ತಂಬುತ್ತಡ್ಕದಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

Puttur_Advt_NewsUnder_1
Puttur_Advt_NewsUnder_1

thambuthadkaನಿಡ್ಪಳ್ಳಿ: ನವಜ್ಯೋತಿ ಯುವಕ ಮಂಡಲ ತಂಬುತ್ತಡ್ಕ ನಿಡ್ಪಳ್ಳಿ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮತ್ತು ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಕಾರದೊಂದಿಗೆ 10 ನೇ ವರ್ಷದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಹಾಗೂ ಸ್ಥಳೀಯ ತಂಡಗಳಿಂದ ಪ್ರೊ ಮಾದರಿಯಲ್ಲಿ ಕಬಡ್ಡಿ ಪಂದ್ಯಾಟ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಡಿ. 17 ರಂದು ತಂಬುತ್ತಡ್ಕ ಬಸ್ ನಿಲ್ದಾಣದ ಬಳಿ ರಾತ್ರಿ ನಡೆಯಿತು.

ಪಂದ್ಯಾಟವನ್ನು  ಪುತ್ತೂರು ಉದ್ಯಮಿ ರವೀಂದ್ರ ಶೆಟ್ಟಿ ನುಳಿಯಾಲು ಉದ್ಘಾಟಿಸಿ  ಶುಭ ಹಾರೈಸಿದರು. ಉದ್ಯಮಿ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಉದ್ಯಮಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಸಂಪ್ಯ ಪೋಲೀಸ್ ಠಾಣೆಯ ಉಪನಿರೀಕ್ಷಕ ಅಬ್ದುಲ್ ಖಾದರ್, ಪ್ರಗತಿಪರ ಕೃಷಿಕ ಜಯಂತ ರೈ ಕುದ್ಕಾಡಿ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಉದ್ಯಮಿ ಎನ್. ಸುಧಾಕರ ಶೆಟ್ಟಿ ,  ಮುಡಿಪುನಡ್ಕ ಕರ್ನಪ್ಪಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಬೆಟ್ಟಂಪಾಡಿ ಅಲ್- ಇಖ್ವಾನ ಗ್ರೂಪ್ ಕೂಟತ್ತಾನ ಇದರ ಬಿ.ಎ.ಮುಹಮ್ಮದ್ ಕುಂಞ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅವಿನಾಶ್ ರೈ ಕುಡ್ಚಿಲ, ನಿಡ್ಪಳ್ಳಿ ಗ್ರಾ.ಪಂ ಸದಸ್ಯ ಬಾಲಚಂದ್ರ ರೈ ಅನಾಜೆ, ಯುವ ಉದ್ಯಮಿ ಯೂಸುಫ಼್ ಹಾಜಿ ಕೈಕಾರ, ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ತಾಲೂಕು ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಸಲಾಂ ಪದಡ್ಕ, ಯುವಕ ಮಂಡಲದ ಅದ್ಯಕ್ಷ ಅಬ್ದುಲ್ ಅಜೀಜ್ ಟಿ.ಎಮ್,  ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಾಲಯದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾಗೇಶ  ಗೌಡ ಪುಳಿತ್ತಡಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ರಾಧಾಕೃಷ್ಣ ರೈ ಪಟ್ಟೆ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ ;  ನಿವೃತ್ತ ಶಿಕ್ಷಕ ಕೆ.ಸಿ.ಪಾಟಾಳಿ ಪಡುಮಲೆ, ಮಾಜಿ ಸೈನಿಕ ರವಿರಾಜ್ ಹೊಸಮನೆ ಕೊಂಬೆಟ್ಟು, ಪಟ್ಟೆ ಪ್ರತಿಭಾ ಪ್ರೌಢಶಾಲೆಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ, ನವೋದಯ ಪ್ರೌಢಶಾಲೆಯ ವಿದ್ಯಾರ್ಥಿ ರಾಷ್ಟ್ರ ಮಟ್ಟದ ಕ್ರೀಡಾ ಪಟು ದೀಕ್ಷಿತ್ ಕುಮಾರ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭ; ಪಂದ್ಯಾಟದ ಸಮಾರೋಪ ಸಮಾರಂಭ ಡಿ.18ರಂದು ಬೆಳಿಗ್ಗೆ ನಡೆಯಿತು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಹರೀಶ್ ಬಿಜತ್ರೆ ಬಹುಮಾನ ವಿತರಿಸಿದರು. ಭಾಸ್ಕರ ಕರ್ಕೆರ ನುಳಿಯಾಲು, ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ನಾಯ್ಕ ಕೋಡಿ, ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ, ಆಶಾ ದಿನೇಶ್ ಪೂಜಾರಿ ಕರ್ನಪ್ಪಾಡಿ, ಸತೀಶ್ ರೈ ಮುಂಡೂರು, ನಿಡ್ಪಳ್ಳಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆನಂದ ರೈ ನರೈಮಾರ್, ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಸಂಜೀವ ಪೂಜಾರಿ ಕಾನ, ಕಾಸರಗೋಡು ಉದ್ಯಮಿ ಅಬ್ದುಲ್ ಅಝೀಝ್ ಕಾನಾಜೆ, ಕ್ಲಾಸಿಕ್ ಬಾಯ್ಸ್ ರೆಂಜ ಇದರ ಅಧ್ಯಕ್ಷ ಫಾರುಕ್ TM, ಯುವಕ ಮಂಡಲದ ಕಾರ್ಯದರ್ಶಿ ಸತೀಶ್ ರೈ ನೆಲ್ಲಿಕಟ್ಟೆ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.  ಮಂಗಳೂರಿನ ದೈಹಿಕ ಶಿಕ್ಷಣ ನಿರ್ದೇಶಕ ಅಸಿಫ್ ತ್ರಿವನ್ ತ್ರಿ ಸ್ವಾಗತಿಸಿ. ನವೀನ್ ರೊಡ್ರಿಗಸ್ ವಂದಿಸಿದರು.ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ನಿರೂಪಿಸಿದರು.

ಫಲಿತಾಂಶ:  ಪ್ರೊ ಮಾದರಿ ಕಬಡ್ಡಿ ಪಂದ್ಯಾಟದಲ್ಲಿ NYT ತಂಬುತ್ತಡ್ಕ ಪ್ರಥಮ. ಕ್ಲಾಸಿಕ್ ರೆಂಜ ದ್ವಿತೀಯ. ಓಂ ಫ್ರೆಂಡ್ಸ್ ಭರಣ್ಯ ತ್ರತೀಯ. ಶಾಂತಾದುರ್ಗ ನಿಡ್ಪಳ್ಳಿ ಚತುರ್ಥ ಸ್ಥಾನ ಪಡೆಯಿತು.  ಮುಕ್ತ ಪಂದ್ಯಾಟದಲ್ಲಿ ಮಹಾದೇವಿ ಕಬಕ ಪ್ರಥಮ, ಮಹಾಲಕ್ಷ್ಮಿ ಉಡುಪಿ, ಕ್ಲಾಸಿಕ್ ರೆಂಜ ತೃತೀಯ, ಫ್ರೆಂಡ್ಸ್ ಕಡಬ ಚತುರ್ಥ ಪ್ರಶಸ್ತಿ ಪಡೆದುಕೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.