Breaking News

ಪುತ್ತೂರು ಬದ್ರಿಯಾ ಮಸೀದಿಯಲ್ಲಿ ಮಿಲಾದ್ ಧ್ವಜಾರೋಹಣ-ಮಕ್ಕಳ ಸ್ಪರ್ಧಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

badriya1badriya2ಪುತ್ತೂರು: ಪುತ್ತೂರು ಬದ್ರಿಯಾ ಮಸೀದಿಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮ ದಿನಾಚರಿಸಲಾಯಿತು. ಬೆಳಿಗ್ಗೆ ಧ್ವಜಾರೋಹಣವನ್ನು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಯು. ಅಬ್ದುಲ್ಲಾ ಹಾಜಿರವರು ನೆರವೇರಿಸಿ ಮಾತನಾಡಿ, ಪ್ರವಾದಿಯವರ ಜೀವನ ಕ್ರಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.

ದುವಾಶೀರ್ವಚವನ್ನು ನೆರವೇರಿಸಿದ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿರವರು ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರರವರ ಆದರ್ಶ ತೆ ನಮಗೆಲ್ಲಾ ದಾರಿದೀಪವಾಗಿದೆ. ಅವರ ಒಂದೊಂದು ನುಡಿ ಮುತ್ತುಗಳು ನಮ್ಮ ನಿತ್ಯ ಜೀವನ ಕ್ರಮವಾಗಿದೆ. ಅವರು ತೋರಿದ ಸನ್ಮಾರ್ಗದಲ್ಲಿ ಮುನ್ನಡೆಯುವಂತಾಗಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅನ್ಸಾರುದ್ದೀನ್ ಜಮಾ ಅತ್ ಕಮಿಟಿಯ ಉಪಾಧ್ಯಕ್ಷ ಯಾಕೂಬ್ ಹಾಜಿ ದರ್ಬೆ, ಅಬ್ದುಲ್ ಹಮೀದ್ ಲೌಲಿ, ಎಂ.ಎ. ಹುಸೈನ್ ಕೆನರಾ, ಅಬ್ದುಲ್ ರಹಿಮಾನ್ ಅಝಾದ್, ಅಬ್ದುಲ್ ಖಾದರ್ ಅದ್ದಿ, ಹೈದರ್ ಹಾಜಿ, ಪಿ.ಬಿ. ಹಸನ್ ಹಾಜಿ, ನೂರುದ್ದೀನ್ ಸಾಲ್ಮರ, ಇಸ್ಮಾಯಿಲ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು. ಮದ್ರಸ ಅಧ್ಯಾಪಕರುಗಳಾದ ಉಮ್ಮರ್ ಫಾರೂಕ್ ಅರ್ಷದಿ, ಇಬ್ರಾಹಿಂ ಮುಸ್ಲಿಯಾರ್ ಸಾಲ್ಮರ, ಮಸೀದಿಯ ಸಹಾಯಕ ಹುಸೈನಾರ್ ಯಾಹ್ಯಾ ಮೊದಲಾದವರು ಉಪಸ್ಥಿತ ರಿದ್ದರು.

ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯ ದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶೇಖ್ ಜೈನುದ್ದೀನ್ ವಂದಿಸಿದರು. ಬಳಿಕ ಮದ್ರಸ ಮಕ್ಕಳ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಪುತ್ತೂರು ಮುದರ್ರಿಸ್ ಅಸಯ್ಯದ್ ಅಹಮ್ಮದ್ ಪೂಕೋಯ ತಂಙಳ್‌ರವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಜರಗಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.