ತಾ| ಮರಾಟಿ ವಿದ್ಯಾರ್ಥಿ ವೇದಿಕೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

1marati

1marati1

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ ಆಶ್ರಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪುತ್ತೂರು ತಾಲೂಕು ಮರಾಟಿ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ದ.11ರಂದು ನಡೆಯಿತು. ಸುರತ್ಕಲ್ ಎನ್‌ಐಟಿಕೆ ಕಾಲೇಜಿನ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನೇಶ್‌ರವರು ವಿದ್ಯಾರ್ಥಿ ವೇದಿಕೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಬಲ್ಮಠ ಮಹಿಳಾ ಸರಕಾರಿ ಕಾಲೇಜಿನ ಉಪನ್ಯಾಸಕಿ ಶಶಿಕಲಾರವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮರಾಟಿ ಸಮುದಾಯ ಶೈಕ್ಷಣಿಕವಾಗಿ ಇನ್ನೂ ಹಿಂದುಳಿದಿದೆ. ಅದನ್ನು ಹೋಗಲಾಡಿಸುವ ಕೆಲಸ ಸಂಘದಿಂದ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪಿ.ಎಂ. ಕೃಷ್ಣ ನಾಯ್ಕ ಕೃಷ್ಣನಗರ ಅವರು ಮಾತನಾಡಿ, ನಮ್ಮ ಸಂಘವು ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದು, ಇದಕ್ಕೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಲಿಖಿತ್ ಪಿ.ಎಸ್.ರವರು ಮಾತನಾಡಿ ಸಹಕಾರ ಕೋರಿದರು.

ವೇದಿಕೆಯಲ್ಲಿ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಶೀನಪ್ಪ ನಾಯ್ಕ, ಕೋಶಾಧಿಕಾರಿ ಸುಬ್ರಾಯ ನಾಯ್ಕ, ಯುವ ವೇದಿಕೆ ಅಧ್ಯಕ್ಷ ಶ್ಯಾಮ್ ಶ್ರವಣ್, ಮಹಿಳಾ ವೇದಿಕೆ ಅಧ್ಯಕ್ಷೆ ಮೋಹಿನಿ ಬಲ್ನಾಡು ಉಪಸ್ಥಿತರಿದ್ದರು.

ಆಶಾ ಪ್ರಾರ್ಥಿಸಿದರು. ವಿದ್ಯಾರ್ಥಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಲಿಖಿತಾ ಸ್ವಾಗತಿಸಿದರು. ಸಂಚಾಲಕ ದುಗ್ಗಪ್ಪ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಹ್ನವಿ ವಂದಿಸಿದರು. ವೇದಿಕೆಯ ಸಹ ಕಾರ್ಯದರ್ಶಿ ಟೀನಾ ಪಿ. ಕಾರ್ಯಕ್ರಮ ನಿರೂಪಿಸಿದರು.

ಪ್ರಮಾಣವಚನ ಸ್ವೀಕಾರ

ವಿದ್ಯಾರ್ಥಿ ವೇದಿಕೆಯ ಪದಾಧಿಕಾರಿಗಳಾಗಿ  ಲಿಖಿತ್ ಪಿ.ಎಸ್. ವಿವೇಕಾನಂದ ತಾಂತ್ರಿಕ ವಿದ್ಯಾಲಯ (ಅಧ್ಯಕ್ಷರು), ಯತೀಶ್, ಪ.ಪೂ.ಕಾಲೇಜು ಬೆಟ್ಟಂಪಾಡಿ, ಹರ್ಷಿತ, ಸಂತ ಫಿಲೋಮಿನಾ ಕಾಲೇಜು(ಉಪಾಧ್ಯಕ್ಷರು), ಲಿಖಿತಾ, ವಿವೇಕಾನಂದ ಕಾಲೇಜು (ಕಾರ್ಯದರ್ಶಿ), ಪ್ರಣಮ್, ಪ.ಪೂ.ಕಾಲೇಜು ಕುಂಬ್ರ, ಟೀನಾ ಪಿ,ಪ.ಪೂ.ಕಾಲೇಜು ಕೊಂಬೆಟ್ಟು (ಸಹ ಕಾರ್ಯದರ್ಶಿಗಳು), ಶರಣ್ಯ ಬಿಂದು, ಪ.ಪೂ.ಕಾಲೇಜು ಬೆಟ್ಟಂಪಾಡಿ(ಖಜಾಂಜಿ) ಹಾಗೂ ಕಾಲೇಜುವಾರು ಸಂಘಟನಾ ಕಾರ್ಯದರ್ಶಿಗಳಾಗಿ ಉಷಾ, ಬೆಟ್ಟಂಪಾಡಿ ಪದವಿ ಕಾಲೇಜು, ದಿವ್ಯಶ್ರೀ, ವಿವೇಕಾನಂದ ಪ.ಪೂ.ಕಾಲೇಜು, ತುಳಸಿ, ವಿವೇಕಾನಂದ ಪ.ಪೂ.ಕಾಲೇಜು, ಆಶಿಕಾ, ಪ.ಪೂ.ಕಾಲೇಜು ಕೊಂಬೆಟ್ಟು,ದೀಪಿಕಾ, ಪ.ಪೂ.ಕಾಲೇಜು ಬೆಟ್ಟಂಪಾಡಿ, ಪವಿತ್ರ, ಪ.ಪೂ.ಕಾಲೇಜು ಕೊಂಬೆಟ್ಟು, ಸುಶ್ಮಿತಾ, ಪ.ಪೂ.ಕಾಲೇಜು ಕೊಂಬೆಟ್ಟು, ಪ್ರತಿಮಾ, ಬೆಟ್ಟಂಪಾಡಿ ಪದವಿ ಕಾಲೇಜು, ಯಶಸ್ವಿನಿ, ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ಅವರು ಪ್ರಮಾಣವಚನ ಸ್ವೀಕರಿಸಿದರು. ದುಗ್ಗಪ್ಪ ಎನ್. ಪ್ರಮಾಣವಚನ ಬೋಧಿಸಿದರು. ನೂತನ ಪದಾಧಿಕಾರಿಗಳನ್ನು ಮಾತೃ ಸಂಘದ ಅಧ್ಯಕ್ಷ ಪಿ.ಎಂ. ಕೃಷ್ಣ ನಾಯ್ಕರವರು ಗುಲಾಬಿ ನೀಡಿ ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.