ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷ:ವಿಲಿಯಂ ನೊರೊನ್ಹಾ, ಕಾರ್ಯದರ್ಶಿ:ಮಾರ್ಟಿನ್ ಡಿ’ಸೋಜ, ಕೋಶಾಧಿಕಾರಿ:ವಿನ್ಸೆಂಟ್ ಮಸ್ಕರೇನ್ಹಸ್

Puttur_Advt_NewsUnder_1
Puttur_Advt_NewsUnder_1

christian

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಡಿ.11 ರಂದು ಸಂಘದ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಪರ್ಲಡ್ಕ ನಿವಾಸಿ, ಸಂತ ಫಿಲೋಮಿನಾ ಪ್ರೌಢಶಾಲೆಯ ಆಡಳಿತ ಸಿಬ್ಬಂದಿ ವಿಲಿಯಂ ನೊರೊನ್ಹಾ, ಕಾರ್ಯದರ್ಶಿಯಾಗಿ ಕೂರ್ನಡ್ಕ-ಕೆಮ್ಮಿಂಜೆ ನಿವಾಸಿ, ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಆಡಳಿತ ಸಿಬ್ಬಂದಿ ಮಾರ್ಟಿನ್ ಡಿ’ಸೋಜ, ಉಪಾಧ್ಯಕ್ಷರಾಗಿ ಹೆನ್ರಿ ಗಲ್ಬಾವೋ ಕಲ್ಲಾರೆ, ಜೊತೆ ಕಾರ್ಯದರ್ಶಿಯಾಗಿ ರೋಯ್‌ಸ್ಟನ್ ಡಾಯಸ್ ಎ.ಪಿ.ಎಂ.ಸಿ ರಸ್ತೆ, ಕೋಶಾಧಿಕಾರಿಯಾಗಿ ವಿನ್ಸೆಂಟ್ ಮಸ್ಕರೇನ್ಹಸ್, ಆಂತರಿಕ ಲೆಕ್ಕಪರಿಶೋಧಕರಾಗಿ ಮಾರ್ಕ್ ವಿಶ್ವಾಸ್ ಡಿ’ಸೋಜ ಕಾವೇರಿಕಟ್ಟೆ, ಕ್ರೀಡಾ ಕಾರ್ಯದರ್ಶಿಯಾಗಿ ಸ್ಟೇನಿ ಪ್ರವೀಣ್ ಮಸ್ಕರೇನ್ಹಸ್ ತೆಂಕಿಲ, ಧಾರ್ಮಿಕ ಸ್ಟಾಲ್ ಇನ್‌ಚಾರ್ಜ್ ಆಗಿ ಸೈಮನ್ ವೇಗಸ್, ಲಿತುರ್ಜಿ ಕಾರ್ಯದರ್ಶಿಯಾಗಿ ರಿಚರ್ಡ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಎಸ್ಕೋ ಸದಸ್ಯರಾಗಿ ಜೋನ್ಸನ್ ಸಿಕ್ವೇರಾ ಹಾರಾಡಿ, ಸಮಿತಿ ಸದಸ್ಯರಾಗಿ ನಿರ್ಗಮನ ಅಧ್ಯಕ್ಷ ಜೋನ್ ಪಿಂಟೋ ಕೊಂಬೆಟ್ಟು, ಜೋಕಿಂ ಡಿ’ಅಲ್ಮೇಡ ಪರ್ಲಡ್ಕ, ಫೆಲಿಕ್ಸ್ ಡಿ’ಸೋಜ ಕಾವೇರಿಕಟ್ಟೆರವರು ಆಯ್ಕೆಯಾಗಿದ್ದಾರೆ. ಆತ್ಮೀಕ ನಿರ್ದೇಶಕ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋರವರ ಮಾರ್ಗದರ್ಶನದಲ್ಲಿ ನಿರ್ಗಮನ ಕಾರ್ಯದರ್ಶಿ ವಿಲಿಯಂ ನೊರೊನ್ಹಾರವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.