ಪಾಣಾಜೆ : ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಕ್ರೀಡೆ ಪೂರಕ – ಶ್ರೀಪ್ರಸಾದ್

Puttur_Advt_NewsUnder_1
Puttur_Advt_NewsUnder_1

 

panaje2 panaje1ಪಾಣಾಜೆ: ಫ್ರೆಂಡ್ಸ್ ಆರ್ಲಪದವು ಹಾಗೂ ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಆಶ್ರಯದಲ್ಲಿ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್  ಇದರ ಸಹಯೋಗದೊಂದಿಗೆ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ದ. 10ರಂದು ರಂದು ಆರ್ಲಪದವು ಶಾಲಾ ಮೈದಾನದಲ್ಲಿ ನಡೆಯಿತು.

ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಸಂಚಾಲಕ ಶ್ರೀಪ್ರಸಾದ್ ವಹಿಸಿ ’ಕ್ರೀಡೆಯು ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು , ಜನರಲ್ಲಿ ಪರಸ್ಪರ ಪ್ರೀತಿ ಬೆಳೆಯಲು, ಜಾತಿ, ಮತ, ಧರ್ಮವನ್ನು ಮೀರಿ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ’ ಎಂದು ಹೇಳಿ ಪಂದ್ಯಾಟಕ್ಕೆ ಶುಭಹಾರೈಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅಂಕಣವನ್ನು ಉದ್ಘಾಟಿಸಿದರು.

ಪಾಣಾಜೆ ಗ್ರಾ.ಪಂ.ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ಸುಬೋಧ ಪ್ರೌಢ ಶಾಲಾ ಮುಖ್ಯಗುರು ನಾರಾಯಣ ಎಸ್.ಕೆ, ಕೆ.ಪಿ.ಸಿ.ಸಿ ಕಿಸಾನ್ ಘಟಕದ ವಕ್ತಾರರಾದ ನವೀನ್ ರೈ, ಮಾಧವ ಮಣಿಯಾಣಿ ಕೆದಂಬಾಡಿ, ಎಸ್. ಅಬೂಬಕ್ಕರ್ ಆರ್ಲಪದವು, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ, ಉದ್ಯಮಿ ಸದಾಶಿವ ರೈ ಸೂರಂಬೈಲು, ಶಿವಾನಂದ ಮಣಿಯಾಣಿ, ನಾರಾಯಣ ನಾಯಕ್, ವರದರಾಯ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಸಂಘಟಕರಾದ ಪ್ರಸಾದ್ ಮಣಿಯಾಣಿ, ಚಂದ್ರ ಎ.ಬಿ, ಅಬ್ದುಲ್ ಅಜೀಜ್, ಧನಂಜಯ ಮಣಿಯಾಣಿ, ರಾಧಾಕೃಷ್ಣ ಸಹಕರಿಸಿದರು.  ಶ್ರೀಹರಿ ಪಾಣಾಜೆ ಸ್ವಾಗತಿಸಿ, ಪ್ರಕಾಶ್ ಕುಲಾಲ್ ವಂದಿಸಿದರು.

ಬಹುಮಾನ : ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ 36ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟದಲ್ಲಿ ವಿದ್ಯಾಶ್ರೀ ತಂಡವು ರೆಡ್‌ಸ್ಟಾರ್ ಕನಿಯಾಲ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ರೆಡ್‌ಸ್ಟಾರ್ ಕನಿಯಾಲ ತಂಡ ರನ್ನರ‍್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಎಸ್.ಎಚ್.ಎಸ್.ಗಾಡಿಗುಡ್ಡೆ ತಂಡ ಹಾಗೂ ಚತುರ್ಥ ಸ್ಥಾನವನ್ನು ಡೈನಾಮಿಕ್ ಬದಿಯಡ್ಕ ತಂಡವು ಪಡೆದುಕೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.