ಸಂಪ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಿಮಗೆ ನೀವೇ ಪೋಲಿಸ್ ಆದಾಗ ಎಲ್ಲವೂ ಸುಸೂತ್ರ-ಮಹೇಶ್ ಪ್ರಸಾದ್

Puttur_Advt_NewsUnder_1
Puttur_Advt_NewsUnder_1

sampya1sampya2ಸಾರ್ವಜನಿಕರ ಮಾಹಿತಿಗೆ ಸ್ಪಂದಿಸುವಂತೆ

ಪೋಲಿಸರಿಗೆ ಕಿವಿಮಾತು

24 ಗಂಟೆಯೊಳಗೆ ಬ್ಯಾನರ್ ತೆರವು ಮಾಡಿ

ಅರಿಯಡ್ಕ ಗ್ರಾಮಕ್ಕೆ ಹೆಚ್ಚಿನ ಗಮನ ನೀಡಿ

ಸಂಘಟನೆ ಕ್ರಿಮಿನಲ್ಸ್ ಆಗಲು ಅಲ್ಲ

ಬಲ್ನಾಡು ಗ್ರಾಮದಲ್ಲಿ ಯಾವುದೇ ಸಮಸ್ಯೆಯಿಲ್ಲ

ಉಪಟಳ ಮಾಡುವವರನ್ನು ಶಿಕ್ಷಿಸಿ

ಪುತ್ತೂರು: ಗ್ರಾಮಾಂತರ ವ್ಯಾಪ್ತಿಯಲ್ಲಿ ವಿವಿಧ ಸಮುದಾಯದೊಳಗೆ ಯಾವುದೇ ಅಹಿತಕರ, ಸಾರ್ವಜನಿಕ ಶಾಂತಿ ಭಂಗ ಆಗುವುದಕ್ಕೆ ಅವಕಾಶ ಮಾಡಿಕೊಡಬೇಡಿ. ಹಬ್ಬ ಹರಿದಿನಗಳು ಸುಸೂತ್ರವಾಗಿ ನಡೆಯಬೇಕಾದರೆ ನಿಮಗೇ ನೀವೇ ಪೋಲಿಸ್‌ರಾಗಿ ಕಾರ್ಯನಿರ್ವಹಿಸಿ ಎಂದು ಪುತ್ತೂರು ಗ್ರಾಮಾಂತರ ಪ್ರಭಾರವನ್ನೂ ಹೊಂದಿರುವ ಪುತ್ತೂರು ನಗರ ಠಾಣಾ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರವರು ಹೇಳಿದರು.

