್ ಕಾಸರಗೋಡುರವರು ಮಾತನಾಡಿ ನನ್ನ ವೃತ್ತಿ ಜೀವನ ಮತ್ತು ಪ್ರವೃತ್ತಿಯ ಕ್ಷೇತ್ರಗಳಲ್ಲಿ ಏನಾದರೂ ಅತೃಪ್ತಿಯ ಅನುಭವ ಆಗಿದ್ದರೆ ಅದು ಸಂತೋಷದ ದುಃಖವಾಗಿರುತ್ತದೆ. ವೃತ್ತಿಯನ್ನು ನಿಸ್ವಾರ್ಥ ಮತ್ತು ನಿಷ್ಠೆಯಿಂದ ನಿರ್ವಹಿಸಿzನೆ. ಪ್ರವೃತ್ತಿಯ ವಲಯದಲ್ಲೂ ಉತ್ತಮ ಕೆಲಸ ನಿರ್ವಹಿಸಿದ್ದೇನೆ. ಹಣದ ಮುಖ ನೋಡದೆ ಆತ್ಮಸಂತೋಷಕ್ಕಾಗಿ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬಂದಿದ್ದೇನೆ. ಯಾರಿಗೂ ನೋವುಂಟು ಮಾಡುವ ಕೆಲಸ ಮಾಡಿಲ್ಲ. ಒಂದು ಸಂಸ್ಥೆ ಒಳ್ಳೆಯ ಸಾಧನೆ ಮಾಡಿದರೆ ಅದಕ್ಕೆ ಸಾಕ್ಷಿಯಾಗಿ ಪ್ರಚಾರದ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ಕರ್ನಾಟಕ ರಿಕ್ಷಾ ಚಾಲಕ ಮಾಲ್ಹಕರ ಸಂಘದ ಅಧ್ಯಕ್ಷ ಜಯರಾಮ ಕುಲಾಲ್, ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ ಚಿದಾನಂದ ಕಾಮತ್‌ರಿಗೆ ಅಭಿನಂದನೆ ಸಲ್ಲಿಸಿದರು. ಕಟ್ಟಡ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಶೇಷಪ್ಪ ಕುಲಾಲ್ ಅತಿಥಿಗಳನ್ನು ಗೌರವಿಸಿದರು. ರಿಕ್ಷಾ ಚಾಲಕ ಮಾಲಕರ ಸಂಘದ ಗಿರೀಶ್ ನಾಯ್ಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಜಯರಾಮ ಕುಲಾಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.