HomePage_Banner
HomePage_Banner

ಆತೂರು ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುನೀತ್‌ರಾಜ್ ಶೆಟ್ಟಿ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

athooruಪುತ್ತೂರು: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುನೀತ್ ರಾಜ್ ಶೆಟ್ಟಿ ಆರ‍್ವಾರ ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ದೇವಾಲಯದಲ್ಲಿ ಸಭೆ ಸೇರಿದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರುಗಳು ಅಧ್ಯಕ್ಷರನ್ನಾಗಿ ಸುನೀತ್ ರಾಜ್ ಶೆಟ್ಟಿಯವರನ್ನು ಆಯ್ಕೆಗೊಳಿಸಿದ್ದಾರೆ. ಸಭೆಯಲ್ಲಿ ಸದಸ್ಯರುಗಳಾದ ಪುರಂದರ ರೈ ಸಬಳೂರು, ವಸಂತ ಅಮೀನ್ ಕೆಮ್ಮಾರ, ಬಿ.ಕೆ.ಚಂದ್ರಶೇಖರ ಕಲಾಯಿ, ಬಿ.ಚಂದ್ರಶೇಖರ ಗೌಡ ಶಾಸ್ತವು ನಿಲಯ ಕೊಯಿಲ, ಎ.ನಾರಾಯಣ ನಾಯ್ಕ್ ಬೊಮ್ಮಿಂಡಿ ಏಣಿತ್ತಡ್ಕ, ಪುಷ್ಪಾವತಿ ಕಕ್ವೆ, ರಾಧಿಕಾ ಊರಾಜೆ ವಳಕಡಮ, ಪ್ರಧಾನ ಆರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಆಡಳಿತಾಧಿಕಾರಿ ಜಗನ್ನಾಥ ರೈ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಕಡೆಂಬ್ಯಾಲು ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸುನೀತ್ ರಾಜ್ ಶೆಟ್ಟಿಯವರು ರಾಮಕುಂಜ-ಕೊಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರರಾಗಿದ್ದು ದ.ಕ.ಜಿಲ್ಲಾ ಯುವಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೇ ಸ್ಥಳೀಯ ವಿವಿಧ ಸಂಘಟನೆಗಳಲ್ಲಿ ಅವರು ಸಕ್ರೀಯರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.