Breaking News

ಮೇನಾಲ ಶಾಲೆಯಲ್ಲಿ ಜನಜಾಗೃತಿ ಮಕ್ಕಳ ಅಪಹರಣದ ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ -ಎ.ಎಸ್.ಐ. ತಿಮ್ಮಯ್ಯ

Puttur_Advt_NewsUnder_1
Puttur_Advt_NewsUnder_1

 

menalaಪುತ್ತೂರು: ಮೇನಾಲ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಈಶ್ವರಮಂಗಲ ಹೊರವಲಯ ಪೊಲೀಸ್ ಠಾಣಾ ಎ.ಎಸ್.ಐ. ತಿಮ್ಮಯ್ಯ ಮಾತನಾಡಿ, ಮಕ್ಕಳ ರಕ್ಷಣೆಯಲ್ಲಿ ಪೋಷಕರ ಪಾತ್ರ, ಜವಾಬ್ದಾರಿ ಕುರಿತು ಮಾಹಿತಿ ನೀಡಿ, ಮಕ್ಕಳ ಅಪಹರಣದ ಬಗ್ಗೆ ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಎಚ್ಚರಿಸಿದರು. ನೆ.ಮುಡ್ನೂರು ಗ್ರಾ.ಪಂ. ಸದಸ್ಯ ಕೆ.ಎಂ. ಮಹಮ್ಮದ್ ಕುಂಞಿ ಮಾತನಾಡಿ, ಮಕ್ಕಳ ಸುರಕ್ಷತೆಯಲ್ಲಿ ಪೋಷಕರ ಜವಾಬ್ದಾರಿ ಮಹತ್ತರವಾದದ್ದು, ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಬೇಕು. ಅವರ ಮನಸ್ಸು ಅರಿಯಬೇಕು ಎಂದರು. ಶಾಲಾ ಮುಖ್ಯಗುರುಗಳಾದ ಸಂಜೀವ ಎಂ. ಮಾತನಾಡಿ, ಶಿಕ್ಷಕರು ಮಕ್ಕಳ ಬಗ್ಗೆ ತೆಗೆದುಕೊಳ್ಳುವ ಜವಾಬ್ದಾರಿಯ ಜೊತೆಗೆ ಪೋಷಕರೂ ಕೈಜೋಡಿಸಿದಾಗ ಮಕ್ಕಳು ಸುರಕ್ಷಿತರಾಗುತ್ತಾರೆ ಎಂದರು.

ವೇದಿಕೆಯಲ್ಲಿ ನೆ.ಮುಡ್ನೂರು ಗ್ರಾ.ಪಂ. ಸದಸ್ಯೆ ಲಲಿತ ಸುಧಾಕರ, ಆರಕ್ಷಕರಾದ ಕುಂಞಣ್ಣ, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿಯರಾದ ಚಂಚಲಾಕ್ಷಿ, ಉಮಾವತಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ ಮೇನಾಲ ಉಪಸ್ಥಿತರಿದ್ದರು.

ಶಿಕ್ಷಕಿ ರೇವತಿ ಕೆ. ಸ್ವಾಗತಿಸಿ, ಶಿಕ್ಷಕ ವೆಂಕಟ್ರಮಣ ಎನ್. ವಂದಿಸಿದರು. ಶಿಕ್ಷಕ ಹರೀಶ್ ಕುಮಾರ್  ವೈ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರೂ, ವಿದ್ಯಾರ್ಥಿ ಗಳೂ, ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು. ಶಿಕ್ಷಕಿಯ ರಾದ ವಾಣಿ ಕೆ., ಸಾವಿತ್ರಿ, ಶಿಲ್ಪಾ ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.