ಗ್ರಾ.ಪಂ,. ಕಂದಾಯ ಇಲಾಖೆಯವರ ಪರಿಶೀಲನೆ ಬಳಿಕ ಅಗತ್ಯವಿದ್ದಲ್ಲಿ ಕೃಷಿಗಾಗಿ ಬೋರ್ ತೆಗೆಯಲು ಅನುಮತಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಡಿ.ಸಿ.ಭರವಸೆ-ಕೆಡೆಂಜಿ

Puttur_Advt_NewsUnder_1
Puttur_Advt_NewsUnder_1

 

ರೈತರ ಬಳಕೆಗೆ ನದಿ ನೀರು

ಪರಿಶೀಲಿಸಿ ಕ್ರಮ: ಸಚಿವ ರೈ

ಪಡುಮಲೆ ಅಭಿವೃದ್ಧಿ: ತಕ್ಷಣ

ಕ್ರಮಕ್ಕೆ ಡಿ.ಸಿ.ಗೆ ಸೂಚನೆ

ಶಾಂತಿಮೊಗರು ಸೇತುವೆ

ಮಾರ್ಚ್‌ಗೆ ಪೂರ್ಣ

ಪುತ್ತೂರು: ಜಿಲ್ಲೆಯಲ್ಲಿ ಕೃಷಿ ಉದ್ದೇಶಕ್ಕಾಗಿ ಬೋರ್‌ವೆಲ್ ಅನಿವಾರ್ಯವಾದಲ್ಲಿ ಕಂದಾಯ ಮತ್ತು ಗ್ರಾಮ ಪಂಚಾಯತ್ ಇಲಾಖೆಯವರು ಪರಿಶೀಲನೆ ನಡೆಸಿ ಅಗತ್ಯವೆಂದು ವರದಿ ನೀಡಿದಲ್ಲಿ ಅನುಮತಿ ನೀಡುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ.ಎ.ಜಗದೀಶ್ ತಿಳಿಸಿದ್ದಾರೆ ಎಂದು ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ.ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾನು ಈ ವಿಚಾರ ಪ್ರಸ್ತಾಪಿಸಿದ್ದಾಗಿ ಅವರು ಹೇಳಿದ್ದಾರೆ.ದ,ಕ.ಜಿಲ್ಲೆಯಲ್ಲಿ ಹೊಸದಾಗಿ ಬೋರ್‌ವೆಲ್ ತೆಗೆಯಲು ಇರುವ ನಿಷೇಧ ಮತ್ತು ನೇತ್ರಾವತಿ-ಕುಮಾರಧಾರಾ ನದಿಯಿಂದ ಕೃಷಿ ಚಟುವಟಿಕೆಗಳಿಗೆ ನೀರನ್ನು ತೆಗೆಯಬಾರದು ಎಂಬ ಆದೇಶದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಇಲ್ಲಿನ ರೈತರು ದೀರ್ಘಾವಧಿ ಬೆಳೆಯಾದ ಅಡಿಕೆ ಮತ್ತು ತೆಂಗನ್ನು ಕೃಷಿ ಮಾಡುತ್ತಾರೆ.ಈ ಬೆಳೆಗೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನೀರು ಅಗತ್ಯವಾಗಿ ಬೇಕಾಗಿದ್ದು ಬೋರ್‌ವೆಲ್ ನೀರಿನ ಆಶಯ ಅಗತ್ಯವಾಗಿದೆ ಮಾತ್ರವಲ್ಲದೆ ಕಿಂಡಿ ಅಣೆಕಟ್ಟು ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ತಾನು ಸಭೆಯಲ್ಲಿ ಒತ್ತಾಯಿಸಿದ್ದು ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಬೋರ್‌ವೆಲ್ ನಿಷೇಧ ಆದೇಶ ಮಾಡಲಾಗಿದೆ.ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅದ್ಯತೆಯನ್ನು ನೀಡಲಾಗುವುದು ಎಂದರು.ನಮ್ಮ ಜಿಲ್ಲೆಯಲ್ಲಿ ಬರಗಾಲ ಇಲ್ಲ, ಡ್ಯಾಂಗಳಲ್ಲಿ ಮುಂಜಾಗ್ರತೆಗಾಗಿ ನೀರನ್ನು ಶೇಖರಣೆ ಮಾಡುವ ಉದ್ದೇಶದಿಂದ ನದಿಯಿಂದ ಕೃಷಿ ಬಳಕೆಗೆ ನಿರ್ಬಂಧ ವಿಧಿಸಿದ್ದರೂ ಇದನ್ನು ರೈತರ ಹಿತಕ್ಕಾಗಿ ಬಳಕೆಯ ಬಗ್ಗೆ ಮುಂದೆ ಪರಿಶೀಲನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು ಎಂದು ಸತೀಶ್ ಕೆಡೆಂಜಿ ಸುದ್ದಿಗೆ ಮಾಹಿತಿ ನೀಡಿದ್ದಾರೆ.

