ಕಡಬ ಸಂಯುಕ್ತ ಕ್ರಿಸ್ಮಸ್ ಆಚರಣೆ-ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

kadaba-1ಕಡಬ: ಇಲ್ಲಿನ ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿಯ ವತಿಯಿಂದ ಡಿ.26ರಂದು ಕಡಬದಲ್ಲಿ ನಡೆಯಲಿರುವ ಸಂಯುಕ್ತ ಕ್ರಿಸ್ಮಸ್ ಆಚರಣೆಯ ಬಗ್ಗೆ ಪೂರ್ವಭಾವಿ ಸಭೆಯು ಡಿ.12ರಂದು ಕಡಬ ಬೆಥನಿ ಆಶ್ರಮದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ರಿಸ್ಮಸ್ ಆಚರಣಾ ಸಮಿತಿ ಸಂಚಾಲಕರಾದ ರೆ.ಫಾ.ಪಿ.ಕೆ. ಅಬ್ರಹಾಂ ಮಾತನಾಡಿ, ಇಂದಿನ ಸಭೆಯು ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿಯ ಅಧ್ಯಕ್ಷರಾದ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ. ಜಾರ್ಜ್ ಕಾಲಾಯಿಲ್‌ರವರ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದು ಅನಿವಾರ‍್ಯ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಈ ಸಭೆಯು ನಡೆಯುತ್ತಿದೆ. ಪ್ರತಿ ವರ್ಷ ನಡೆಯುತ್ತಿರುವಂತೆ ವಿವಿಧ ಚರ್ಚುಗಳ ಧರ್ಮಗುರುಗಳ ಸಹಭಾಗಿತ್ವದಲ್ಲಿ ವಿವಿಧ ಚರ್ಚಿನ ಆಶ್ರಯದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ‍್ಯಕ್ರಮಗಳೊಂದಿಗೆ ಉತ್ತಮ ರೀತಿಯಲ್ಲಿ ನಡೆಯುವಂತೆ ಎಲ್ಲರೂ ಸಹಕರಿಸಬೇಕೆಂದರು. ವಿವಿಧ ಸಮಿತಿಗಳ ಆಶ್ರಯದಲ್ಲಿ ವಿವಿಧ ಕಾರ‍್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕಡಬ ಸೈಂಟ್ ಪೌಲ್ಸ್ ಮಲಂಕರ ಕ್ಯಾಥೋಲಿಕ್ ಚರ್ಚಿನ ರೆ.ಫಾ.ಪೀಟರ್ ಜಾನ್ ಒ.ಐ.ಸಿ, ರೆ.ಫಾ ಕುರಿಯಕೋಸ್ ಕವಾನಾಟಿಲ್, ರೆಂಜಿಲಾಡಿ ಸಾನ್‌ತೋಮ್ ಚರ್ಚಿನ ರೆ.ಫಾ. ವರ್ಗೀಸ್ ತೋಮಸ್, ಕೆರ್ಮಾಯಿ ಚರ್ಚಿನ ರೆ.ಫಾ. ದಾನಿಯಲ್ ಕಡಗಮ್‌ಪಳ್ಳಿ, ಪದವು ಚರ್ಚಿನ ರೆ.ಫಾ ಬೆನ್ನಿ, ಆರೋಗ್ಯಮಾತ ಚರ್ಚಿನ  ರೆ.ಫಾ. ಸ್ಟಿಜೋ, ಧರ್ಮ ಭಗಿನಿ ಸಿಸ್ಟರ್ ಮರಿಯಾ, ಸೈಂಟ್ ಜೋಕಿಮ್ಸ್ ಚರ್ಚಿನ ಪಾಲನ ಸಮಿತಿ ಉಪಾಧ್ಯಕ್ಷ ಬೆಂಜಮೀನ್ ಡಿಸೋಜಾ, ಸದಸ್ಯ ಜೋಕಿಮ್ ಡಿಸೊಜಾ, ರೆಂಜಿಲಾಡಿ ಸಾನ್ ತೋಮ್ ಚರ್ಚಿನ ಆಡಳಿತ ಮಂಡಳಿ ಕಾರ‍್ಯದರ್ಶಿ ಎ.ಎಸ್.ಪೈಲಿ, ಸದಸ್ಯ ಎ.ಪಿ.ಮಾಣಿ, ಜೋಸ್ ಗಿರಿ ಚರ್ಚಿನ ಟ್ರಸ್ಟಿ ಸಂತೋಜ್ ಎನ್.ಜೆ. ಕೆರ್ಮಾಯಿ ಚರ್ಚಿನ ಟ್ರಸ್ಟಿ ವಿ.ಕೆ.ರಾಜು, ಕಡಬ ಸೈಂಟ್ ಪೌಲ್ಸ್ ಚರ್ಚಿನ ಆಡಳಿತ ಮಂಡಳಿ ಸದಸ್ಯ ಅಬ್ರಹಾಂ ಪಿ.ಸಿ., ಕಲ್ಲುಗುಡ್ಡೆ ಸೈಂಟ್ ಜಾರ್ಜ್ ಮಲಂಕರ ಚರ್ಚಿನ ಕಾರ‍್ಯದರ್ಶಿ ಯೋಹಾನನ್, ಕುಂತೂರು ಸೈಂಟ್ ಜಾರ್ಜ್ ಎಂ.ಸಿ.ಚರ್ಚಿನ ಕಾರ‍್ಯದರ್ಶಿ ಸಾಜನ್ ತೋಮಸ್, ಟ್ರಸ್ಟಿ ಇಲಿಯಾಸ್ ಸೇರಿದಂತೆ ವಿವಿಧ ಚರ್ಚ್‌ಗಳ ಪ್ರಮುಖರು ಉಪಸ್ಥಿತರಿದ್ದರು. ಕ್ರಿಸ್ಮಸ್ ಆಚರಣಾ ಸಮಿತಿಯ ಕಾರ‍್ಯದರ್ಶಿ ಉಪನ್ಯಾಸಕ ಜೋಸೆಫ್ ಟಿ.ಜೆ ಸ್ವಾಗತಿಸಿ ವರದಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.