Breaking News

ಕೋಟಿ-ಚೆನ್ನಯ ಮೂಲಸ್ಥಾನದಲ್ಲಿ ಭಕ್ತರ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1

koti-chennaya

* ಪುನರುತ್ಥಾನಕ್ಕೆ ಎಲ್ಲರ ಸಹಕಾರ ಬೇಕು – ಶ್ರೀಧರ ಪೂಜಾರಿ

* ಮೂಲ್ಕಿ ಸಂಘ ಸರ್ವ ನೆರವು ನೀಡಲಿದೆ – ವಿಜಯ ಕುಮಾರ್

ಪುತ್ತೂರು: ವೀರ ಪುರುಷರಾದ ಕೋಟಿ-ಚೆನ್ನಯ ಮೂಲಸ್ಥಾನವಾದ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಮಾರ್ಗದರ್ಶನದಲ್ಲಿ  ದ.11ರಂದು ಭಕ್ತರ ಸಮಾಲೋಚನಾ ಸಭೆ ನಡೆಯಿತು.

ಪುನರುತ್ಥಾನಕ್ಕೆ ಎಲ್ಲರ ಸಹಕಾರ ಬೇಕು:  ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ಗುರು ಸಾಯನ ಬೈದ್ಯರು – ಮಾತೆ ದೇಯಿ ಬೈದ್ಯೆತಿ ಧರ್ಮ ಚಾವಡಿ, ಬೆರ್ಮೆರೆ ಗುಂಡ, ದೇಯಿ ಬೈದ್ಯೆತಿ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ಆದಿ ದೈವ ಧೂಮಾವತಿ, ಕುಪ್ಪೆ ಪಂಜುರ್ಲಿ ಸಪರಿವಾರ ದೈವಗಳ ಸ್ಥಾನ ಪುನರುತ್ಥಾನ ನಡೆಯಲಿದ್ದು, ಇದಕ್ಕೆ ಭಕ್ತರ ಸರ್ವ ಸಹಕಾರ ಬೇಕು ಎಂದು ವಿನಂತಿಸಿದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಪುತ್ತೂರು, ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದರೆ, ಕಾರ್ಕಳ, ಉಡುಪಿ, ಕಾಸರಗೋಡು,  ಮುಂಬೈ ಪ್ರದೇಶಗಳ ಭಕ್ತರ ತಂಡ ಭೇಟಿ ನೀಡಿ ಕ್ಷೇತ್ರದಲ್ಲಿ ಸಮಾಲೋಚನಾ ಸಭೆ ನಡೆಸಿದ್ದು, ಎಲ್ಲ ಕಡೆಯಿಂದಲೂ ಸಹಕಾರದ ಭರವಸೆ ಸಿಕ್ಕಿದೆ ಎಂದರು.

ಮೂಲ್ಕಿ ಸಂಘ ಸರ್ವ ನೆರವು ನೀಡಲಿದೆ:  ಮೂಲ್ಕಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್  ಕುವೆವೂರು ಮಾತನಾಡಿ, ಈಗಾಗಲೇ ಮೂಲ್ಕಿ ಸಂಘದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಪುನರುತ್ಥಾನದ ಬಗ್ಗೆ ಸಭೆ ನಡೆಸಲಾಗಿದೆ. ಬಿಲ್ಲವರ ಮಹಾ ಮಂಡಲದಲ್ಲೂ ವಿಶೇಷ ಸಮಾಲೋಚನಾ ಸಭೆ ನಡೆಸಲಾಗಿದೆ. ಅದರ ಮುಂದಿನ ಭಾಗವಾಗಿ ನಾವು ಕ್ಷೇತ್ರಕ್ಕೆ ಬಂದಿzವೆ. ಕೋಟಿ – ಚೆನ್ನಯರು ಬದುಕಿನ ಬಹುಪಾಲನ್ನು ಕಳೆದ ಈ ಮನೆ, ಮಾತೆ ದೇಯಿ  ಬೈದ್ಯೆತಿಗೆ ಪುನರ್ಜನ್ಮ ನೀಡಿದ ತಾಣವಾಗಿದೆ. ಮಾವ ಸಾಯನ ಬೈದ್ಯರ ಮನೆಯೂ ಇದೇ ಆಗಿರುವ ಕಾರಣ ಇದು ಕೋಟಿ – ಚೆನ್ನಯರ ಪಾಲಿಗೆ ಸ್ವಂತ ಮನೆ ಮಾತ್ರವಲ್ಲ, ಅವರ ಮೂಲಸ್ಥಾನವೂ ಆಗುತ್ತದೆ. ಹೀಗಾಗಿ ಸರ್ವ ಕೋಟಿ- ಚೆನ್ನಯ ಭಕ್ತರಿಗೆ ಇದು ಪರಮ ಪಾವನ ಕ್ಷೇತ್ರವಾಗಿದೆ. ಇಲ್ಲಿನ ಪುನರುತ್ಥಾನ ಕಾರ್ಯಕ್ಕೆ ಮೂಲ್ಕಿ ಸಂಘ ಸರ್ವ ರೀತಿಯ ನೆರವು ನೀಡುತ್ತದೆ ಎಂದರು. ಯುವವಾಹಿನಿ ಅಧ್ಯಕ್ಷ ಚೇತನ್ ಕುಮಾರ್, ಕಾರ್ಯದರ್ಶಿ ಸತೀಶ್ ಕಿಲ್ಪಾಡಿಯವರು ಮಾತನಾಡಿ, ಯುವ ವಾಹಿನಿಯ ಎಲ್ಲ ಘಟಕಗಳು ಗೆಜ್ಜೆಗಿರಿ ಕ್ಷೇತ್ರಕ್ಕೆ ಸರ್ವ ರೀತಿಯ ನೆರವು ನೀಡುವ ಭರವಸೆ ನೀಡಿವೆ. ನಮ್ಮ ಘಟಕವೂ ಕೈ ಜೋಡಿಸಲಿದೆ ಎಂದರು. ಸಾಂಸ್ಕೃತಿಕ ಸಂಘಟಕ ಚಂದ್ರಶೇಖರ ಸುವರ್ಣ ಮೂಲ್ಕಿ ಅವರ ನೇತೃತ್ವದಲ್ಲಿ ಕ್ಷೇತ್ರಕ್ಕೆ ಭಕ್ತಿಪೂರ್ವಕ ಕಾಣಿಕೆ ಸಮರ್ಪಿಸಿ ಪ್ರಸಾದ ಪಡೆಯಲಾಯಿತು. ಸುಧಾಕರ ಸುವರ್ಣರವರು ಕ್ಷೇತ್ರದ ಮಹಿಮೆ, ಹಿನ್ನೆಲೆ, ಪರಂಪರೆ, ಇತಿಹಾಸದ ಬಗ್ಗೆ ಸಮಗ್ರ ವಿವರ ನೀಡಿದರು. ಕ್ಷೇತ್ರದ ಹಿರಿಯರಾದ ಲೀಲಾವತಿ ಪೂಜಾರಿ ಉಪಸ್ಥಿತರಿದ್ದರು. ಮೂಲ್ಕಿ ಯುವವಾಹಿನಿ, ಮೂಲ್ಕಿ ಬಿಲ್ಲವ ಸಂಘ ಮತ್ತು ಉಡುಪಿಯ ಬಿಲ್ಲವ ಸಮಾಜ ಬಾಂಧವರು ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.