ಪಡುಮಲೆ ಅಭಿವೃದ್ಧಿ: ಕೋಟಿ ಚೆನ್ನಯರ ಹುಟ್ಟೂರು ಪಡುಮಲೆ ಕ್ಷೇತ್ರಾಭಿವೃದ್ಧಿ ಕೆಲಸಗಳಿಗಾಗಿ ಸರಕಾರ 5 ಕೋಟಿ ಅನುದಾನ ಮುಂಜೂರು ಮಾಡಿದ್ದರೂ ಅಲ್ಲಿ ಮಾತ್ರ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ರಮಾನಾಥ ರೈಯವರು, ಅಲ್ಲಿ ಆಗಬೇಕಾದ ಕೆಲಸ ಮತ್ತು ಆಗಿರುವ ಕೆಲಸದ ಬಗ್ಗೆ ತಕ್ಷಣ ಎ.ಸಿ.ಯವರಿಂದ ವರದಿ ಪಡೆದುಕೊಂಡು ಮಂದಿನ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.

ಶಾಂತಿಮೊಗರು-ಕುದ್ಮಾರು ರಸ್ತೆ ಅಗಲೀಕರಣ, ಮರುಡಾಮರೀಕರಣ: ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ಅಡ್ಡಲಾಗಿ 13.80 ಕೋಟಿ ರೂ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯ ಕಾಮಗಾರಿ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.ಈ ಸೇತುವೆಯ ಬಳಿಯಿಂದ 1.200 ಮೀಟರ್ ದೂರದ ಕುದ್ಮಾರು ತನಕದ ರಸ್ತೆ ಡಾಮರೀಕರಣವನ್ನು ತಕ್ಷಣವೇ ಮಾಡಬೇಕಾಗಿದ್ದು ಈ ರಸ್ತೆ ಡಾಮರೀಕರಣ ಆಗದಿದ್ದರೆ ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸುವುದಾಗಿ ಪ್ರಸ್ತಾಪಿಸಿದ ವೇಳೆ ಉತ್ತರಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ರವರು  ಶಾಂತಿಮೋಗರು -ಕುದ್ಮಾರು ತನಕದ ರಸ್ತೆ ಡಾಮರೀಕರಣ, ಅಗಲೀಕರಣ ಕಾಮಗಾರಿಯನ್ನು ತಕ್ಷಣವೇ ಆರಂಭಿಸಲಾಗುವುದು, 2017 ರ ಮಾರ್ಚ್ ತಿಂಗಳಲ್ಲಿ ಸೇತುವೆ ಕಾಮಗಾರಿ ಮುಗಿಯುವ ವೇಳೆ ಶಾಂತಿಮೋಗರು- ಕುದ್ಮಾರು ರಸ್ತೆ ಕಾಮಗಾರಿಯೂ ಮುಗಿಯಲಿದೆ ಎಂದು ಹೇಳಿದ್ದಾರೆ ಎಂದು ಸತೀಶ್ ಕುಮಾರ್ ಕೆಡೆಂಜಿ ತಿಳಿಸಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.