ಉಪ್ಪಿನಂಗಡಿ: ಈದ್ ಮಿಲಾದ್ ಸಮಾರಂಭ

Puttur_Advt_NewsUnder_1
Puttur_Advt_NewsUnder_1

uppinangadi-id-milad

ಸತ್ಕರ್ಮದ ಜೀವನ, ಐಕ್ಯತೆ, ಸಹೋದರತೆಗೆ ಒತ್ತು ಮುಖ್ಯ-ಅಬ್ದುಲ್ ಸಲಾಂ ಫೈಝಿ

ಉಪ್ಪಿನಂಗಡಿ: ಒಳ್ಳೆಯ ಸತ್ಕರ್ಮದ ಜೀವನ ನಡೆಸುವಾತ, ಐಕ್ಯತೆ, ಸೌಹಾರ್ದತೆಗೆ ಒತ್ತು ಕೊಡಬೇಕು ಎನ್ನುವುದು ಪ್ರವಾದಿಯವರ ಸಂದೇಶ ಆಗಿರುತ್ತದೆ, ಅದನ್ನು ದಿಕ್ಕರಿಸಿ ನಡೆಯುವವನು ಮುಸ್ಲಿಂ ಆಗಲಾರನು ಎಂದು ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಫೈಝಿ ಹೇಳಿದರು.

ಅವರು ಡಿ.12ರಂದು ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ವತಿಯಿಂದ ಹಮ್ಮಿಕೊಳ್ಳಲಾದ ಈದ್-ಮಿಲಾದ್ ಸಂಭ್ರಮದ ಸಲುವಾಗಿ ಮದ್ರಸ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಕರ್ಷಕ ಮೆರವಣಿಗೆ:

ಸಭಾ ಕಾರ‍್ಯಕ್ರಮಕ್ಕೆ ಮುನ್ನ ಮಸೀದಿಯಲ್ಲಿ ಧ್ವಜಾರೋಹಣ ನಡೆಸಲಾಗಿ ಪೇಟೆಯ ಮೂಲಕ ಗಾಂಧಿಪಾರ್ಕ್, ಕೂಟೇಲು ತನಕ ಮೆರವಣಿಗೆ ನಡೆಸಲಾಗಿ, ಅಲ್ಲಿ ದುವಾಃ ನೆರವೇರಿಸಲಾಗಿ ಮತ್ತೆ ಮೆರವಣಿಗೆ ಮೂಲಮ ಮಸೀದಿಗೆ ಬರಲಾರಯಿತು. ಮೆರವಣಿಗೆಯಲ್ಲಿ ಆಕರ್ಷಕ ದಫ್ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.