Breaking News

ಬಾಲಮೇಳದಿಂದ ಮಕ್ಕಳ ಮನೋಸ್ಥೈರ್ಯ ಹೆಚ್ಚಾಗುತ್ತದೆ-ಭವಾನಿ ಚಿದಾನಂದ

Puttur_Advt_NewsUnder_1
Puttur_Advt_NewsUnder_1

balamelaಕೆಯ್ಯೂರು : ಕೆಯ್ಯೂರು ಗ್ರಾಮದ ಕೆಯ್ಯೂರು -ಕೈಕಂಬ ಅಂಗನವಾಡಿ ಕೇಂದ್ರದ ಬಾಲಮೇಳವು ಅಂಬೇಡ್ಕರ್ ಸಭಾಭವನ ಕೆಯ್ಯೂರಿನಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಮಿತ್ರದಿವಾಕರ ಪಲ್ಲತ್ತಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.  ಪುಟಾಣಿಗಳು ದೀಪ ಬೆಳಗಿಸುವ ಮೂಲಕ ಬಾಲಮೇಳ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ  ಮಕ್ಕಳಿಗೆ  ಬಾಲ್ಯದಲ್ಲಿ ಒಳ್ಳೆಯ ವಿಚಾರಗಳ ಬಗ್ಗೆ ತಿಳಿ ಹೇಳಬೇಕು. ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಬಹಳ ಮುಖ್ಯ, ಇದರಿಂದ ಮಕ್ಕಳ ಮನೋಸ್ಥೈರ್ಯ ವೃದ್ಧಿಗೊಳ್ಳುತ್ತದೆ ಎಂದರು. ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಧಾಕೃಷ್ಣ ಗೌಡ ಕೆಯ್ಯೂರು, ಕೆಯ್ಯೂರು ಗ್ರಾಮ ಪಂ. ಸದಸ್ಯ ಕಿಟ್ಟ ಅಜಿಲ ಕಣಿಯಾರು, ಕೆಯ್ಯೂರು ಕೆದಂಬಾಡಿ ಸಿ.ಎ.ಬ್ಯಾಂಕಿನ ಪ್ರಬಂಧಕ ಸದಾಶಿವ ಭಟ್ ಕೆಯ್ಯೂರು, ಸುಶೀಲ ದೇವಿನಗರ, ಹನ್ನತ್ ಕೆಯ್ಯೂರು, ರತ್ನಾವತಿ ಬಾಕ್ತಿಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಆಟೋಟ ಸ್ವರ್ಧೆಯಲ್ಲಿ ವಿಜೇತರಾದ ಎಲ್ಲಾ ಪುಟಾಣಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಮಧ್ಯಾಹ್ನ ಉಟೋಪಾಚರದ ವ್ಯವಸ್ಥೆ ಮಾಡಿದ್ದರು. ಅಂಗನವಾಡಿ ಕಾರ್ಯಕರ್ತೆ ಚೆನ್ನಮ್ಮ ಕಣಿಯಾರು ಸ್ವಾಗತಿಸಿ, ವಂದಿಸಿದರು, ಸಹಾಯಕಿ ಮೋಹಿನಿ.ಎಂ. ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.