ಈದ್ ಮಿಲಾದ್, ಕ್ರಿಸ್‌ಮಸ್ ಹಾಗೂ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಯುವಂತಹ ಕಾರ್ಯಕ್ರಮಗಳು ಶಾಂತಿಭಂಗವಾಗದೆ ಸುಸೂತ್ರವಾಗಿ ನಡೆಯುವ ಉದ್ಧೇಶದಲ್ಲಿ ಸಂಪ್ಯ ಪೋಲಿಸ್ ಠಾಣೆಯಲ್ಲಿ ದ.11 ರಂದು ನಡೆದ ವಿವಿಧ ಸಮುದಾಯದ, ಶೈಕ್ಷಣಿಕ ಸಂಸ್ಥೆಗಳ  ಪ್ರಮುಖರ ಸಭೆಯನ್ನುದ್ಧೇಶಿಸಿ ಮಾತನಾಡಿದರು. ನಗರವ್ಯಾಪ್ತಿಯಲ್ಲಿ ವಾಹನ ರ‍್ಯಾಲಿ, ಬೈಕ್ ರ‍್ಯಾಲಿಯನ್ನು ನಿಷೇಧಿಸಿ ಒಂದೂವರೆ ವರ್ಷವಾಗಿದೆ. ಇಲ್ಲಿಯೂ ಕೂಡ ಯಾವುದೇ ರ‍್ಯಾಲಿಗೆ ಅವಕಾಶವಿಲ್ಲ. ಯಾವುದೇ ಮೆರವಣಿಗೆಗಳು ಗ್ರಾಮಾಂತರ ವ್ಯಾಪ್ತಿಯೊಳಗೆ ಇದ್ದಲ್ಲಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ಪೊಲೀಸರೊಂದಿಗೆ ಸಹಕರಿಸಿದರಲ್ಲದೆ ಯಾವುದೇ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಆ ಗ್ರಾಮದ ಜನರು ಅನ್ನ್ಯೋನ್ಯತೆಯಿಂದ ಇದ್ದರೂ ಪೋಲಿಸರು ಸಂಬಂಧಪಟ್ಟ ಗ್ರಾಮದ ಸಂಪರ್ಕವನ್ನು ಕಡಿತಗೊಳಿಸದೆ ನಿರಂತರ ಸಂಪರ್ಕದಲ್ಲಿರಬೇಕು ಎಂದರು. ಸಾರ್ವಜನಿಕರೂ ಶಾಂತಿ ಸುವ್ಯವಸ್ಥೆ ಕುರಿತು ಚಿಂತನೆ ಮಾಡಿದಾಗ, ಅಲ್ಲಿನ ವಾತಾವರಣ ಚೆನ್ನಾಗಿದ್ದಾಗ ಸೂಕ್ಷ್ಮ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸಾರ್ವಜನಿಕರ ಮಾಹಿತಿಗೆ ಸ್ಪಂದಿಸುವಂತೆ ಪೊಲೀಸರಿಗೆ ಕಿವಿಮಾತು: ಕೆದಂಬಾಡಿ ಗಟ್ಟಮನೆ ಪರಿಸರದಲ್ಲಿ ಎಸ್.ಎಸ್.ಎಫ್ ಅಥವಾ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ಮುಖಂಡರು ರಸ್ತೆಯ ಬದಿ ಹಾಕಿದ ಬ್ಯಾನರೊಂದನ್ನು ಯಾರೋ ಕಿಡಿಗೇಡಿಗಳು ಕಿತ್ತು ಎಸೆದರೂ ಕಿತ್ತು ಎಸೆದವರ ಕುರಿತು ಸೂಕ್ತ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೆದಂಬಾಡಿ ಗಟ್ಟಮನೆ ಪರಿಸರದ ಇಸ್ಮಾಯಿಲ್ ಹಾಗೂ ಸ್ಥಳೀಯ ಯುವಕನೊಬ್ಬ ನಮ್ಮಲ್ಲಿಯೇ ಸೌಹಾರ್ದವಿಲ್ಲ, ಎಸ್.ಎಸ್.ಎಫ್ ಅಥವಾ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ಮುಖಂಡರೇ ಕಿತ್ತಾಡುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದಾಗ ಉತ್ತರಿಸಿದ ಮಹೇಶ್ ಪ್ರಸಾದ್‌ರವರು ಬ್ಯಾನರ್ ಕಿತ್ತೊಗೆದ ವಿಚಾರವಾಗಿ ಸಂಬಂಧಪಟ್ಟವರು ಪೋಲಿಸರಿಗೆ ಮಾಹಿತಿ ನೀಡಿಯೂ ಅದರ ಬಗ್ಗೆ ಯಾವುದೇ ತನಿಖೆಯಾಗದಿರುವುದು ತಪ್ಪು. ಸಿಕ್ಕಿದ ಮಾಹಿತಿಯನ್ನು ಕಂಪ್ಲೆಂಟ್ ನೀಡಿದವರಿಗೆ ನೀಡಬೇಕಾದುದು ಪೊಲೀಸರ ಕರ್ತವ್ಯ ಎಂದು ಹೇಳಿದರಲ್ಲದೆ ನಮ್ಮಲ್ಲಿಯೇ ಸೌಹಾರ್ದವಿಲ್ಲ ಎಂದು ಪ್ರಸ್ತಾಪಿಸಿದ ಯುವಕನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.

