Breaking News

ಮನವಳಿಕೆಗುತ್ತು ಚಾವಡಿಯಲ್ಲಿ ಏಕನಿಶಿ ಅರ್ಧ ಏಕಾಹ ಭಜನೆ

Puttur_Advt_NewsUnder_1
Puttur_Advt_NewsUnder_1

manavalikeಆಲಂಕಾರು: ಶ್ರೀ ಪಾಂಡುರಂಗ ಭಜನಾ ಮಂಡಳಿ ಮನವಳಿಕೆಗುತ್ತುವಿನ ಆಶ್ರಯದಲ್ಲಿ ಏಕನಿಶಿ ಅರ್ಧಏಕಾಹ ಭಜನೆ ಕಾರ್ಯಕ್ರಮವು ಮನವಳಿಕೆ ಗುತ್ತು ಚಾವಡಿಯಲ್ಲಿ ದ.11ರಂದು ನಡೆಯಿತು. ಆಹ್ವಾನಿತ ಭಜನಾ ತಂಡಗಳಾದ  ಭಾರತೀ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು,  ಶಾರದಾ ಭಜನಾ ಮಂಡಳಿ ಕುಂತೂರು,  ಕಾಳಿಕಾಂಬಾ ಭಜನಾ ಮಂಡಳಿ ಮನವಳಿಕೆ, ಉಮಾಮಹೇಶ್ವರೀ ಭಜನಾ ಮಂಡಳಿ ಬಲ್ಯ,  ಶಾರದಾಂಬಾ ಭಜನಾ ಮಂಡಳಿ ಶಾರದಾ ನಗರ, ದುರ್ಗಾಪರಮೇಶ್ವರೀ ಭಜನಾ ಮಂಡಳಿ ಕೆಮ್ಮಾರ, ರಾಮ ಭಜನಾ ಮಂಡಳಿ ತುಂಬೆತ್ತೋಡಿ ಹಾಗೂ ಆದಿಶಕ್ತಿ ಭಜನಾ ಮಂಡಳಿ ಶರವೂರು  ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನಾ ಕಾರ್ಯಕ್ರಮಕೆ ಮೆರಗು ನೀಡಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಗುತ್ತು ಮಾತನಾಡಿ ಹಿರಿಯರ ಕಾಲದಿಂದಲೂ ಸುಮಾರು 100  ವರ್ಷಗಳಿಂದ ಮನವಳಿಕೆ ಗುತ್ತು  ಚಾವಡಿಯಲ್ಲಿ ಮನವಳಿಕೆ ಗುತ್ತು ಕುಟುಂಬದ ವತಿಯಿಂದ ಭಜನಾ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಿಂದ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಕಲಿಯುಗದಲ್ಲಿ ದೇವರನ್ನು ಒಲಿಸಲು ಭಜನೆಯೊಂದು ಅತ್ಯಂತ ಸುಲಭ ಸಾಧನ ಎಂದರು. ಶ್ರೀ ಪಾಂಡುರಂಗ ಭಜನಾ ಮಂಡಳಿಯ ಅಧ್ಯಕ್ಷ ರಾಧಾಕೃಷ್ಣ ರೈ ಮನವಳಿಕೆ ಗುತ್ತು ಮಾತನಾಡಿ ಪ್ರತಿ ಮನೆ ಮನೆಯಲ್ಲೂ ಭಜನೆ ನಡೆದರೆ ಕುಟುಂಬ ವಿಭಜನೆಯಾಗಲ್ಲ ಎಂದು ಹೇಳಿ ಭಜನಾ ತಂಡಗಳನ್ನು ಸ್ವಾಗತಿಸಿದರು, ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ರೈ ಎಂ. ಆಗಮಿಸಿದ ಭಜನಾ ತಂಡಗಳಿಗೆ ಕೃತಜ್ಞತೆ ಸಲ್ಲಿಸಿದರು, ಭಜನಾ ಮಂಡಳಿಯ ಕಾರ್ಯದರ್ಶಿ ಸುಧಾಕರ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮನವಳಿಕೆ ಗುತ್ತು ಯಜಮಾನ ರಘುನಾಥ ರೈ ಮತ್ತು ಕುಟುಂಬಸ್ಥರು, ಭಜನಾ ಮಂಡಳಿ ಜೊತೆಕಾರ್ಯದರ್ಶಿ ಮುರಳೀಧರ ರೈ, ಹಾಗೂ ಊರ ಪರವೂರ ಭಕ್ತರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.