ನಾಯಕಿಯಾದ ಗಾಯಕಿ- ಪನೋಡಾ ಬೊಡ್ಚಾ  ಚಿತ್ರದಲ್ಲಿ ಶಕುಂತಳಾ ನೆಲ್ಯಾಡಿ

Puttur_Advt_NewsUnder_1
Puttur_Advt_NewsUnder_1

shakunthalaವಿಶೇಷ ವರದಿ: ಸುಧಾಕರ ಆಚಾರ್ಯ ಕಾಣಿಯೂರು

ಗುರಿ ಸಾಧಿಸುವ ಛಲ, ಪ್ರೋತ್ಸಾಹ ಇದ್ದಲ್ಲಿ ಅತ್ಯುತ್ತಮವಾದುದನ್ನು ಸಾಧಿಸಬಹುದು ಎನ್ನುವುದಕ್ಕೆ ನೆಲ್ಯಾಡಿಯ ಬಲ್ಯ ಶಕುಂತಳಾರವರು ನಿದರ್ಶನ.  ಗಾಯನ ಲೋಕದಲ್ಲಿ ತನ್ನ ಚಾತುರ್ಯ ಮೆರೆದು ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಿನಿಮಾ ಲೋಕಕ್ಕೆ ಎಂಟ್ರಿಯಾಗಿ ತನ್ನ ಮೊದಲ ಸಿನಿಮಾದಲ್ಲಿಯೇ ಅದ್ಭುತ ಅಭಿನಯ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು ಶಕುಂತಳಾ ನೆಲ್ಯಾಡಿಯವರು. ಗಾಯಕಿಯಾಗಬೇಕು ಎನ್ನುವ ಕನಸು ಹೊತ್ತು ಬೆಂಗಳೂರಿಗೆ ಸೇರಿದವರು ಹಾಡುಗಾರ್ತಿಯಾಗಿ, ಹಲವಾರು ದಾರವಾಹಿಗಳಲ್ಲಿ ನಟಿಯಾಗಿ ಅಭಿನಯಿಸಿ ಇದೀಗ ಸಿನಿಮಾದಲ್ಲೂ ನಟಿಸಿ ಭವಿಷ್ಯದಲ್ಲಿ ಭರವಸೆಯ ನಟಿಯಾಗುವ ಸೂಚನೆ ನೀಡಿದ್ದಾರೆ.

ಹಲವಾರು ಧಾರವಾಹಿಗಳಲ್ಲಿ ಅಭಿನಯಿಸಿದ ಗಾಯಕಿ ಶಕುಂತಳಾರವರು ಇತ್ತೀಚೆಗೆ ತೆರೆಕಂಡ ತುಳುವಿನ ಯಶಸ್ವಿ ಪನೋಡಾ ಬೋಡ್ಚಾ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ನಾಯಕ ಶಿವಧ್ವಜ್‌ಗೆ ನಾಯಕಿಯಾಗಿ ಅಭಿನಯಿಸಿದ ಇವರು  ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಸಿನಿಮಾ ಲೋಕಕ್ಕೆ ಎಂಟ್ರಿಯಾದ ಶಕುಂತಳಾ ನೆಲ್ಯಾಡಿ

ನಾನು ಸಂಗೀತ ಹಿನ್ನಲೆಯವಳು, ನಾನು ಗಾಯಕಿಯಾಗಬೇಕು ಎನ್ನುವ ಕನಸು ಕಂಡೇ, ಬೆಂಗಳೂರು ಸೇರಿದೆ. ನನಗೆ ಖ್ಯಾತ ಗೀತೆ ರಚನೆಗಾರ ಹಂಸಲೇಖ ಅವರು ನನ್ನ ಹಾಡು ಕೇಳಿ ಖ್ಯಾತ ಗಾಯಕಿ ಆಗುತ್ತಿ ಎಂದಿದ್ದರು. ನಾನು ಗಾಯನದ ಹಾದಿಯಲ್ಲಿ ನಾನೊಬ್ಬಳು ಗಾಯಕಿ ಎಂದು ಕೊಳ್ಳುತ್ತಿದ್ದೆ. ಆದರೆ ಇಂದು ನನಗೆ ಅನಿಸುತ್ತಿದೆ ನಾನು ಗಾಯಕಿ ಮಾತ್ರವಲ್ಲ ಕಲಾವಿದೆಯೂ ಹೌದು ಎಂದು.  ಇದು ನನಗೆ ಬಹಳಷ್ಟು ಸಂತೋಷ ತಂದಿದೆ. ಸಿನಿಮಾ ಅವಕಾಶ ಸಿಕ್ಕರೆ ಅಭಿನಯಿಸುತ್ತೇನೆ, ಹಾಗೆಂದು ಸಂಗೀತವನ್ನು  ಎಂದಿಗೂ ಬಿಡಲಾರೆ. ಎಂದಿಗೂ ಸಂಗೀತಕ್ಕೆ ನನ್ನ ಮೊದಲ ಆದ್ಯತೆ ಎನ್ನುತ್ತಾರೆ ಶಕುಂತಳಾರವರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.