ಬಡಗನ್ನೂರು ಗ್ರಾ.ಪಂ ಮಕ್ಕಳ ಗ್ರಾಮ ಸಭೆ ಬಾಲ್ಯ ವಿವಾಹದ ಬಗ್ಗೆ ಮಕ್ಕಳಲ್ಲೇ ಜಾಗೃತಿ ಅಗತ್ಯ-ಸರೋಜಿನಿ

Puttur_Advt_NewsUnder_1
Puttur_Advt_NewsUnder_1

badagannuru-sabheಪುತ್ತೂರು: ಬಡಗನ್ನೂರು ಗ್ರಾ.ಪಂ ಮಕ್ಕಳ ಗ್ರಾಮ ಸಭೆ ಡಿ.8ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಡುಮಲೆ ಶಾಲಾ ವಿದ್ಯಾರ್ಥಿನಿ ರಮ್ಯ ಎಸ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈಶ್ವರಮಂಗಲ ವಲಯ ಅಂಗನವಾಡಿ ಮೇಲ್ವಿಚಾರಕಿ ಸರೋಜಿನಿ ಮಾತನಾಡಿ ಬಾಲ್ಯ ವಿವಾಹ ಅತ್ಯಂತ ಅಪರಾಧವಾಗಿದೆ, ಈ ಬಗ್ಗೆ ಸಣ್ಣ ಮಕ್ಕಳಲ್ಲೇ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಹಲವು ಕಾನೂನುಗಳು ಇತ್ತೀಚೆಗೆ ಜಾರಿಯಾಗಿವೆ, ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಹೇಳಿದರು. ಸಂಪ್ಯ ಠಾಣಾ ಎಎಸ್ಸೈ ತಿಮ್ಮಯ್ಯ ಗೌಡ ಮಾತನಾಡಿ ಮಕ್ಕಳು ಏಕಾಂಗಿಯಾಗಿ ಹೊರಗಡೆ ಸುತ್ತಾಡಬಾರದು, ಮನೆಯಲ್ಲಿ ಅತಿಯಾಗಿ ಮೊಬೈಲ್ ಬಳಸಬಾರದು, ಅನಗತ್ಯವಾಗಿ ಟಿ.ವಿ ನೋಡಲೂ ಬಾರದು ಎಂದು ಕಿವಿ ಮಾತು ಹೇಳಿದರು. ಮಕ್ಕಳ ಮೇಲೆ ಯಾವುದೇ ದೌರ್ಜನ್ಯ, ಅನ್ಯಾಯ ನಡೆದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದ ಅವರು ಪೊಲೀಸ್ ಠಾಣೆಯೆಂದರೆ ಹೆದರಿಕೆ ಬೇಡ ಅಲ್ಲಿಗೆ ಬಂದರೆ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸಲಾಗುತ್ತದೆ ಎಂದು ಹೇಳಿದರು. ಈಶ್ವರಮಂಗಲ ಆರೋಗ್ಯ ಇಲಾಖೆಯ ರಾಜೇಶ್ವರಿ ಹಾಗೂ ಕುಂಬ್ರ ಕ್ಲಸ್ಟರ್ ಸಿ.ಆರ್.ಪಿ ಜಯರಾಮ ಭಟ್ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬಡಗನ್ನೂರು ಪ್ರಾ. ಶಾಲಾ ವಿದ್ಯಾರ್ಥಿ ನಾಯಕಿ ಆಶಿಕಾ ಫರ್ಝಾನಾ, ಗ್ರಾ.ಪಂ ಅಧ್ಯಕ್ಷ ಕೇಶವ ಗೌಡ ಕನ್ನಯ, ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ಗುರುಪ್ರಸಾದ್, ಗೋಪಾಲಕೃಷ್ಣ, ರಘುನಾಥ ರೈ, ಸವಿತಾ ಮಡ್ಯಾಲಮೂಲೆ, ವಿಜಯಲಕ್ಷ್ಮಿ, ಹೇಮಲತಾ ಸಂಪ್ಯಮೂಲೆ, ರವಿರಾಜ್ ರೈ ಸಜಂಕಾಡಿ, ಸಂಪ್ಯ ಠಾಣಾ ಸಿಬ್ಬಂದಿ ಮಧು ವೈ.ಎಂ ಉಪಸ್ಥಿತರಿದ್ದರು. ಪಿಡಿಒ ಶಾರದಾ ಕಲಾಪ ನಡೆಸಿಕೊಟ್ಟರು. ಪಡುಮಲೆ ಪ್ರಾ.ಶಾಲಾ ಮುಖ್ಯ ಶಿಕ್ಷಕ ದೇವಿಪ್ರಸಾದ್ ಸ್ವಾಗತಿಸಿದರು. ಲೆಕ್ಕ ಸಹಾಯಕ ಜಯಪ್ರಸಾದ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.