24 ಗಂಟೆಯೊಳಗೆ ಬ್ಯಾನರ್ ತೆರವು ಮಾಡಿ: ಹಬ್ಬದ ಸಂದರ್ಭದಲ್ಲಿ ಯಾವುದೇ ಸಮುದಾಯದವರು ಶುಭಾಶಯ ಕೋರಿ ಬ್ಯಾನರ್ ಹಾಕಲು ಸಂಬಂಧಪಟ್ಟ ಪಂಚಾಯತ್‌ನವರು ಅನುಮತಿ ನೀಡಿದರೆ ಹಾಕಬಹುದು. ಆದರೆ ಹಾಕಿದ ಬ್ಯಾನರ್ ಅನ್ನು 24 ಗಂಟೆಯೊಳಗೆ ಸಂಬಂಧಪಟ್ಟವರು ತೆರವುಗೊಳಿಸಬೇಕು ಮಾತ್ರವಲ್ಲದೆ ಪಿಡಿಒರವರು ಈ ಬಗ್ಗೆ ಗಮನಹರಿಸಬೇಕು, ತೆರವುಗೊಳಿಸದೇ ಇದ್ದಲ್ಲಿ ಪೋಲಿಸ್ ಕಾನೂನಿನ್ವಯ ನಾವೇ ತೆರವುಗೊಳಿಸಬೇಕಾಗುತ್ತದೆ. ಆದ್ದರಿಂದ ಶಾಂತಿ, ಸುವ್ಯವಸ್ಥೆ ಕಡೆಗೆ ಎಲ್ಲರ ಗಮನವಿರಲಿ ಎಂದು ಮಹೇಶ್ ಪ್ರಸಾದ್‌ರವರು ಹೇಳಿದರು.

ಅರಿಯಡ್ಕ ಗ್ರಾಮಕ್ಕೆ ಹೆಚ್ಚಿನ ಗಮನ ನೀಡಿ: ಅರಿಯಡ್ಕ ಗ್ರಾಮದ ಗ್ರಾಮಸ್ಥರೊಬ್ಬರು, ಅರಿಯಡ್ಕ ಗ್ರಾಮದಲ್ಲಿ ಸುಮಾರು 35 ಸಾವಿರ ವೆಚ್ಚದ ದಾರಿದೀಪಗಳನ್ನು ಕಿಡಿಗೇಡಿಗಳು ಕಳವು ಮಾಡಿರುತ್ತಾರೆ. ಆದ್ದರಿಂದ ಅರಿಯಡ್ಕ ಗ್ರಾಮಕ್ಕೆ ಹೆಚ್ಚಿನ ಗಮನ ನೀಡುವಂತೆ ಗಮನ ಸೆಳೆದು ಈ ಬಗ್ಗೆ ಬೀಟ್ ಹೋಗುವಂತೆ ಪೋಲಿಸರಿಗೆ ನಿರ್ದೇಶನ ನೀಡುತ್ತೇನೆ ಎಂದು ಮಹೇಶ್ ಪ್ರಸಾದ್‌ರವರು ಉತ್ತರಿಸಿದರು.

ಸಂಘಟನೆ ಇರುವುದು ಕ್ರಿಮಿನಲ್ಸ್ ಆಗಲು ಅಲ್ಲ: ಸಂಘಟನೆ ಇರೋದು ವೈಯಕ್ತಿಕ ಹಿತಸಾಧನೆಗಾಗಿ ಅಲ್ಲ. ಸಂಘಟನೆ ಇರೋದು ಆಯಾ ಸಮುದಾಯದ ಅಭಿವೃದ್ಧಿಗೆ ಮಾತ್ರ ಎಂಬ ಉದ್ಧೇಶವನ್ನಿಟ್ಟುಕೊಂಡಿರಬೇಕೇ ಹೊರತು ಕ್ರಿಮಿನಲ್ ಆಗಿ ಬೆಳೆಯೋದರಲ್ಲಿ ಅಲ್ಲ. ಸಮಾಜಕ್ಕೆ ತೊಂದರೆ ಕೊಡುವ ಅಂತಹ ಘಟನೆಗಳು ಯಾರಾದರೂ ಮಾಡಿದ್ದಲ್ಲಿ ನಾನೇ ಖುದ್ದಾಗಿ ಪ್ರವೇಶ ಮಾಡಿ ಅಂತವರನ್ನು ಊರು ಬಿಡಿಸಬೇಕಾಗುತ್ತದೆ ಎಂದ ಮಹೇಶ್ ಪ್ರಸಾದ್‌ರವರು ಎಚ್ಚರಿಸಿದರು.

