ಬಂಟ್ರ ಶಾಲಾ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

bantraಕಡಬ: ಮರ್ದಾಳ ಗ್ರಾ.ಪಂ.ವ್ಯಾಪ್ತಿಯ ಬಂಟ್ರ ಶಾಲಾ ನೂತನ ಅಡುಗೆ ಕೊಠಡಿಯನ್ನು ಡಿ.7 ರಂದು ಉದ್ಘಾಟಿಸಲಾಯಿತು. ಅಕ್ಷರದಾಸೋಹ ಅನುದಾನದಲ್ಲಿ ರೂ.3.31ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಕೊಠಡಿಯನ್ನು ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಪಿ.ವೈ ಕುಸುಮ, ಮರ್ದಾಳ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಎಂ, ಉಪಾಧ್ಯಕ್ಷೆ ಲತಾ ಕೆ.ಎಸ್, ಸದಸ್ಯರಾದ ದಾಮೋದರ ಗೌಡ ಡೆಪ್ಪುಣಿ, ಸುಲೈಮಾನ್ ಪಿ, ಹರೀಶ್ ಕೋಡಂದೂರು,  ಗಿರಿಜ, ಮೀನಾಕ್ಷಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್,  ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಬಿ, ಬಂಟ್ರ ಕ್ಲಸ್ಟರ್ ಸಿಆರ್‌ಪಿ ಪೊಡಿಯ, ಕಡಬ ವಲಯ ಮೇಲ್ವಿಚಾರಕಿ  ಹೇಮರಾಮ್‌ದಾಸ್, ಕಡಬ ಪೊಲೀಸ್ ಠಾಣಾ ಕಾನ್ಸ್ಟೇಬಲ್ ಪಂಪಾಪತಿ, ತಾ.ಪಂ.ಮಾಜಿ ಸದಸ್ಯೆ ದಿವ್ಯಾ ಬಾಲಕೃಷ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪುತ್ತಿಲ, ಕಡಬ ಗ್ರಾ.ಪಂ.ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹನೀಫ್ ಕೆ.ಎಂ, ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಕಡಬ ವಲಯ ಜೇಸಿಐ ಮಂಜುನಾಥ ಕೋಲಂತ್ತಡಿ, ಮರ್ದಾಳ ಸೈಂಟ್ ಮೇರಿ ಪ್ರೌಢಶಾಲಾ ಮುಖ್ಯಗುರು ಈಶೋ ಪಿಲಿಫ್, ಮರ್ದಾಳ ಶಾಲಾ ಮುಖ್ಯ ಶಿಕ್ಷಕಿ ದೇವಕಿ, ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ರಾಮಕೃಷ್ಣ ಮಲ್ಲಾರ, ಬಾಲಕೃಷ್ಣ ಗೌಡ ವಿನಾಯಕ, ಪ್ರಮುಖರಾದ ವಿಠಲ ಗೌಡ ಪಾಂಗ, ಪಂಚಾಯತ್ ಸಿಬ್ಬಂದಿಗಳಾದ ವಾಮನ ನಾಯ್ಕ, ಆಶಾಲತಾ, ಹಸನ್, ಸೇರಿದಂತೆ ಶಾಲಾ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ವೆಂಕಟರಮಣ ಗೌಡ ಸ್ವಾಗತಿಸಿ, ಲೆಕ್ಕಪರಿಶೋಧಕ ಭುವನೇಂದ್ರ ಕುಮಾರ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.