ನೋಟು ರದ್ದು  ಪರಿಣಾಮ:  ಲೇಖನ, ಅಭಿಪ್ರಾಯಗಳು ’ಕಾಯುವಿಕೆಗಿಂತ ಅನ್ಯ ತಪವಿಲ್ಲವಯ್ಯಾ!’

Puttur_Advt_NewsUnder_1
Puttur_Advt_NewsUnder_1

noteಮೋದಿ ಸರಕಾರ ಅಸ್ತಿತ್ವಕ್ಕೆ ಬಂದುದೇ ಕಪ್ಪು ಹಣ ಬಯಲಿಗೆಳೆಯುವ ಭರವಸೆಯಿಂದ. ಅಧಿಕಾರ ಬಂದ ಮೇಲೆ ಇಷ್ಟರವರೇಗೆ ಅವರನ್ನು ಈ ವಿಷಯದಲ್ಲಿ ತರಾಟೆಗೆಳೆದವರೆಷ್ಟೋ ಮಂದಿ. ಆದರೆ ಮೋದಿ ಹೇಳಿದ್ದಿಷ್ಟೆ… ಕಾದು ನೋಡಿ. ಈಗ ಕಾಳಧನವನ್ನು ಬಯಲಿಗೆಳೆಯುವ ಈ ಕ್ರಮವನ್ನು ಸಹ ಟೀಕಿಸುತ್ತಿರುವರೆಷ್ಟೋ ಮಂದಿ. ಈಗಲೂ ಮೋದಿ ಹೇಳುವುದಿಷ್ಟೇ… ಕಾದು ನೋಡಿ 50 ದಿನ ಸಮಯ ಕೊಡಿ.

ಹೌದು, ಸ್ವಲ್ಪ ವ್ಯವಸ್ಥೆಯಲ್ಲಿ ಅಸ್ತವ್ಯಸ್ತವಾಗಿದೆ. ದಿನನಿತ್ಯದ  routin ಆಗು ಹೋಗುಗಳಿಗೆ ಸ್ವಲ್ಪ ಚ್ಯುತಿ ಬಂದಿದೆ. ಮದುವೆ ನಡೆಸಲು, ಮನೆ ಕಟ್ಟಲು ಇತ್ಯಾದಿಗಳಿಗೆ ಅಡಚಣೆ ಆಗಿದೆ. ಆದರೆ ಜನಸಾಮಾನ್ಯರು ತಮಗೂ ಕಷ್ಟವಾಗಿದ್ದರೂ, ಸ್ವಲ್ಪ ದಿನ ಹೊಂದಿಕೊಳ್ಳುವ, ಮುಂದಕ್ಕೆ ಒಳ್ಳೆಯದಾಗ ಬಹುದೆನ್ನುವ ನಿರೀಕ್ಷೆಯಿಂದ ಟೀಕಿಸುತ್ತಿಲ್ಲ. ಮಾಧ್ಯಮಗಳ ಸಂದರ್ಶನಗಳಲ್ಲಿ ತಿಳಿದುಬರುತ್ತದೆ. ಆದರೆ ಟೀಕಾಕಾರರೆಲ್ಲಾ ಭಾರೀ ಕುಳಗಳೇ,

ಆದರೆ ಇಷ್ಟು ಕಡಿಮೆ ದಿನಗಳಲ್ಲಿಯೇ ಅದೆಷ್ಟೋ ಕೋಟಿ ಹೊಸ ನೋಟುಗಳು ಕೆಲವು ಮಂದಿಗಳ ಕೈಸೇರಿರುವಾಗ, ಇದರ ನಿಯಂತ್ರಣ ಹೇಗೆ? ಈಗಾಗಲೇ ಕಳ್ಳ ನೋಟು (fake)ಗಳು ಚಲಾವಣೆಗೆ ಬಂದಿದೆಯಾ ಎಂಬ ಸಂಶಯವೂ ಕಾಡುತ್ತದೆ. ಈ ದರಿದ್ರ ಅಧಿಕಾರಿ ಶಾಹಿ, ಜನರನ್ನು ಹೇಗೆ ಸರಿ ಮಾಡುತ್ತಾರೆ. ಭ್ರಷ್ಟರನ್ನು ಅದ್ಹೇಗೆ ಮೋದಿ ನಿಯಂತ್ರಿಸುತ್ತಾರೆ ಎಂಬುದೇ ಕೋಟಿ ಪ್ರಶ್ನೆ.

ಗ್ರಾಮೀಣ ಭಾಗಗಳಲ್ಲಿ ಸಹಕಾರಿ ಸಂಘಗಳೇ ಕೃಷಿಕರ ಕಾರ್ಯಸ್ಥಾನ. ಎಲ್ಲೋ ಒಂದೆರಡು ಕಡೆ ಭ್ರಷ್ಟಾಚಾರ ನಡೆದಿದೆಯೆಂದು ಎಲ್ಲವುಗಳ ಮೇಲೆ ನಿಯಂತ್ರಣ ಹೇರಿರುವುದು, ಕೃಷಿಕರಿಗೆ ತುಂಬಾ ಸಮಸ್ಯೆಯಾಗಿದೆ.

ಮುಗಿಸುನ ಮುನ್ನ: ಹೊಸಮನೆ ಕಟ್ಟುವಾಗ ಹಳೆ ಮನೆ ಕೆಡವಿ ಸಣ್ಣ ’ದೊಂಪ’ದಲ್ಲಿ ಒಂದೆರಡು ತಿಂಗಳು adjust ಮಾಡ್ಕೋತೀವಿ. ಮುಂದಕ್ಕೆ ಹೊಸತು ಬರುತ್ತಿದೆ ಎಂದು. ಹಾಗೇ ಇದು ಎಂದು ಒಪ್ಪಿಕೊಳ್ಳೋಣ.

Any how, ‘Let us wait, hope for the best’

ಚಂದ್ರಶೇಖರ್ ಬಾಳ್ಯೊಟ್ಟು, ಇರ್ದೆ ಗ್ರಾಮ-574259

ಮೊ: 9448890922

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.