ಬಲ್ನಾಡು ಗ್ರಾಮದಲ್ಲಿ ಯಾವುದೇ ಸಮಸ್ಯೆಯಿಲ್ಲ: ಬಲ್ನಾಡು ಸಿ.ಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವರವರು ಮಾತನಾಡಿ, ಬಲ್ನಾಡು-ಬೆಳಿಯೂರುಕಟ್ಟೆ ಗ್ರಾಮದ ಎಲ್ಲಾ ಸಮುದಾಯದವರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಅನ್ಯೋನ್ಯತೆಯಿಂದ ಬದುಕುತ್ತಿದ್ದೇವೆ. ನಮ್ಮ ಕಷ್ಟವನ್ನು ನಾವೇ ಪರಿಹರಿಸಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಪೋಲಿಸರಿಗೆ ಯಾವುದೇ ಕಷ್ಟವಾಗಿಲ್ಲ, ನಾವೇ ಪೋಲಿಸರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದಾಗ ಉತ್ತರಿಸಿದ ಮಹೇಶ್ ಪ್ರಸಾದ್‌ರವರು, ಗ್ರಾಮಸ್ಥರು ಅನ್ಯೋನ್ಯತೆಯಿಂದ ಇರುವುದು ಬಹಳ ಸಂತೋಷದ ವಿಚಾರವಾಗಿದೆ. ಹಾಗಂತ ಪೋಲಿಸರು ಗ್ರಾಮಕ್ಕೆ ಭೇಟಿ ನೀಡದಿರುವುದು ತಪ್ಪಾಗುತ್ತದೆ. ಜನರೊಂದಿಗೆ ಪೋಲಿಸರ ನಿಕಟ ಸಂಪರ್ಕವಿದ್ದಾಗ ಇನ್ನೂ ಹೆಚ್ಚು ಲಾಭದಾಯಕವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.

ಉಪಟಳ ಮಾಡುವವರನ್ನು ಶಿಕ್ಷಿಸಿ: ಮಸೀದಿಯೊಂದರಲ್ಲಿ ನಮಾಝ್ ಮಾಡುವ ಸಂದರ್ಭದಲ್ಲಿ ಕಳ್ಳತನವಾಗಿರುವ ಬಗ್ಗೆ ಇನ್ನೂ ತನಿಖೆಯಾಗಿಲ್ಲ ಎಂದು ರೆಂಜಲಾಡಿ ಬದ್ರಿಯ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿರವರು ಪ್ರಸ್ತಾಪಿಸಿದಾಗ ತನಿಖೆ ಪ್ರಗತಿ ಹಂತದಲ್ಲಿದೆ ಎಂದು ಮಹೇಶ್ ಪ್ರಸಾದ್‌ರವರು ಹೇಳಿದರು. ಯಾವುದೇ ಧರ್ಮದವರಾಗಲಿ, ಮೆರವಣಿಗೆಯನ್ನು ಆಯಾ ಧರ್ಮದವರು ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಾರೆ. ಕೆಲವು ಕಿಡಿಗೇಡಿಗಳು ಮಾತ್ರ ಉಪಟಳ ಮಾಡುವವರು. ಅವರನ್ನು ಶಿಕ್ಷಿಸಿ ಎಂದು ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವರವರು ಪ್ರಸ್ತಾಪಿಸಿದಾಗ ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಝ್ರವರು ಧ್ವನಿಗೂಡಿಸಿದರು.

