ಪೆರಾಬೆ: ಪೂಂಜ 40 ಮನೆಗಳಿಗೆ  ಕುಡಿಯುವ ನೀರು ಪೂರೈಸಲು ಮನವಿ

 

perabeಪೆರಾಬೆ: ಇಲ್ಲಿನ ಪೂಂಜ ವ್ಯಾಪ್ತಿಯ 40 ಮನೆಗಳಿಗೆ ಕಳೆದ 20 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದೇ ತೊಂದರೆಯಾಗಿದ್ದು, ಈ ಬಗ್ಗೆ ಗಮನಹರಿಸಿ ಸಮಸ್ಯೆ ಸರಿಪಡಿಸಿಕೊಡುವಂತೆ ಬಳಕೆದಾರರು ಗ್ರಾ.ಪಂ.ಅಧ್ಯಕ್ಷೆ ಬೇಬಿ ಸಿ ಪಾಟಾಳಿ, ನೀರು ಸರಬರಾಜು ಸಮಿತಿ ಅಧ್ಯಕ್ಷ ಚಂದ್ರಶೇಖರ ರೈಯವರಿಗೆ ಮನವಿ ಮಾಡಿದರು.

ಪೂಂಜ ಕುಡಿಯುವ ನೀರಿನ ಘಟಕದ ನೀರು ನಿರ್ವಾಹಕರಾದ ಇಕ್ಬಾಲ್‌ರವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬದಲಿ ನೀರು ನಿರ್ವಾಹಕರ ನೇಮಕವಾಗದೇ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ 40 ಮನೆಗಳಿಗೆ ನೀರು ಸರಬರಾಜು ಆಗದೇ ದೈನಂದಿನ ಜೀವನಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಸರಿಪಡಿಸುವಂತೆ ಬಳಕೆದಾರರು ಗ್ರಾ.ಪಂ.ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಗ್ರಾ.ಪಂ.ಅಧ್ಯಕ್ಷೆ ಬೇಬಿ ಸಿ ಪಾಟಾಳಿ, ನೀರು ಸರಬರಾಜು ಸಮಿತಿ ಅಧ್ಯಕ್ಷ ಚಂದ್ರಶೇಖರ ರೈಯವರು, ಈ ಹಿಂದೆ ನೀರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಕ್ಬಾಲ್‌ರ ಜೊತೆ ಮಾತುಕತೆ ನಡೆಸಿ, ಬದಲಿ ನೀರು ನಿರ್ವಾಹಕರ ನೇಮಕ ಆಗುವ ತನಕ ಕರ್ತವ್ಯ ನಿರ್ವಹಿಸುವಂತೆ ಮನವೊಲಿಸಿದರು. ಇದಕ್ಕೆ ಒಪ್ಪಿದ ಇಕ್ಬಾಲ್‌ರವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಡ್ಯಾಮೇಜ್ ಆಗಿರುವ ಪೈಪ್‌ಲೈನ್ ಗ್ರಾ.ಪಂ.ವತಿಯಿಂದ ದುರಸ್ತಿಪಡಿಸಿಕೊಡುತ್ತೇವೆ. ಪಂಪು, ಪೈಪು ರಿಪೇರಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಜಿ.ಪಂ. ಮುಖ್ಯ ಕಾರ‍್ಯನಿರ್ವಾಹಣಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಹನೀಫ್ ನೂಜಿಲ, ಅಮೃತಾ ರೈ ಪಟ್ಟೆ, ಸ್ಥಳೀಯರಾದ ಇಕ್ಬಾಲ್ ಮುಡಿಪ್ಪಿನಡ್ಕ, ಹನೀಫ್ ಮುಡಿಪ್ಪಿನಡ್ಕ, ಜಾಫರ್ ಕಜೆ, ಹಾದಿ ಪಿ.ಎ,, ಸಮದ್ ಪಿ.ಎ., ಹಮೀದ್ ಎ.ಕೆ., ಬಶೀರ್ ಮುಡಿಪ್ಪಿನಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.