ಮುಂಡೂರು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ್, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪಿ.ಡಿ.ಒಗಳಾದ ಸುಜಾತಾ, ಕೆ.ಸುಬ್ರಹ್ಮಣ್ಯ, ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್, ಅಬ್ದುಲ್ ಖಾದರ್ ಮೇರ್ಲ, ಕೆಯ್ಯೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳೆಜ್ಜ, ಯೂಸುಫ್ ಗೌಸಿಯಾ ಸಾಜ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಸಾಜ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಗಟ್ಟಮನೆ ಮಸೀದಿ ಅಧ್ಯಕ್ಷ ಅಬ್ದುಲ್ ಹಾಜಿ, ಜೊತೆ ಕಾರ್ಯದರ್ಶಿ ಇಬ್ರಾಹಿಂ, ಸಾರಪುಣಿ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಪಿ.ಅಬ್ಬಾಸ್ ಪಾಪೆತ್ತಡ್ಕ, ಸಾಬಾಸ್ ಕೆ ಪರ್ಲಡ್ಕ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಮೊದು ಕುಟ್ಟಿ ತಿಂಗಳಾಡಿ, ಕೆ.ಅಬ್ದುಲ್ ಅಝೀಝ್ ಪಾಪೆತ್ತಡ್ಕ, ಎನ್.ಅಬೂಬಕ್ಕರ್ ಪರ್ಪುಂಜ, ರಾಜೀವ್ ರೈ ಕುತ್ಯಾಡಿ, ಇಬ್ರಾಹಿಂ ಪಾಪೆತ್ತಡ್ಕ, ಕೆ.ಯೂಸುಫ್ ಹಾಜಿ ಕೈಕಾರ, ದಾವೂದ್ ಹಕೀಂ ತ್ಯಾಗರಾಜೆ, ಹಂಝ ಹಾಜಿ ತ್ಯಾಗರಾಜೆ, ಅಬ್ದುಲ್ ಖಾದರ್ ಕೆಯ್ಯೂರು, ಸಂಟ್ಯಾರು ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಜಲೀಲ್ ಎಚ್.ಪಿ, ಎಸ್.ಇಸ್ಮಾಯಿಲ್ ಸಂಪ್ಯ, ಎಮ್.ಮೌಲನಾ ಮುಸ್ಲಿಯಾರ್ ಬದ್ರಿಯಾ ನಗರ ಕುಂಬ್ರ, ಸಂಶುದ್ಧೀನ್ ಗಟ್ಟಿಮನೆ, ಝಾಕೀರ್ ಆಲಿ, ಮಹಮ್ಮದ್ ಹನೀಫ್ ಗಟ್ಟಮನೆ, ಹಮೀದ್ ಸನ್ಯಾಸಿಗುಡ್ಡೆ ಕೆದಂಬಾಡಿ, ಇಬ್ರಾಹಿಂ ಬಾತಿಷಾ ವಳತ್ತಡ್ಕ, ಮಹಮ್ಮದ್ ಆಶ್ರಫ್ ವಳತ್ತಡ್ಕ, ಗೀತಾ ಎಂ.ಕೆ ಮರಿಕೆ, ಮಹಮ್ಮದ್ ಬಾತೀಷಾ, ಜಾಬಿರಾ ಬೆದುಮಾರ್ ಉಪಸ್ಥಿತರಿದ್ದರು.

ಎ.ಎಸ್.ಐಗಳಾದ ತಿಮ್ಮಯ್ಯ, ಸಿ.ಟಿ ಸುರೇಶ್ ಹಾಗೂ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ಕರುಣಾಕರ್ ಸ್ವಾಗತಿಸಿ, ವಂದಿಸಿದರು.

ಎರಡೂ ಸಂಘಟನೆಯವರು ಬ್ಯಾನರ್ ಹಾಕಲಿ

ರಸ್ತೆ ಬಳಿ ಬ್ಯಾನರ್ ಹಾಕುವ ವಿಷಯದಲ್ಲಿ ಎಸ್.ಎಸ್.ಎಫ್ ಅಥವಾ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯೊಳಗೆ ತಕರಾರು ಇದೆ ಎಂದು ಸ್ಥಳೀಯರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಉತ್ತರಿಸಿದ ಮಹೇಶ್ ಪ್ರಸಾದ್‌ರವರು, ಮಸೀದಿ ಹೊರಗಡೆ ಬ್ಯಾನರ್ ಹಾಕುವ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಎರಡೂ ಸಂಘಟನೆಯವರನ್ನು ಕರೆದು ಎರಡೂ ಸಂಘಟನೆಯವರು ಶುಭಾಶಯ ಕೋರಿ ಬ್ಯಾನರ್ ಹಾಕಲಿ, ಹಬ್ಬವನ್ನು ಸಡಗರದಿಂದ ಆಚರಿಸಲಿ. ಆದರೆ ಒಂದೇ ಸಂಘಟನೆಯವರಿಗೆ ಬ್ಯಾನರ್ ಹಾಕಲು ಅವಕಾಶ ಮಾಡಿಕೊಡದಂತೆ ಪಂಚಾಯತ್‌ರವರು ಗಮನದಲ್ಲಿಡಬೇಕಾಗುತ್ತದೆ. ಎರಡೂ ಸಂಘಟನೆಯವರು ಬ್ಯಾನರ್ ಹಾಕದಿದ್ದಲ್ಲಿ ಸಂಬಂಧಪಟ್ಟ ಮಸೀದಿಯವರು ಮಸೀದಿಯ ಹೆಸರಲ್ಲಿ ಬ್ಯಾನರ್ ಹಾಕಲಿ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.